Posts

Showing posts from 2014

ನಾ ಕಂಡ ಸತ್ಯ

ಒಂದು ತಿಂಗಳ ಹಿಂದೆ ವೈಟ್ ಫೀಲ್ಡ್ ಎಸ್.ಜೆ.ಆರ್ ಮುಂದೆ ಒಂದಷ್ಟು ಜನ ನವಯುವಕರು  ಹೋಗೋ ಬರೋರಿಗೆಲ್ಲಾ ಏನೋ ಹೇಳ್ತಾ ನಿಂತಿದ್ದರು. ಅದರ ಮುಂದೆನೇ ಹೋಗುತ್ತಿದ್ದ ನನ್ನನ್ನು ಕರೆದರು. ಯಾವ ಬ್ಯಾಂಕನೋರೋ ಲೋನ್ಗೆ ಕರಿತಿರಬೇಕು ಅಂತ ತಿಳ್ಕೊಂಡೆ. ನೋಡಿದ್ರೆ ಅವರುಗಳು ಒಂದು ಎನ್.ಜಿ.ಓ ಸಂಸ್ಥೆಯಿಂದ ಬಂದವರಾಗಿದ್ದರು. ಅದರಲ್ಲಿದ್ದವನೊಬ್ಬ ನನ್ನ ಕರೆದು. "ನೋಡಿ ಭಾರತದಲ್ಲಿ ಅತ್ಯಾಚಾರ ಜಾಸ್ತಿ ಆಗ್ತಿದಾವೆ. ಅದರ ಬಗ್ಗೆ ಅರಿವು ಮೂಡಿಸೋಕೆ ನಾವು ಬಂದಿರೋದು. ಈಗ ಮೊನ್ನೆ ಮೊನ್ನೆ ಸ್ಕೂಲ್ ಮಗುಮೇಲೆ ಪ್ರಕರಣ ಆಯ್ತು ಇವೆಲ್ಲಾ ಭಾರತದಲ್ಲಿ ಹೆಚ್ಚಾಗುತ್ತಿದೆ ಅದಕ್ಕೆ ನಾವು ಜನರನ್ನ "ಎಜ್ಯುಕೇಟ್ " ಮಾಡಬೇಕು." ಹಂಗೆ ಹಿಂಗೆ ಅಂದ. ಅವನ ಮಾತನ್ನ ತಾಳ್ಮೆಯಿಂದ ಕೇಳಿದ ನಂತರ ಅವನಿಗೆ ಉತ್ತರಿಸಲು ಹೊರಟೆ. ಅದು ಒಂದು ಘಂಟೆಗಳ ಸುದೀರ್ಘ ಚರ್ಚೆಯಾಗಿತ್ತು ಆ ಪಾದಾಚಾರಿ ಮಾರ್ಗದಲ್ಲಿ. ಹಿಂದುವಿನಿಂದ ಮುಸ್ಲಿಂ ಮಥಕ್ಕೆ ಕನವರ್ಟ್, ಆದವನೋಂದಿಗೆ ದೊಡ್ಡವಾದವೇ ನೆಡೀತು. ಅಲ್ಲಿ ಬಂದ ಹಲವಾರು ಪ್ರಶ್ನೆಗಳಿಗೆ ನನ್ನ ಚಿಂತನೆ,ನನ್ನ ಆದರ್ಶದಿಂದ ನೀಡಿದ ಉತ್ತರಗಳನ್ನು ನಿಮ್ಮೊಂದಿಗೆ ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಎಸ್ ನಾವೆಲ್ಲಾ ನಾಗರೀಕ ಸಮಾಜದಲ್ಲಿದ್ದೇವೆ. ಎಸ್ ನಾವೆಲ್ಲಾ ಎಜ್ಯುಕೇಟೆಡ್. ಆದರೂ ಈ ಅತ್ಯಾಚಾರವೇನು? ಈ ಮೃಗೀಯ ವರ್ತನೆ ಏಕೆ? ಒಂದು ಸೋ ಕಾಲ್ಡ್ ನಾಗರೀಕ,ಎಜ್ಯುಕೇಟೆಡ್ ಸಮಾಜದಲ್ಲಿ ಈ ರೀತಿಯಾಗಿ ಒಂದು ಹೆಣ

ಮುಮುಕ್ಷು

ನನ್ನದೆನ್ನುವುದೇನಿಹುದೆ ತಾಯೇ ಎಲ್ಲವೂ ನಿನ್ನದಹುದೇ ಪ್ರೇರಕಳು ನೀನು ಕಾರಕಳು ನೀನು ನೀ ಹೆಣೆದ ಲೀಲೆಗೆ ಆಯುಧವು ನಾನು ಧರ್ಮದಾ ಪಥದಲಿ ಜೀವನದ ತೇರೋ ಜೀವನದ ಭಯಕೆ ಆತ್ಮದಾ ಬೇರೋ ತುಂಬು ಮೂಟೆಯ ಹಮಾಲಿಯೊ ನಾನು ಸಾಗಬೇಕಿದೆ ಹೊತ್ತು, ಕಳೆದು ಕೊಳ್ಳುವ ತನಕ ಸಲಹುವಳು ನೀನು, ಪೊರೆಯುವಳು ನೀನು ಶಾಶ್ವತ ಬಂಧುವು ನೀನು, ಜಗಜ್ಜನನಿ ಸತ್ಯ ಪ್ರೀತಿಯು,ನಿತ್ಯ ಪ್ರೇಮವು ನಿನ್ನ ಮಡಿಲದೋ, ಜಗದ ಶಯ್ಯೆ ಧರ್ಮದಾ ಬಾಳ್ವೆ, ಅರಿವಿರುವ ತತ್ವ ತತ್ವದಾ ಅರಿವು,ನಿನ್ನಯಾ ದರುಶನ ದರುಶನದ ಪರಿ, ಜಗವೆಲ್ಲ ಬೆಳಕೋ ಬೆಳಕಿನಾ ಸಿಂಧು, ನಿತ್ಯಾದಾ ಬ್ರಹ್ಮ ಮೋಡದಾ ಹನಿಯು, ತೊರೆಯಾಗಿ ನದಿಯಾಗಿ ಬಂದುಗೂಡುವವು, ಶರಧಿಯಾ ಒಡಲು ಜಗವೆಲ್ಲ ನೀನಾಗೆ, ನಾವೆಲ್ಲ ಬಿಂಬ ಬಿಂಬ ಒಡೆದೊಡನೆ, ಉಳಿಯುವುದೊಂದೇ ನೀನೆಂಬ ಸತ್ಯ ನೀನೆಂಬ ಸತ್ಯ.

ಮತ್ತೆ ಅವತರಿಸು

ಮತ್ತೆ ಅವತರಿಸು ಓ ಎನ್ನ ತಾಯೇ, ಭಾರತಿಯೆ ಮತ್ತೆ ಬಿತ್ತರಿಸು ಆ ನಿನ್ನ ಛಾಯೆ,ಭಾರತಿಯೆ ಜಗವೆಲ್ಲ ಬಯಸಿಹುದು ಶಾಂತಿಯಾ ಬಾಳ ಪುರವೆಲ್ಲ ಸಿಲುಕಿಹುದು ಬ್ರಾಂತಿಯಾ ಗಾಳ ನೀನ್ ಅವತರಿಸಿರ್ದೊಡೆ ಜಗಕೆಲ್ಲ ಬೆಳಗೊ ನೀನ್ ವಿಹರಿಸಿರ್ದೊಡೆ ಜಗವೆಲ್ಲ ಬೆರಗೋ ರುಂಡಮಾಲಿನಿ ಕಾಳಿಯಾಗೆನ್ನ ದೇಶದಲಿ ರಕ್ಕಸರ ರುಂಡವಾ ಕೆಡುವುತಾ ಉಕ್ಕೇರಿದ ಕ್ರೋದಾಗ್ನಿ ಜ್ವಲಿಸಲಿ ಅಧರ್ಮಿಯರ ಹೃದಯವಾ ದಹಿಸುತ ಯುಗ ಪರಿವರ್ತಿಸಲಿ ನಿನ್ನ ಇಚ್ಚಾನುಸಾರ ಬ್ರಹ್ಮಾಂಡ ಜೈಂಕರಿಸಲಿ ಸನಾತನದ ಹುಂಕಾರ ನಿನ್ನ ರೌದ್ರವತೆಗೆ ಸರ್ವವೂ ಸ್ವಾಹಾಕಾರ ನಿನ್ನ ಅಪ್ಪಣೆಯೇ ಎಲ್ಲೆಲ್ಲು ಅಧಿಕಾರ ಸಜ್ಜನರ ಮೊರೆಯಿನ್ನು ಆಲಿಸೆಯ ತಾಯೆ ದುರ್ಜನರ ದುರ್ನಡತೆ ಕಾಣಿಸದೆ ಮಾಯೆ ಇನ್ನೆಷ್ಟು ದಿವಸ, ತಮೋರಜದ ಅಜ್ಞಾತ ಸಾಕಿನ್ನು ಅವತರಿಸು, ಮಾರಿಯಾ ಹಾಗೆ ಬೇಡಿಕೆಯೊಂದೇ ನಿನ್ನ ಪಾದದಡಿಯಲಿ ನವರಾಷ್ಟ್ರ ನಿರ್ಮಾಣ ಸನಾತನದ ನೆಲೆಯಡಿಯಲಿ ಹಂಬಲವು ಒಂದೇ, ಜಗವೆಲ್ಲ ಬೆಳಗೊ ಜ್ಞಾನದಾ ಬೆಳಗು ಹೊತ್ತಿ ಉದಯಿಸಲಿ ನಿನ್ನ ಗರ್ಭದಲಿ ಹೊತ್ತಿ ಬೆಳಗಲಿ ನಿನ್ನ ಗರ್ಭದಲಿ

ಆಕಾಂಕ್ಷೆ

ಭಾವಗಳ ಶೋಧಿಸುವ ಭರದಲಿ ಪೋಣಿಸುವ ಪದಗಳಿಗೆ ಪೈಪೋಟಿ ಆಸೆಗಳ ನೀಗುವಾ ತುಡಿತದಿ ಎಲ್ಲೆ ಮೀರಿದೆ ಮನದ ಹತೋಟಿ ಶರಧಿಯ ಅಲೆಗಳು ಮನದ ದುಗುಡವೋ ಉಕ್ಕಿ ಏರಿದೆ ಅವಳ ಮೋಹಕೆ ಭಯದ ಛಾಯೆಯೋ ಬುದ್ದಿ ಬ್ರಮಣೆಯೋ ಆ ಮೊಗದ ಚಂದಕೆ,ಆ ಕಿನ್ನರಿಯ ಹಂಬಲಕೆ ದಕ್ಕಿತೆಂಬುದೊಂದು ಕನಸೋ ನನಸಾಗಿಸೋ ಮನಸೋ ಆರ್ಥನಾದದಿ ಕೂಗುತಿದೆ ಆಸೆ ಎಂಬ ಮನದ ಹಕ್ಕಿ ಮತ್ತೊಮ್ಮೆ ಬೆಳಗೋ, ಮತ್ತೊಮ್ಮೆ ಇರುಳೋ ಮತ್ತೆ ಆಳ್ವಿಕೆಯೋ, ಗುಣದ ಪಾರುಪತ್ಯವೋ ದಿಕ್ಕು ತಪ್ಪಿದ ನೌಕೆ ಎಂದು ಸೇರುವುದು ದಡವ ಊರ ಅಲೆಯುವ ತಿರುಕ ಎಂದು ಕೂಡುವ ಗೃಹವ ಸರ್ವಕ್ಕು ಉತ್ತರ ಮುಂಬರುವ ಕಾಲ ಸರ್ವವೂ ಅದೀನ ಕಾಲದ ಮುಂಗಡ ಸರ್ವವೂ ಅದೀನ ಕಾಲದ ಮುಂಗಡ

ನಿತ್ಯ ನೂತನ ಸತ್ಯ ಚೇತನ

ಬಣ್ಣ ಬಣ್ಣದ ಕುಂಚದ ಕಲಾವಿದ ನಿನಗೆ ನೂರು ನಮಸ್ಕಾರ ಜಡತ್ವದ ಚೈತನ್ಯವ ಬಡಿದೆಬ್ಬಿಸೊ ಗುರುವು ನೀನು ಕಪ್ಪು ಹಾಳೆಯ ಮೇಲೆ ಬಣ್ಣ ಚೆಲ್ಲುವ ಕಲಾರಸಿಕನೊ ನೀನು ನಿನ್ನ ಬರುವಿಕೆಗೆ ಕಾದಿವೆ ನೈದಿಲೆಗಳು ನೂರು ನಿನ್ನ ಉದಯಕೆ ಹಾಡಿವೆ ಇಂಚರಗಳು ಸಾವಿರಾರು ಶ್ವೇತಾಶ್ವಗಳನೇರಿ ಸೂತ್ರಾಂಕುಶದಿ ನಮ್ಮ ನೆಡೆಸೋ ತೇಜಪುಂಜವೊ ನೀನು ಭೂತ ಕತ್ತಲೆ ಕೂಡಿ ಮುಕ್ತಿ ಮಂಜಿನ ಚಾರಣಕೆ ಬೆಳಕ ಚೆಲ್ಲುವ ಮಹಾ ಯೋಗಿಯೋ ನೀನು ಕಾಲನಾ ಸಾರ್ಥದಿ ಹಿಂಡಾಳು ನಾವೆಲ್ಲಾ ಆಡುವರೀರ್ವರು,ಗೂಡುವರೀರ್ವರು,ತೊರೆಯುವರೀರ್ವರು,ಹೋರುವರೀರ್ವರು ಇಂದು ಇದ್ದವರು ನಾಳೆ ಋಣ ಮುಕ್ತರು ಮತ್ತೊಂದು ಹಿಂಡಿನಾ ಪಯಣಿಗರು ದಾಟಿ ಬಂದುದೋ ಅದು ಎಂಬತ್ನಾಲ್ಕು ಲಕ್ಷಾವತಾರ ಪಡೆದದಿಂತು ಇದು ಭಾವ ಬುದ್ದಿಗಳ ಸಂಯೋಗ ಅಂದಿನಿಂದಿನವರೆಗೂ ಸವೆದದೊಂದೇ ಕರ್ಮ ಪಾಶದ ಬಂಧನ ಅಜ್ಞಾನದ ಕತ್ತಲು ಕರಗಿಸಿ ಜೀವಾತ್ಮವ ಮಾಯೆಯೊಳು ಬೆಳಗಿಸಿ ಅಣುವಿನೊಳು ಅಣುವಾಗಿಸೋ ಭವತಾರಿಣಿಯೊ ನೀನು ಜಗವೆಲ್ಲ ಪೊರೆವ ಭವತಾರಿಣಿಯೊ ನೀನು

ಜೀವನ ಜಾತ್ರೆ

Image
ನೆಡೆಯುವಾಸೆಕಣೆ ಹುಡುಗಿ ನಿನ್ನ ಕಿರುಬೆರಳ ಕೊಂಡಿಯನೊಡಗೂಡಿ ಈ ಜಂಗುಳಿಯ ನಡುವೆ ಅಪರಿಚಿತರು ಇವರೆಲ್ಲ ಚಿರಪರಿಚಿತಳು ನೀನು ಕುರುಡು ಕಾಂಚಣದ ವ್ಯಾಪಾರಿಗಳ ನಡುವೆ ಕುರುಡು ಪ್ರೀತಿಯ ವ್ಯಾಪಾರಿ ನೀನು ಇಬ್ಬರೊಡಗೂಡಿ ಕಳೆದು ಹೋಗುವ ಈ ಜಾತ್ರೆಯೊಳು ಬೆರೆತು ಕರಗುವ ಈ ಸಂತೆಯೊಳು. ರಾಜವೀದಿಯೊಳು ಪ್ರೀತಿಯಾತೇರು  ಎಳೆದುಸಾಗುವ ನಾವು ಹಗ್ಗ ಒಂದನು ಹಿಡಿದು ಪ್ರೀತಿ ಮರಳಿ ಗರ್ಭಗುಡಿ ಸೇರಲು ಮುಂದೆ ಸಾಗುವ ನಾವು ಕರ್ಮ ಬುತ್ತಿಯಹೊತ್ತು ನಿನ್ನ ದಾರಿಗೆ ನೀನು ನನ್ನ ದಾರಿಗೆ ನಾನು 

ಮಾಯಾ ಲೀಲೆ

ಬೆಳದಿಂಗಳ ಮಾದಕತೆಯ ಸ್ಖಲನಕೆ ಸೊಕ್ಕುತಿಹುದು ಮನದ ಕುದುರೆಯು ಚಂದಿರನ ಬೆಳಗಿನ ಹಾಲಿನೌತಣಕೆ ಉಕ್ಕುತಿಹುದು ಭಾವನೆಗಳ ಸಾಗರವು ತಮವು ಮೀರಿ ಅಪ್ಪಿಹುದು ಕತ್ತಲು ಜಗವ ನಿರ್ಭಯದಿ ಕಾಯುತಿಹನು ಶಶಿಯು ಆಗಸವ ಕಪ್ಪು ಜಡಗಟ್ಟಿ ತುಂಬಿಹುದು ಚಿತ್ತವ ಚಿದ್ರೂಪವು ಬೆಳಗುತಿಹುದು ಆದಿಅಂತ್ಯವ ಸುತ್ತಣ ತನಿನೀಲಿಯ ಬೆಳಗಲಿ ಅಸ್ಪಷ್ಟ ಆಕಾರ ಸನಾತನದ ಧರ್ಮದ ಬೆಳಕಲಿ ಸತ್ಯದ ಓಂಕಾರ ಮೋಡಗಳ ಮುಸುಕಿನ ಲೀಲೆಗೆ ಚಂದಿರನು ಅವಿತಿಹನು ಭವತಾರಿಣಿಯ ಮಾಯೆಯ ಮುಸುಕಿಗೆ ಹುಸಿಯಾಗಿಹುದು ಸತ್ಯವು ಕಾರ್ಗತ್ತಲ ಗರ್ಭವ ಬಗೆದು ಅವತರಿಸುವುದೊಂದೇ ಕಾಂತಿಯು ಅದೇ ಇಂದಿನ ಸೂರ್ಯನು ಹಿಂದಿನ ಚಂದ್ರನು ಮುಕ್ತಿಯ ಶಾಂತಿಯು ಮುಕ್ತಿಯ ಶಾಂತಿಯು

ಧರ್ಮವೇ ಶಕ್ತಿಯ ಗಣಿ

±ÀÈAUÉÃj zÀQëuÁªÀiÁßAiÀÄ ¦ÃoÀzÀ dUÀzÀÄÎgÀÄUÀ¼ÀÄ ²æà ²æà ²æà ZÀAzÀæ±ÉÃRgÀ ¨sÁgÀwà ªÀĺÁ ¸Áé«ÄUÀ¼ÀÄ 1926£Éà E¸À«AiÀÄ ¥sɧæªÀjAiÀÄ°è ¸ÀAZÁgÀzÀ°èzÀÝgÀÄ. DUÀ ªÀÄzsÀÄgÉAiÀÄ GvÀÛAUÀr JA§ÄªÀ°è ©qÁgÀªÀiÁrzÀÝgÀÄ. F «μÀAiÀĪÀ£ÀÄß PÉýzÀ ¸ÀºÀ¸ÁægÀÄ ¨sÀPÁÛ¢UÀ¼ÀÄ D zÀQëuÁªÀÄÆwð ¸ÀégÀƦ ZÀAzÀæ±ÉÃRgÀ ¨sÁgÀwà ªÀĺÁ¸Áé«ÄUÀ¼À zÀgÀê£ÀPÉÌAzÀÄ §gÀÄwÛzÀÝgÀÄ.DUÀ ªÀÄzsÀÄgÉAiÀÄ°èAiÉÄà ªÀQ®gÁVzÀÝ ²æà ªÉAPÀlgÁªÀÄ LAiÀÄågï CªÀgÀÄ  zÀ±Àð£ÀPÉÌAzÀÄ ºÉÆgÀlªÀgÀÄ CªÀgÀ ¥ÀPÀÌzÀ ªÀÄ£ÉAiÀĪÀgÁzÀ ªÀÄAvÉñÀégÀ ±ÀªÀÄð CªÀgÀÄ  dUÀÄ°AiÀÄ ªÉÄÃ¯É PÀĽwgÀĪÀÅzÀ£ÀÄß PÀAqÀÄ CªÀgÀ£ÀÄß §gÀĪÀAvÉ PÉýzÀgÀÄ. DzsÀĤPÀgÁVzÀÝ CªÀgÀÄ £À£ÀUÉ F ¸ÀA£Áå¹UÀ¼À¯Éè¯Áè £ÀA©PɬĮè EªÉ¯Áè §ÆmÁnPÉ JAzÀgÀÄ DzÀgÀÆ CªÀgÀ£ÀÄß PÀÄvÀƺÀ®PÁÌzÀgÀÆ §gÀĪÀAvÉ LAiÀÄågï CªÀgÀ£ÀÄß PÉýPÉÆAqÁUÀ ¸Àj ºÁUÁzÀgÉ £Á£ÀÄ ¤ªÀÄäAvÉ ¥ÀAZÉAiÉįÁè GqÀĪÀÅ¢®è £À£Àß vÀgÀºÀ £Á£ÀÄ §gÀÄwÛä JAzÀÄ DV£À PÁ®zÀ  ¥Á±ÁÑvÀå GqÀÄ¥À£ÀÄß zsÀj¹ ºÉÆgÀlgÀÄ. £ÀAvÀgÀ C¯Éèà ªÉâPÉAiÀÄ »A¨ÁUÀzÀ°è £ÉqÉAiÀÄÄwÛgÀĪÀ J®èªÀ£ÀÄß UÀªÀĤ¸ÀÄvÁÛ ¤AwzÀÝ ±ÀªÀÄðgÀÄ F ¸ÀA£Áå¹AiÀÄ PÁ°UÉ ©Ã¼ÀĪÀÅzÀÄ F ¸