Posts

Showing posts from 2012

ರಾಗಾನ್ವೇಷಣೆ

ಎಲ್ಲೋ ಗುನುಗಿದ ಹಾಡು ಕೂಗಿತು
ತನ್ನ ಬಳಿಗೆ ನನ್ನನು
ಎಂದೂ ಮರೆಯದ ರಾಗ ತಟ್ಟಿತು
ನನ್ನ ಮನಸಿನ ಕದವನು

ಕರೆದ ಹಾಡ ಹುಡುಕಿ ಹೊರಟೆನು
ಕಾಡು ಗುಡ್ಡದ ಪಥದಲಿ
ಮರೆತೇ ಹೋಯಿತು ರಾತ್ರಿ ಹಗಲು
ಅನ್ವೇಷಣೆಯ ಭರದಲಿ

ಕುಸುಮ ಗಂಧವು,ಎಲೆ ಎಸರು
ತಂಪ ನೀಡಿತು ಪಯಣದಿ
ಕಲ್ಲು ಮುಳ್ಳು,ಮೃಗಜಂತು
ಬಂದು ಹೋದವು ಸಂಗದಿ

ದಾಟಿದ ನದಿಗಳೆಷ್ಟೋ
ನೆಡೆದ ಮೈಲುಗಳೆಷ್ಟೋ
ಕರ್ಮ ಸವೆಯಿತು ದೇಹ ದಣಿಯಿತು
ಕಳೆದ ದಿನದ ಜೊತೆಯಲಿ

ಕಾಲ ಬಂದಿತು ಜೀವಹೊರಟಿತು
ಮಗದೊಂದು ಪಯಣದ ಪಥದಲಿ
ಕರೆದ ರಾಗದ ರಾಗವಾಗುವೆ
ಎಂಬ ನಂಬುಗೆಯ ಜೊತೆಯಲಿ

ಎಲ್ಲೋ ಗುನುಗಿದ ಹಾಡು ಕೂಗಿತು
ತನ್ನ ಬಳಿಗೆ ನನ್ನನು
ಎಂದೂ ಮರೆಯದ ರಾಗ ತಟ್ಟಿತು
ನನ್ನ ಮನಸಿನ ಕದವನುಡ್ರಾಮ ತದರಿನನ.........

"ಬೊಂಬೆಯಾಡ್ಸೋನು ಮ್ಯಾಲೆ ಕುಂತವ್ನೆ ನಮ್ಗೆ ನಿಮಗೆ ಯಾಕೆ ಟೆನ್ಸನ್ನು"

ನಮಸ್ಕಾರ ಗೆಳೆಯರೆ,ಮೇಲಿನ ಸಾಲು ನೊಡುತ್ತಿದ್ದಂತೆ ನಿಮಗೆ ಡ್ರಾಮ ಚಿತ್ರ ನೆನಪಾಗುತ್ತೆ ಅಲ್ವ.ಹೌದು ಗೆಳೆಯರೆ ನಾನು ಈ ಮೂಲಕ ಚಿತ್ರದ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳುವ ಒಂದು ಚಿಕ್ಕ ಪ್ರಯತ್ನವನ್ನ ಮಾಡುತ್ತಿದ್ದೇನೆ.

ಯೋಗರಾಜ್ ಭಟ್ರ "ಡ್ರಾಮ" ಚಿತ್ರ ಶುಕ್ರವಾರ ಬಿಡುಗಡೆ ಆಗಿತ್ತು.ಆಗಲೇ ಬಹು ನಿರೀಕ್ಷೆಯನ್ನು ಹೊತ್ತು ನಿಂತಂತಹ ಚಿತ್ರ ಅದು.
ಹಾಡುಗಳ ವಿಚಾರ,ಸಾರರಹಿತ ಚಿತ್ರ,ಬಿಟ್ಟಿ ಸಂಭಾಷಣೆ ಇಂತಹ ಹಲವಾರು ನಿಂದನೆಗಳು ಮತ್ತು ಅವರ ಚಿತ್ರಗಳನ್ನ ನೋಡಿ ಹಲವು ಪ್ರಶ್ನೆಗಳ ಉತ್ತರಕ್ಕೆ ಕಾಯುತ್ತಿದ್ದವರಿಗೆ ಈ ಚಿತ್ರವಾದರು ಉತ್ತರ ನೀಡಬಹುದೇ ಎಂದು ಕಾಯುತ್ತಿದ್ದೆ.ಆದರೆ ಭಟ್ರು ಒಂದು ಮಟ್ಟಿಗೆ ಎಲ್ಲಕ್ಕೂ ಉತ್ತರಿಸುವಲ್ಲಿ ಗೆದ್ದಿದ್ದಾರೆ.ಡ್ರಾಮ ಗೆದ್ದಿದೆ.

ಭಟ್ರು ಮತ್ತೊಮ್ಮೆ ನನಗೆ ಕಥೆಗಿಂತ ಪಾತ್ರಪೋಷಣೆಯೇ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ.ಹೌದು ಭಟ್ರ ಎಲ್ಲಾ ಚಿತ್ರಗಳಲ್ಲೂ ಕಥೆಗಿಂತ ಪಾತ್ರ ಪೋಷಣೆಯೇ ಮುಖ್ಯವಾಗಿರುತ್ತೆ ಈ ಚಿತ್ರದಲ್ಲಿ ಬರುವಂತಹ ಪ್ರತಿಯೋಂದು ಪಾತ್ರಗಳಿಗೆ ಅದರದೇ ಆದಂತಹ ಅರ್ಧ ಮತ್ತು ಉದ್ದೇಶಗಳಿವೆ.ಭಟ್ರು ಪ್ರತಿಯೊಂದು ಪಾತ್ರಗಳಿಗೂ ಸಹ ನ್ಯಾಯ ಒದಗಿಸಿವಲ್ಲಿ ಗೆದ್ದಿದ್ದಾರೆ.
ಭಟ್ರ ಚಿತ್ರಗಳಲ್ಲಿ ಖುಷಿಯವಿಚಾರವೆಂದರೆ ಕಾಂಕ್ರೀಟ್ ಕಾಡಿನಿಂದ ದೂರ ಹೋಗಿ ಹಳ್ಳಿಗಳಲ್ಲಿ  ಚಿತ್ರಿಸುವ ಬಗೆ. ಹಳ್ಳಿಗಳ ಸೌಂದರ್ಯ…

ಮಲಗೇ ಇದ್ದಾರೆ ನನ್ನ ಜನ

ಅಂದು ನಿದ್ರಿಸಿದ ಜನ ಇನ್ನೂ ಮಲಗೇ ಇದ್ದಾರೆ
ಬೆಳಗು ಕಳೆಯಿತು,ರಾತ್ರಿ ಕಾಡಿತು,ಭೂತ ಸುತ್ತಿತು
ಪಿಶಾಚಿ ಅರಚಿತು,ನಾಯಿ ಗೀಳಿಟ್ಟಿತು,
ಇನ್ನೂ ಮಲಗೇ ಇದ್ದಾರೆ ನನ್ನ ಜನ

ಊರ ಕಳ್ಳ ಊರನ್ನೇ ದೊಚಿದ
ಮನೆಯವ ಮನೆಯನ್ನೇ ಮುರಿದ
ಆಳುವವ ತುಳಿದ,ಬೇಡುವವ ಮಡಿದ ಮಡಿದವ ಸತ್ತ
ಇನ್ನೂ ಮಲಗೇ ಇದ್ದಾರೆ ನನ್ನ ಜನ

ಇನ್ನೂ ಮಲಗೇ ಇದ್ದಾರೆ ಕನಸ ಹೆಣೆಯುತ
ಹರಿದ ಹಾಸಿಗೆ,ಅರಿವೆಯ ಹೊದಿಕೆ,
ದೊಡ್ಡ ರಂಧ್ರದ ಮಾಳಿಗೆ,ಚಿಕ್ಕ ಬೆಳಕಿನ ಆಸರೆ
ಮೂಲೆಯಲ್ಲೆಲ್ಲೋ ಪುಸ್ತಕದ ಗೊಡವೆ,
ಗೊಡವೆಯಲ್ಲೊಂದಿಷ್ಟು ಇಲಿಜಿರಲೆ
ಬಾಗಿಲನೂ ತೆರೆಯದೆ ಇನ್ನೂ ಮಲಗೇ ಇದ್ದಾರೆ ನನ್ನ ಜನ

ಮುರಿದು ಬಿದ್ದಿದೆ ನಮ್ಮನ್ನು ಎತ್ತಬೇಕಾದ್ದು,
ಹರಿದು ಹರಡಿದೆ ನಮ್ಮನ್ನು ಪೋಶಿಸ ಬೇಕಾದ್ದು,
ಕೂಗಿ ಕರೆದಿದೆ ಆರದ ಗಜಗಟ್ಟಲೇ ನಿಕ್ಷೇಪ,
ಕೇಳುವವರಿಲ್ಲ,ನೋಡುವವರಿಲ್ಲ,ಮಾಯೆಯಲಿ ಮುಳುಗಿ
ಮಲಗೇ ಇದ್ದಾರೆ ನನ್ನ ಜನ ಇನ್ನೂ ಮಲಗೇ ಇದ್ದಾರೆ
ರಾಜನಾಗುವ ಆಸೆ,ಕಾಂಚಣವ ಕಾಮಿಸುವಾಸೆ,
ಜೀವನವ ದೂಡುವಾಸೆ,ಅನ್ನವ ದೋಚುವಾಸೆ
ಪರದೇಶಿಗಳಿಗೆ ದಾಸನಾಗುವಾಸೆ,ವಿದ್ಯೆ ಮಾರುವಾಸೆ
ರಕ್ತ ಹೀರುವಾಸೆ,ಬೆನ್ನೆಲುಬಿಗೇ ಮೆಟ್ಟುವಾಸೆ
ಇನ್ನೂ ನಿದ್ರಿಸುವಾಸೆ ಅರಿವೆಯ ಸರಿಮಾಡಿ ಇನ್ನೂ ನಿದ್ರಿಸುವಾಸೆ

ಎಬ್ಬಿಸಿದವರ ನೋಡು,ಮಾರ್ಗದರ್ಶಿಸಿದವರ ನೋಡು,
ಸತ್ಯ ತೋರಿಸಿದವರ ನೋಡು,ಇತಿಹಾಸ ತತ್ವವ ನೋಡು
ನಿನ್ನ ಮಂಪರ ಹೊರದೂಡು
ಕಣ್ಣಹಾಯಿಸು ಹಿಂದೋಂದು ಸಲ,ಮುಂದೋಂದು ಸಲ
ಘರ್ಜಿಸು ಮುಕ್ತ ಕಂಠದಲಿ,ಸಪ್ತ ಸಮುದ್ರ ದಾಟಲಿ
ಆಕಾಶ ಚಿಕ್ಕದ…
ಮಳೆ ಮುಗಿದ ಹೊತ್ತಿನ ಆ ಮಂಜಿನ ಚಳಿಗೆ,ನಡುಗುವ ತುಟಿಗೆ
ಬೆಚ್ಚನೆಯ ಕಾಫಿಯ ಸ್ಪರ್ಶವೇ ಮಧುರ
ನೀ ಬಂದು ಹೋದ ಕ್ಷಣದ ಮತ್ತಿಗೆ ಆ ವಿರಹಕೆ
ನನ್ನ ಬೆಚ್ಚನೆಯ ಕಣ್ಣೀರೇ ಉತ್ತರ ಗೆಳತಿ
ಕಣ್ಣೀರೇ ಉತ್ತರ

ಪ್ರೀತಿಯ ಸವಾರಿ

ನಿಮ್ಮ ಪ್ರೀತಿಯ ರಾಜ್ಯದಿ ನೀವಲ್ಲ ಬೇಡುವ ಬಿಕಾರಿ
ಮೆರೆಯಿರಿ ನೀವು ಕರ್ಣನಂತೆ ಅರಸಾಗಿ
ಪ್ರತಿ ದಿನವು ನೆಡೆಸಿರಿ ಜಂಬೂಸವಾರಿ
ನಿಮ್ಮ ಆಸೆ ಎಂಬ ಆನೆಗಳು
ಸುಖ ಶಾಂತಿ ಕಾರುಣ್ಯಗಳ ಅಂಬಾರಿಯೊಳಗೆ
ಪ್ರೀತಿಯೆಂಬ ದೇವರನ್ನು ಹೊತ್ತು
ನಿಮ್ಮ ಮನವೆಂಬ ರಾಜಬೀದಿಯೊಳು
ರಾಜಗಾಂಬೀರ್ಯದಿ ನೆಡೆಯುತಿರಲು
ಜಗವೆಲ್ಲ ನೋಡುವರು ನಿಮ್ಮ ಸವಾರಿ
ನೋಡಿ ನೆಡೆಸುವರಿನ್ನೊಂದು ಸವಾರಿ
ಅವರ ಪ್ರೀತಿಯ ರಾಜ್ಯದಿ
ಅವರವರ ಪ್ರೀತಿಯ ರಾಜ್ಯದಿ
€ರಾಜ್¥

ಸ್ವಾಮಿ ವಿವೇಕಾನಂದರಿಗೊಂದು ಪತ್ರ“ಯಾವ ನಾಡು ಕಲ್ಲು ಬಂಡೆಗಿಂತಲು ಹೆಚ್ಚಾಗಿ ತನ್ನ ತಳವನ್ನೂರಿದೆಯೋ,ಯಾವ ನಾಡು ತನ್ನ ಅತ್ಯಧ್ಬುತ ಶಕ್ತಿಯಿಂದ ಪ್ರಕಾಶಿಸುತ್ತಿದೆಯೋ.ಯಾವ ನಾಡಿನ ಜೀವ ಆದಿ ಅಂತ್ಯಗಳಿಲ್ಲದ ಪರಮಾತ್ಮನಿಗೆ ಸಮವಾಗಿದೆಯೋ ಆಂತ ನಾಡಿನ ಮಕ್ಕಳು ನಾವು,ಭಾರತದ ಮಕ್ಕಳು ನಾವು”.ಸ್ವಾಮೀಜಿ ನಿಜಕ್ಕೂ ನಿಮ್ಮ ಮಾತುಗಳು ಸತ್ಯ, ಭಗವಂತ ನಮಗೆ ಕೊಟ್ಟಂತಹ ಬಹು ದೊಡ್ಡ ಉಡುಗೊರೆ ನಮ್ಮನ್ನು ಭಾರತದಂತಹ ದೇಶದಲ್ಲಿ ಹುಟ್ಟಿಸಿದ್ದು.ಇಲ್ಲಿಯ ಸಂಸ್ಕೃತಿ,ಸಹಬಾಳ್ವೆ,ಋಷಿಗಳ ಮಾರ್ಗದರ್ಶನ,ಹಿರಿಯರ ಆರ್ಶೀವಾದ ಎಲ್ಲವೂ ನಮ್ಮ ಬಾಳ ಉದ್ದಕ್ಕೂ ದಾರಿದೀಪವಾಗಿದೆ.ಆದರೂ ಸ್ವಾಮೀಜಿ ಮತ್ತೊಮ್ಮೆ ನಿಮ್ಮ ಅಗತ್ಯ ಈ ಭಾರತಕ್ಕಿದೆ. ಸ್ವಾಮೀಜಿ ನನ್ನ ದೇಶದಲ್ಲೀಗ ಬ್ರಷ್ಟಾಚಾರ ತಾಂಡವವಾಡುತ್ತಿದೆ,ಪಾಶ್ಚಾತ್ಯ ಸಂಸ್ಕೃತಿಗೆ ಜನರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ,ಬೇರೆಯವರ ತಲೆಒಡೆದು ಬದುಕುವುದನ್ನು ಜನರು ರೂಡಿಸಿಕೊಳ್ಳುತ್ತಿದ್ದಾರೆ,ಯುವ ಜನತೆ ದೇಶವನ್ನು ಕಟ್ಟುವ ಬದಲು ತಮ್ಮ ಜೀವನದ ಕಾಮನೆಗಳ ವ್ಯಸನಿಗಳಾಗುತ್ತಿದ್ದಾರೆ,ಬಿಡಿಗಾಸಿಗೋಸ್ಕರ ಆಳುವವರು ಅವರನ್ನು,ಅವರಿಗೆ ಆಶ್ರಯ ನೀಡಿದ ಅವರ ತಾಯಿ ಭಾರತಿಯನ್ನು ಮಾರಿಕೊಳ್ಳುತ್ತಿದ್ದಾರೆ,ನ್ಯಾಯ ಶಾಸ್ತ್ರವನ್ನೇ ರಚಿಸಿದ ನಾಡಿನಲ್ಲಿ ಸಾಮಾನ್ಯನ ನ್ಯಾಯದ ಹಂಬಲದ ಆಕ್ರಂದನ ಮುಗಿಲುಮುಟ್ಟುತ್ತಿದೆ,ನನ್ನ ಸೈನಿಕರನ್ನು ಗುಲಾಮರಂತೆ ನೋಡುತ್ತಿದ್ದಾರೆ,ನನ್ನ ಕನಸಿನ ಭಾರತ ಒಡೆದ ಕನ್ನಡಿಯಂತಾಗಿದೆ,ನನ್ನ ತಾಯಿ ಭಾರತ…
ನನ್ನ ಮನದ ಆಳದಲ್ಲಿ  ನಿನ್ನದೇನೆ ಕಂಪನ
ಕಂಪನದಿ ಕಂಪಿಸಿತು ನನ್ನ ಈ ಮನ 

ಹೃದಯವೆಂಬ ರಂಗಮಂಚದಲಿ ನಿನ್ನದೇನೆ ಕಾರುಬಾರು
ಕನಸುಗಳ ಒಡೆತನಕ್ಕೆ ಸೇವಕನು ನಾನು 

ನಿರಾಕಾರಕ್ಕು ಆಕಾರ ತರಿಸುವ ನಿನ್ನ ಮಾಯೆಗೆ ಮರುಳನಾಗಿಹೆ ನಾನು
ಮರಳಿಸು ಎನನ್ನು ನನ್ನ ಜೊತೆಗೆ ನಾನು

ನಿನ್ನ ಮೇಲಿನ ಮೋಹ  ಇಂದ್ರಜಾಲವೋ ಎನೋ 
ಮೂಕವಿಸ್ಮಿತನಾಗಿಹೆ 

ನಿನ್ನ ಒಳಗೆ ನಾನು 
ನಿನ್ನ ಒಳಗೆ ನಾನು

ಪ್ರೀತಿಯ ಮಳೆ

ಸುರಿಯುತಿರುವ ಈ ಜಡಿ ಮಳೆಯು ಕೆದುಕುತಿಹುದು ಮನವೆಂಬ ಜಲಾಶಯವ
ಹುಟ್ಟುವ ಭಾವನೆಗಳೆಷ್ಟೋ,ಬರುವ ಯೋಚನೆಗಳೆಷ್ಟೋ,ಈಡೇರುವ ನೆನಪುಗಳೆಷ್ಟೋ,
ಈ ಸಂಭ್ರಮದಲಿ
ಮರೆಯಲಾರದ ನನ್ನವಳ ನೆನಪುಗಳೆಷ್ಟೋ ಆಡಿದ ಪಿಸುಮಾತುಗಳೆಷ್ಟೋ,
ತೀರದ ದಾಹವ ತಣಿಸಲು ಮೀಯಬೇಕು ಇನ್ನು
ಈ ಮಳೆಯಲಿ ಮಳೆಯ ಸಿಂಚನದಲಿ
ಶ್ರೀ ಶಂಕರಮ್ ಲೋಕ ಶಂಕರಮ್    ಭಾರತ ಇತಿಹಾಸದಲ್ಲಿ ನಾವುಗಳು ಅದೆಷ್ಟೋ ವೀರರನ್ನು,ವೈರಾಗಿಗಳನ್ನು,ಸಾಹಸಿಗರನ್ನು,ದೇಶಭಕ್ತರನ್ನು ನೋಡಿದ್ದೇವೆ. ಆದ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ಭಾರತ,ಜಗತ್ತಿಗೆ ಅದೆಷ್ಟೋ ಮಂದಿ ರ್ದಾರ್ಶನಿಕರನ್ನು,ಪಂಡಿತರನ್ನು,ಸಂತರನ್ನು ನೀಡಿದೆ. ಆದರೆ ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾರ್ಚಾರ್ಯರು. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,ಎಂಟನೇ ವಯಸ್ಸಿನಲ್ಲಿ ವೇದ,ಮೀಮಾಂಸ,ಶಾಸ್ತ್ರಗಳಲ್ಲಿ ಪಾಂಡಿತ್ಯ,ಹನ್ನೆರಡನೇ ವಯಸ್ಸಿನಲ್ಲಿ ಜಗತ್ತು ಮಿತ್ಯವೆಂದು ಅರಿತು ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ ಮಹಾನುಭಾವರು ಶ್ರೀ ಶಂಕರ ಭಗವದ್ಪಾದರು. ಶ್ರೀ ಶಂಕರಾರ್ಚಾರ್ಯರ ಇಡೀ ಜೀವನ ಮಾನವ ಜನಾಂಗದ ಉದ್ದಾರಕ್ಕಾಗಿಯೇ ಮುಡಿಪಾಗಿತ್ತು. ವೇದೋಪನಿಷತ್ಗಳಲ್ಲಿರುವ ಸಾರವನ್ನು ಸಾಮಾನ್ಯ ಜನರಿಗೆ ಅರ್ಧವಾಗುವಂತೆ ಆಡು ಭಾಷೆಯಲ್ಲಿ ಹೇಳಿ ಜೀವನ ದರ್ಶನ ಮಾಡಿಸಿದ ಮಹಾನುಭಾವರು ಶ್ರೀ ಶಂಕರಾರ್ಚಾರ್ಯರು.ಶ್ರೀ ಶಂಕರರ ಇಡೀ ಜೀವನವೇ ಈಗಿನ ಜನಾಂಗಕ್ಕೆ ಆದರ್ಶಪ್ರಾಯವಾದುದು. ಒಬ್ಬ ಸಂನ್ಯಾಸಿಯ ಜೀವನದಿಂದ ಲೌಕಿಕ ಜೀವನ ನಡೆಸುತ್ತಿರುವ ನಮ್ಮಂತಹ ಜನರಿಗೆ ಉಪಯೋಗವೇನು? ಇದು ಎಷ್ಟೋ ಮಂದಿ ಜನರಲ್ಲಿ ಹುಟ್ಟವ ಪ್ರಶ್ನೆ. ಆದರೆ ಶ್ರೀ ಶಂಕರರು ಬಾಳಿದ ಪ್ರತಿ ಕ್ಷಣಗಳೂ ದೇಶದ ಜನರ ಅಭಿವೃದ್ದಿಗಾಗಿಯೇ ದುಡಿದರು. ಮನುಷ್ಯನ ಜೀವನ ಸುಖಮಯವಾಗಿರಬೇಕಾದರೆ ಆತ ಧರ್ಮಾಚರಣೆಯನ್ನು ಮಾಡಬೇಕು ಎಂಬುದನ್ನು ಶ…

ಭಾರತೀಯರೇ ಸಾಕು ಎದ್ದೇಳಿ

ನಮಸ್ಕಾರಗೆಳೆಯರೆ," ಈದೇಶಉದ್ದಾರಆಗಲ್ಲಪ್ಪ” ಇವನೇನುಈವಾಕ್ಯಾಹೆಳ್ತಿದಾನೆಅಂತಆಶ್ಚರ್ಯಪಡುತ್ತಿದ್ದೀರ. ಈವಾಕ್ಯನಮ್ಮಭಾರತದೇಶದಎಷ್ಟೋಜನರಬಾಯಲ್ಲಿಬರೋಮಾತಲ್ವ. ಸ್ವಾಮಿವಿವೇಕಾನಂದರುಒಂದುಮಾತ್ಹೇಳ್ತಾರೆ "