Posts

Showing posts from March, 2012

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಈ ಬ್ಲಾಗ್ ಬರೆಯೋಕೆ ಮೂಲ ಪ್ರೇರಣೆ S.L.Bairappa ನವರ "ಧರ್ಮ ಶ್ರೀ" ಕಾದಂಬರಿ.ಈ ಕಾದಂಬರಿಯಲ್ಲಿ ಹಿಂದು ಧರ್ಮ ಎಂದರೇನು ಎಂಬುದರ ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ.ಪ್ರತಿಯೋಬ್ಬ ಹಿಂದುವು ಹಿಂದು ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಅತೀಮುಖ್ಯ.ಹಿಂದು ಧರ್ಮ ಕೇವಲ ಧರ್ಮವಲ್ಲ "Thats the way of life".ಒಬ್ಬ ಮನುಷ್ಯ ಹೇಗೆ ಬದುಕಬೇಕು ಹಾಗೆ ಬದುಕಿದರೆ ಪ್ರಯೋಜನವೇನು ಎಂಬುದನ್ನ ಈ ಕಾದಂಬರಿ ವಿವರಿಸುತ್ತದೆ.ನಾಯಕ ಮತಾಂತರವಾದ ನಂತರ ಆತನ ಮನಸ್ದಿತಿ,ಆತ ಇನ್ನೂಂದು ಧರ್ಮದ ರೀತಿ ರಿವಾಜುಗಳ್ಳಿಗೆ ಹೂಂದಿಕೊಳ್ಳಲಾಗದೆ ಪಡುವ ಕಷ್ಟ ಎಲ್ಲವೂ ಚಂದವಾಗಿ ಚಿತ್ರಿಸಲಾಗಿದೆ. ಇಂದು ದುಡ್ಡು,ಸುಖ,ಕೀರ್ತೀಗಳ ಆಮಿಶವನ್ನು ಒಡ್ಡಿ ಜನರನ್ನು ಮತಾಂತರಿಸಲಾಗುತ್ತಿದೆ.ಇದಕ್ಕೆ ನಾವುಗಳು ಮೂಲ ಕಾರಣವನ್ನು ಹುಡುಕಿ ಹೊರಟರೆ ಜನರಲ್ಲಿ ಹಿಂದೂ ಧರ್ಮದ ಬಗ್ಗೆ ಇರುವ ಅಂಧಕಾರ,ಮತ್ತು ಧರ್ಮವೆಂದರೆ ಭಯ ಹುಟ್ಟಿಸುವ tv ಚಾನೆಲ್ ಗಳ bb ಗುರೂಜಿ ಅಂತವರು ಎಂಬುದನ್ನು ನಾವುಗಳು ತೀರ್ಮಾನಿಸಬಹುದು.ಅಂದು ಎಷ್ಟೂ ಹಿಂದುಗಳು ಮೂಲ ಮತವನ್ನು ಬಿಟ್ಟು ಬೌದ್ದ,ಜಿನ ಧರ್ಮಗಳಿಗೆ ಮತಾಂತರ ಹೊಂದಿದರು ಇದಕ್ಕೆ ಕಾರಣ ಕೆಳವರ್ಗದವರ ಶೋಷಣೆ.ಇಂದು ಧರ್ಮ ಎಂಬುದನ್ನು ನಾವುಗಳು ತಿಳಿಯಲೇ ಬೆಕೆಂತಾದರೆ ಒಮ್ಮೆ ರಾಮಾಯಣವನ್ನು ಓದಿದರೆ ಸಾಕು. ಅಲ್ಲಿ ಬಾಲಕಾಂಡದಲ್ಲಿ ಪ್ರತಿಯೊಂದು ವರ್ಗದ ಜನರಿಗೂ ಸಮನಾಗಿ ಗೌರವವನ್ನು ಕೊಡುತ್ತಿರುವುದನ್ನು ನಾವುಗಳು ಗಮನಿಸಬಹುದು.