Posts

Showing posts from September, 2012

ಪ್ರೀತಿಯ ಮಳೆ

ಸುರಿಯುತಿರುವ ಈ ಜಡಿ ಮಳೆಯು ಕೆದುಕುತಿಹುದು ಮನವೆಂಬ ಜಲಾಶಯವ ಹುಟ್ಟುವ ಭಾವನೆಗಳೆಷ್ಟೋ,ಬರುವ ಯೋಚನೆಗಳೆಷ್ಟೋ,ಈಡೇರುವ ನೆನಪುಗಳೆಷ್ಟೋ, ಈ ಸಂಭ್ರಮದಲಿ   ಮರೆಯಲಾರದ ನನ್ನವಳ ನೆನಪುಗಳೆಷ್ಟೋ ಆಡಿದ ಪಿಸುಮಾತುಗಳೆಷ್ಟೋ, ತೀರದ ದಾಹವ ತಣಿಸಲು ಮೀಯಬೇಕು ಇನ್ನು   ಈ ಮಳೆಯಲಿ ಮಳೆಯ ಸಿಂಚನದಲಿ
             ಶ್ರೀ ಶಂಕರಮ್ ಲೋಕ ಶಂಕರಮ್                                                                                                        ಭಾರತ ಇತಿಹಾಸದಲ್ಲಿ ನಾವುಗಳು ಅದೆಷ್ಟೋ ವೀರರನ್ನು,ವೈರಾಗಿಗಳನ್ನು,ಸಾಹಸಿಗರನ್ನು,ದೇಶಭಕ್ತರನ್ನು ನೋಡಿದ್ದೇವೆ. ಆದ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ಭಾರತ,ಜಗತ್ತಿಗೆ ಅದೆಷ್ಟೋ ಮಂದಿ ರ್ದಾರ್ಶನಿಕರನ್ನು,ಪಂಡಿತರನ್ನು,ಸಂತರನ್ನು ನೀಡಿದೆ. ಆದರೆ ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾರ್ಚಾರ್ಯರು. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,ಎಂಟನೇ ವಯಸ್ಸಿನಲ್ಲಿ ವೇದ,ಮೀಮಾಂಸ,ಶಾಸ್ತ್ರಗಳಲ್ಲಿ ಪಾಂಡಿತ್ಯ,ಹನ್ನೆರಡನೇ ವಯಸ್ಸಿನಲ್ಲಿ ಜಗತ್ತು ಮಿತ್ಯವೆಂದು ಅರಿತು ವೈರಾಗ್ಯದಿಂದ ಸಂನ್ಯಾಸ ಸ್ವೀಕರಿಸಿದ ಮಹಾನುಭಾವರು ಶ್ರೀ ಶಂಕರ ಭಗವದ್ಪಾದರು. ಶ್ರೀ ಶಂಕರಾರ್ಚಾರ್ಯರ ಇಡೀ ಜೀವನ ಮಾನವ ಜನಾಂಗದ ಉದ್ದಾರಕ್ಕಾಗಿಯೇ ಮುಡಿಪಾಗಿತ್ತು. ವೇದೋಪನಿಷತ್ಗಳಲ್ಲಿರುವ ಸಾರವನ್ನು ಸಾಮಾನ್ಯ ಜನರಿಗೆ ಅರ್ಧವಾಗುವಂತೆ ಆಡು ಭಾಷೆಯಲ್ಲಿ ಹೇಳಿ ಜೀವನ ದರ್ಶನ ಮಾಡಿಸಿದ ಮಹಾನುಭಾವರು ಶ್ರೀ ಶಂಕರಾರ್ಚಾರ್ಯರು.ಶ್ರೀ ಶಂಕರರ ಇಡೀ ಜೀವನವೇ ಈಗಿನ ಜನಾಂಗಕ್ಕೆ ಆದರ್ಶಪ್ರಾಯವಾದುದು. ಒಬ್ಬ ಸಂನ್ಯಾಸಿಯ ಜೀವನದಿಂದ ಲೌಕಿಕ ಜೀವನ ನಡೆಸುತ್ತಿರುವ ನಮ್ಮಂತಹ ಜನರಿಗೆ ಉಪಯೋಗವೇನು? ಇದು ಎಷ್ಟೋ ಮಂದಿ ಜನರಲ್ಲಿ ಹುಟ್ಟವ ಪ್ರಶ್ನೆ. ಆದರೆ ಶ್ರೀ ಶಂಕರರು