Posts

Showing posts from May, 2013

ಜೀವನದ ಸಿಂಹಾವಲೋಕನ

ಅಹಾ! ಅದೆಂತಹ ಬೆಚ್ಚಗಿನ ಆ ಆಸರೆ. ಮತ್ತೆ ಮತ್ತೆ ಮುದುರಿ ಮಲಗುವ ಆ ಸುಖ ನಿದ್ರೆ. ಆಗಾಗ ಸಿಗುವ ಆ ತಾಯಿಯ ಮುತ್ತುಗಳು. ಆಹಾ ಆ ಬೆಚ್ಚಗಿನ ಆಸರೆಯ ಸುಖದ ನೆನಪು ಮಾತ್ರ ಮೆಲುಕು ಹಾಕಲು ಉಳಿದಿದೆ. ನಾವುಗಳು ಆಡುತ್ತಿದ್ದ ಭಯಾನಕ ಆಟಗಳ ನೆನಪುಗಳೆಷ್ಟೋ. ಆಡುವಾಗು ಬಿದ್ದಾಗ ಒಳಗಿನ ಬಿಳಿ ಕಾಣುವಂತೆ ಆಗುತ್ತಿದ್ದ ಅ ಗಾಯದ ಸವಿ ನೋವಿನ ನೆನಪುಗಳು. ಗೆಳಯರೊಂದಿಗೆ ಕಿತ್ತಾಡಿ “ನೀನು ನಮ್ಮನೆಗೆ ಬರಬೇಡ ನನ್ನ ಜೊತೆ ಜಗಳ ಆಡಿದ್ಯ” ಅಂತ ಜಗಳವಾಡಿದ ಆ ನೆನಪುಗಳೆಷ್ಡೋ. ರಬ್ಬರು, ಎರೆಡು ಕಡೆಯು ಬರೆಯುವ ಪೆನ್ಸಿಲ್, ಮೆಂಡರ್ರು, ಅರ್ದ ಮುರಿದ ಸ್ಕೇಲು, ಕಾಗೆ ಕಾಲು ಗುಬ್ಬಿ ಕಾಲಿನಂತಹ ಅಕ್ಷರಗಳು ಅಬ್ಬಾ ನೆನಪಿಸಿಕೊಳ್ಳುತ್ತಾ ಹೊದಂತೆ ಕಣ್ಣು ಒದ್ದೆಯಾಗುತ್ತಾ ಹೋಗುತ್ತದಲ್ವ ಗೆಳೆಯರೆ. ನಮ್ಮ ಮೊದಲನೇ ಮೂರು ಚಕ್ರದ ಸೈಕಲ್ ಅದೆಷ್ಟು ಖುಷಿ ಆ ಒಂದು ರೈಡಿನಲ್ಲಿ. ರಾಜ ರಾಣಿ ಕಳ್ಳ ಪೋಲೀಸ್ ನೆನಪಿರಬೇಕಲ್ವ ಆ ರಾಜ ಬಂದಾಗ ಅರಳಿಕೊಳ್ಳುತ್ತಿದ್ದ ಆ ನಮ್ಮ ಮುಖಗಳು. ಅಪ್ಪ ಬರುವುದನ್ನೇ ಕಾದು ಕಾದು ಅವರು ಬಂದಾಗ ಸಿಕ್ಕುವ ಆ ಚಾಕೋಲೇಟ್, ಕಾದು ಕಾದು ಸಿಗುವ ಈ ಡಿಗ್ರಿಗಿಂತ ಹೆಚ್ಚು ಸಂತೋಷಕೊಡುತ್ತಿತ್ತೇನೋ ಅಲ್ವ ಗೆಳೆಯರೆ. ಸ್ಕೂಲಿನಲ್ಲಿ ಗೆಳೆಯನಿಗೆ ಹೊಡೆದಾಗ ಟೀಚರ್ ಕೊಟ್ಟ ಅ ಏಟು ಅದೆಷ್ಟು ನೋಯುತ್ತಿತ್ತೋ ಅಲ್ವ ಗೆಳೆಯರೆ. ಮಳೆಗಾಲದಲ್ಲಿ ಮಾವಿನಕಾಯಿಗೆ ಖರಾ ಪುಡಿ ಹಾಕಿತಿನ್ನುತ್ತಿದ್ದ ಆ ಸಂತೋಷ ಖಂಡಿತವಾಗಿಯು ಕೆ ಎಫ್ ಸಿ ಕ್ರಷರ್ ಕೊಡೋದು ಸಾಧ್ಯವ

ಉದಯಿಸುವನಾ ಸೂರ್ಯ

ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕೃತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅಧ್ಬುತವೊ ಆ ಸೂರ್ಯಾಸ್ತಮವೊ ಅದೆಂತಹ ಆಶ್ಚರ್ಯವೊ ನಮ್ಮೊಳಗಿನ ತಮವೊ ತಮದೊಳು ಹೆದರಿ ಗೂಡ ಸೇರಿದವು ಪಶುಜಂತುಗಳು ಒಳಗತ್ತಲೆಗೆ ಬೆದರಿ ಮೂಲೆ ಹೊಕ್ಕವು ಸದ್ಬಾವನೆಗಳು ತಮೋರಕ್ಕಸ ಎದ್ದಿಹನು ಜಗದಲಿ ಜಗವೆಲ್ಲ ಕಬಳಿಸುವ ಆ ಹುಚ್ಚು ಛಲದಲಿ ಮನದೊಳಗೆ ಬೆಳದಿಹನು ಶಡ್ಗುಣಗಳ ರಕ್ಕಸ ನನ್ನನ್ನೆ ಮುಗಿಸುವ ಆ ನೂರು ಯೋಜನೆಯಲಿ ಕತ್ತಲಾವರಿಸುವುದೋ ಜಗದಲಿ ಭಯದ ಜನನವೊ ನಮ್ಮ ಈ ಮನದಲಿ ಕಣ್ಗೆಟ್ಟಿಹವು ಜಗದ ಮಕ್ಕಳು ಕಾಣದಾಗಿದೆ ದಾರಿ ನೆಡೆಯುವ ಪಥದಲಿ ಉದಯವಾಗುವುದೊ ಆ ಪ್ರಕರ ಬೆಳಕು ಸರ್ವೊದಯವಾಗುವುದೊ ಎಲ್ಲರಾ ಬದುಕು ದಾರಿ ಸವೆಯುವುದು ಆ ಸನಾತನ ನೆಡೆಯಲಿ ದಾರಿ ತಿಳಿಯಾಗುವುದು ಬೆಳಕಿನ ದರ್ಶನದಿ ನಂಬು ನೀ ಬೆಳಕ ತಮವು ಅಡಗುವುದು ತಿಳಿ ನೀ ಭಾರತವ ಒಳಗತ್ತಲೆಯ ಬೆಳಗಿಸಲು ದೇಶವಲ್ಲವೋ ಇದು ತಾಯಿನಾಡು ಎಲ್ಲರನು ಸಲಹುವ ಆ ಚೈತನ್ಯದ ಬೀಡು ನಮ್ಮೊಳಗೆ ಉದಯಿಸುವನಾ ಜ್ಞಾನ ಸೂರ್ಯ ನಮ್ಮೊಳಗೆ ಅಸ್ತಮಿಸುವುದಾಜ್ಞಾನದ ಭಯ ನಮ್ಮೊಳಗಿನ ಬೆಳಕೋ ಬೆಳಗುವುದು ಜಗವ ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ