Posts

Showing posts from October, 2012

ಪ್ರೀತಿಯ ಸವಾರಿ

ನಿಮ್ಮ ಪ್ರೀತಿಯ ರಾಜ್ಯದಿ ನೀವಲ್ಲ ಬೇಡುವ ಬಿಕಾರಿ
ಮೆರೆಯಿರಿ ನೀವು ಕರ್ಣನಂತೆ ಅರಸಾಗಿ
ಪ್ರತಿ ದಿನವು ನೆಡೆಸಿರಿ ಜಂಬೂಸವಾರಿ
ನಿಮ್ಮ ಆಸೆ ಎಂಬ ಆನೆಗಳು
ಸುಖ ಶಾಂತಿ ಕಾರುಣ್ಯಗಳ ಅಂಬಾರಿಯೊಳಗೆ
ಪ್ರೀತಿಯೆಂಬ ದೇವರನ್ನು ಹೊತ್ತು
ನಿಮ್ಮ ಮನವೆಂಬ ರಾಜಬೀದಿಯೊಳು
ರಾಜಗಾಂಬೀರ್ಯದಿ ನೆಡೆಯುತಿರಲು
ಜಗವೆಲ್ಲ ನೋಡುವರು ನಿಮ್ಮ ಸವಾರಿ
ನೋಡಿ ನೆಡೆಸುವರಿನ್ನೊಂದು ಸವಾರಿ
ಅವರ ಪ್ರೀತಿಯ ರಾಜ್ಯದಿ
ಅವರವರ ಪ್ರೀತಿಯ ರಾಜ್ಯದಿ
€ರಾಜ್¥

ಸ್ವಾಮಿ ವಿವೇಕಾನಂದರಿಗೊಂದು ಪತ್ರ“ಯಾವ ನಾಡು ಕಲ್ಲು ಬಂಡೆಗಿಂತಲು ಹೆಚ್ಚಾಗಿ ತನ್ನ ತಳವನ್ನೂರಿದೆಯೋ,ಯಾವ ನಾಡು ತನ್ನ ಅತ್ಯಧ್ಬುತ ಶಕ್ತಿಯಿಂದ ಪ್ರಕಾಶಿಸುತ್ತಿದೆಯೋ.ಯಾವ ನಾಡಿನ ಜೀವ ಆದಿ ಅಂತ್ಯಗಳಿಲ್ಲದ ಪರಮಾತ್ಮನಿಗೆ ಸಮವಾಗಿದೆಯೋ ಆಂತ ನಾಡಿನ ಮಕ್ಕಳು ನಾವು,ಭಾರತದ ಮಕ್ಕಳು ನಾವು”.ಸ್ವಾಮೀಜಿ ನಿಜಕ್ಕೂ ನಿಮ್ಮ ಮಾತುಗಳು ಸತ್ಯ, ಭಗವಂತ ನಮಗೆ ಕೊಟ್ಟಂತಹ ಬಹು ದೊಡ್ಡ ಉಡುಗೊರೆ ನಮ್ಮನ್ನು ಭಾರತದಂತಹ ದೇಶದಲ್ಲಿ ಹುಟ್ಟಿಸಿದ್ದು.ಇಲ್ಲಿಯ ಸಂಸ್ಕೃತಿ,ಸಹಬಾಳ್ವೆ,ಋಷಿಗಳ ಮಾರ್ಗದರ್ಶನ,ಹಿರಿಯರ ಆರ್ಶೀವಾದ ಎಲ್ಲವೂ ನಮ್ಮ ಬಾಳ ಉದ್ದಕ್ಕೂ ದಾರಿದೀಪವಾಗಿದೆ.ಆದರೂ ಸ್ವಾಮೀಜಿ ಮತ್ತೊಮ್ಮೆ ನಿಮ್ಮ ಅಗತ್ಯ ಈ ಭಾರತಕ್ಕಿದೆ. ಸ್ವಾಮೀಜಿ ನನ್ನ ದೇಶದಲ್ಲೀಗ ಬ್ರಷ್ಟಾಚಾರ ತಾಂಡವವಾಡುತ್ತಿದೆ,ಪಾಶ್ಚಾತ್ಯ ಸಂಸ್ಕೃತಿಗೆ ಜನರು ತಮ್ಮನ್ನು ತಾವು ಮಾರಿಕೊಳ್ಳುತ್ತಿದ್ದಾರೆ,ಬೇರೆಯವರ ತಲೆಒಡೆದು ಬದುಕುವುದನ್ನು ಜನರು ರೂಡಿಸಿಕೊಳ್ಳುತ್ತಿದ್ದಾರೆ,ಯುವ ಜನತೆ ದೇಶವನ್ನು ಕಟ್ಟುವ ಬದಲು ತಮ್ಮ ಜೀವನದ ಕಾಮನೆಗಳ ವ್ಯಸನಿಗಳಾಗುತ್ತಿದ್ದಾರೆ,ಬಿಡಿಗಾಸಿಗೋಸ್ಕರ ಆಳುವವರು ಅವರನ್ನು,ಅವರಿಗೆ ಆಶ್ರಯ ನೀಡಿದ ಅವರ ತಾಯಿ ಭಾರತಿಯನ್ನು ಮಾರಿಕೊಳ್ಳುತ್ತಿದ್ದಾರೆ,ನ್ಯಾಯ ಶಾಸ್ತ್ರವನ್ನೇ ರಚಿಸಿದ ನಾಡಿನಲ್ಲಿ ಸಾಮಾನ್ಯನ ನ್ಯಾಯದ ಹಂಬಲದ ಆಕ್ರಂದನ ಮುಗಿಲುಮುಟ್ಟುತ್ತಿದೆ,ನನ್ನ ಸೈನಿಕರನ್ನು ಗುಲಾಮರಂತೆ ನೋಡುತ್ತಿದ್ದಾರೆ,ನನ್ನ ಕನಸಿನ ಭಾರತ ಒಡೆದ ಕನ್ನಡಿಯಂತಾಗಿದೆ,ನನ್ನ ತಾಯಿ ಭಾರತ…
ನನ್ನ ಮನದ ಆಳದಲ್ಲಿ  ನಿನ್ನದೇನೆ ಕಂಪನ
ಕಂಪನದಿ ಕಂಪಿಸಿತು ನನ್ನ ಈ ಮನ 

ಹೃದಯವೆಂಬ ರಂಗಮಂಚದಲಿ ನಿನ್ನದೇನೆ ಕಾರುಬಾರು
ಕನಸುಗಳ ಒಡೆತನಕ್ಕೆ ಸೇವಕನು ನಾನು 

ನಿರಾಕಾರಕ್ಕು ಆಕಾರ ತರಿಸುವ ನಿನ್ನ ಮಾಯೆಗೆ ಮರುಳನಾಗಿಹೆ ನಾನು
ಮರಳಿಸು ಎನನ್ನು ನನ್ನ ಜೊತೆಗೆ ನಾನು

ನಿನ್ನ ಮೇಲಿನ ಮೋಹ  ಇಂದ್ರಜಾಲವೋ ಎನೋ 
ಮೂಕವಿಸ್ಮಿತನಾಗಿಹೆ 

ನಿನ್ನ ಒಳಗೆ ನಾನು 
ನಿನ್ನ ಒಳಗೆ ನಾನು