Posts

Showing posts from June, 2013

ಎಂದು ಬರುವನೋ ರಾಮ

ಎಂದು ಬರುವನೋ ರಾಮ ಮಾಯೆಯಾ ಮನೆ ಕಡೆಗೆ ನನ್ನ ಮನವನು ತಣಿಸಲು ನನ್ನ ಜನರ ಸಲಹಲು ಜಗವೆಲ್ಲ ಬೆಂದಿಹುದು ರಾವಣನ ಧಗೆಗೆ ಜನರೆಲ್ಲ ಸೋತಿಹರು ದುಷ್ಟನ ಭಯಕೆ ತಮದೊಳು ಬೆಳದಿಹನು ಆ ರಕ್ಕಸ ತಮವು ಆವರಿಸಿಹುದು ಈ ಮನಸ ವಿಕೃತಿಯು ಕುಣಿದಿಹುದು ಈ ಪ್ರಕೃತಿಯೊಳಗೆ ಪ್ರಕೃತಿಯು ನೊಂದಿಹುದು ಈ ಮಾಯೆಯೊಳಗೆ ಆರ್ಭಟಿಸುತಿಹುದು ನನ್ನೊಳಗೆ ಆ ಧೈತ್ಯನಾ ಕೂಗು ನಡುಗುತಿಹುದು ನನ್ನೆದೆ ಆ ಘೋರ ಘರ್ಜನೆಗೆ ಅಡಗಿ ಹೋಗಿದೆ ಸಾತ್ವಿಕತೆಯ ಕೂಗು ವಿಜೃಂಬಿಸಿದೆ ಅವಸಾನದ ಹಾಡು ಎಂದು ಬರುವನೋ ರಾಮ ಈ ದುಷ್ಟನಾ ಅಳಿವಿಗೆ ನಾಂದಿಯನು ಹಾಡಲು ಎಂದು ಕರುಣಿಸುವನೋ ರಾಮ ನನ್ನ ನಾ ಕಾಣಲು ಬೇಡುವೆನು ರಾಮನ ರಾವಣನ ಅಂತ್ಯಕೆ ಮಾಯೆಯ ಈ ಜಗದ ಉಳಿವಿಗೆ ದಯತೋರು ರಘುರಾಮ ಯೋಗಿಯ ಪಥದೆಡೆಗೆ ದಯತೋರು ರಘುರಾಮ ಮುಕ್ತಿಯಾ ಬ್ರಹ್ಮನೆಡೆಗೆ