Posts

Showing posts from February, 2013

ಮೂರ್ತಿಯಲ್ಲಿದ್ದಾನಾ ಭಗವಂತ

ಒಬ್ಬ ಹಿಂದು,ಹಬ್ಬದ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟು ದೇವಸ್ತಾನಕ್ಕೆ ಹೊಗುತ್ತಾನೆ. ಹಿಂದುವಿನ ಮನೆಯ ಒಂದು ಸಣ್ಣ ಕೊಣೆಯಲ್ಲಿ ಒಂದಷ್ಟು ದೇವರ ಮೂರ್ತಿಗಳನ್ನಿರಿಸಿ ಅದಕ್ಕೆ ಕೈ ಮುಗಿಯುತ್ತಾರೆ. ಗೌರೀ ಗಣೇಶ ಹಬ್ಬದಂದು ಬೀದಿ ಬೀದಿಗಳಲ್ಲಿ ಗೌರೀಗಣೇಶರ ವಿಗ್ರಹಗಳನ್ನಿರಿಸಿ ಪೂಜಿಸುತ್ತಾರೆ.ಪ್ರತಿಯೊಬ್ಬರ ಭಾವನೆ ದೇವರು ಆ ವಿಗ್ರಹದಲ್ಲಿದ್ದಾನೆ ಎಂಬುದೆ.ಗರ್ಭಗುಡಿಯ ಸರಳಿನ ಹಿಂದೆ ದೇವರನ್ನಿರಿಸಿ ಪೂಜಾರಿಯನ್ನು ಕಾವಲಿಗಿರಿಸಿ ದೇವರನ್ನು ಒಂದು ಕೋಣೆಗೆ ಸೀಮೆತಗೊಳಿಸಿದೆಯೆ ಹಿಂದೂ ಧರ್ಮ.                    ಖಂಡಿತ ಇಲ್ಲಾ. ಹಿಂದು ಧರ್ಮದಲ್ಲಿ ವೇದೋಪನಿಷದ್ಗಳು ಹೇಳಿದ ಪ್ರತಿಯೊಂದು ಆಚರಣೆಗೂ ಒಂದು ಅರ್ಥವಿದೆ.ಹಾಗೆಯೇ ಈ ಮೂರ್ತಿ ಪೂಜೆಯು ಸಹ. ಮನುಷ್ಯ ಯಾವುದಾದರೊಂದನ್ನು ಗುರುತಿಸಬೇಕಾದರೆ ಆ ವಸ್ತುವಿನ ಪೂರ್ಣ ಚಿತ್ರಣ ಆತನ ಮನಸ್ಸಿನಲ್ಲಿ ಮೂಡಬೇಕು.ಒಮ್ಮೆ ಮೂಡಿದರೆ ಆ ವಸ್ತುವನ್ನು ಕತ್ತಲಲ್ಲೂ ಆತ ಗುರುತಿಸಬಲ್ಲನು.ಆ ನಿಟ್ಟಿನಲ್ಲಿ ಸಗುಣೋಪಾಸನೆ ನಿರಾಕಾರ ತತ್ವದರ್ಶನದೆಡೆಗೆ ಹೋಗುವ ದಾರಿಯಾಗಿದೆ.                    ಹಿಂದೂ ಧರ್ಮದಲ್ಲಿ ಮುನ್ನೂರಮುವತ್ತು ಕೋಟಿ ದೇವತೆಗಳಿದ್ದಾರೆ ಎಂಬುದನ್ನು ನಾವುಗಳು ಚಿಕ್ಕ ವಯಸ್ಸಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಅರ್ಥಾತ್ ಈ ಜಗತ್ತಿನ್ನಲ್ಲಿ ಪ್ರತಿಯೊಬ್ಬ ಮನುಷ್ಯನ ಚಿಂತನೆಗಳು ಬೇರೆ ಬೇರೆಯಾಗಿದೆ,ಆದ್ದರಿಂದ ಪ್ರತಿಯೊಬ್ಬ ಮನುಷ್ಯನು ಆತನ ಭಾವನಾನುಸಾರವಾಗಿ ಯಾವ ದ

ಚೇತನಕ್ಕೊಂದು ನಮಸ್ಕಾರ

 ಫೆಬ್ರವರಿ 2 2013 ಒಂದು ಮಹಾನ್ ಚೇತನ ಈ ಭೂಮಿಗಿಳಿದು 150 ವರ್ಷಗಳು ಕಳೆಯುತ್ತವೆ.ಭೋಗ ಸಿದ್ದಾಂತವನ್ನೇ ಜೀವನದಲ್ಲಿ ಅಳವಡಿಸಿಕೊಂಡು ಅದರಲ್ಲೇ ಮುಳುಗಿ ಹೋಗಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳ ಜನರ ಬಾಳಲ್ಲಿ ಹೊಸ ಚಿಂತನೆಯ,ಸತ್ಯದ ಅರಿವ ಮೂಡಿಸಿ,ಭಾರತವೆಂದರೇನು ಎಂಬುದ ಇಡೀ ಜಗತ್ತಿಗೇ ಸಾರಿದ ಆ ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಭಾರತದಲ್ಲಿ ವಿಜೃಂಬಣೆಯಿಂದ ನೆಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಈ ದೇಶದವನು ನಾನು ಎಂಬುದನ್ನು ಹೇಳುವಾಗ ನನ್ನ ಎದೆ ಪ್ರೀತಿಯಿಂದ ತುಂಬಿಬರುತ್ತದೆ,ಸ್ವರ ಗದ್ಗದಿತವಾಗುತ್ತದೆ,ರಾಷ್ಟ್ರ ಪ್ರೇಮದ ಚಿಲುಮೆ ನನ್ನೆದೆಯಲ್ಲಿ ಉಕ್ಕುತ್ತದೆ.             ಗೆಳೆಯರೆ ಅಂದು ಚಿಕಾಗೋದಲ್ಲಿ ಕೇವಲ 3 ನಿಮಿಷದ ಭಾಷಣದಲ್ಲಿ ಇಡೀ ವಿಶ್ವವನ್ನೇ ಭಾರತದೆಡೆಗೆ ನೋಡುವಂತೆಮಾಡಿದ ಆ ಮಹಾನ್ ವ್ಯಕ್ತಿಯ ಛಲವೆಂತಹುದು?ದಾಸ್ಯದಲ್ಲಿದ್ದ ಭಾರತದ ಜನಕ್ಕೆ ಅವರುಗಳ ಶಕ್ತಿಯನ್ನು ಅವರಿಗೇ ದರ್ಶನ ಮಾಡಿಕೊಟ್ಟ ಆ ಚೇತನದ ಬಲವೆಂತಹುದು?ಹಿಂದೂ ಧರ್ಮದ ಸತ್ಯ ದರ್ಶನ ಮಾಡಿಕೊಟ್ಟ ಆ ಚೇತನದ ಜ್ಞಾನವೆಂತಹುದು?ವಿಶ್ವ ಮಾನವನಾಗಿ ಕಂಡ ಆ ಮಹಾತ್ಮನ ಮಾನವೀಯತೆ ಎಂತಹುದು?ಅಬ್ಬಾ!! ಬದುಕಿದ್ದು ಕೇವಲ 30 ವರ್ಷಗಳಾದರೂ ಸಾಧನೆಯ ಶಿಖರವನ್ನೇರಿದ ಸ್ವಾಮಿ ವಿವೇಕಾನಂದರಿಗೆ ನೂರೊಂದು ನಮಸ್ಕಾರಗಳು.            ಸ್ವಾಮಿ ವಿವೇಕಾನಂದರು ರೋಮ್ ನಗರದಿಂದ ಭಾರತಕ್ಕೆ ವಾಪಾಸಾಗಿ ಮತ್ತೆ ದೇಶವನ್ನು ಕಟ್ಟುವ ಕೆಲಸ ಶುರುಮಾಡಿದ