Posts

Showing posts from November, 2014

ನಾ ಕಂಡ ಸತ್ಯ

ಒಂದು ತಿಂಗಳ ಹಿಂದೆ ವೈಟ್ ಫೀಲ್ಡ್ ಎಸ್.ಜೆ.ಆರ್ ಮುಂದೆ ಒಂದಷ್ಟು ಜನ ನವಯುವಕರು  ಹೋಗೋ ಬರೋರಿಗೆಲ್ಲಾ ಏನೋ ಹೇಳ್ತಾ ನಿಂತಿದ್ದರು. ಅದರ ಮುಂದೆನೇ ಹೋಗುತ್ತಿದ್ದ ನನ್ನನ್ನು ಕರೆದರು. ಯಾವ ಬ್ಯಾಂಕನೋರೋ ಲೋನ್ಗೆ ಕರಿತಿರಬೇಕು ಅಂತ ತಿಳ್ಕೊಂಡೆ. ನೋಡಿದ್ರೆ ಅವರುಗಳು ಒಂದು ಎನ್.ಜಿ.ಓ ಸಂಸ್ಥೆಯಿಂದ ಬಂದವರಾಗಿದ್ದರು. ಅದರಲ್ಲಿದ್ದವನೊಬ್ಬ ನನ್ನ ಕರೆದು. "ನೋಡಿ ಭಾರತದಲ್ಲಿ ಅತ್ಯಾಚಾರ ಜಾಸ್ತಿ ಆಗ್ತಿದಾವೆ. ಅದರ ಬಗ್ಗೆ ಅರಿವು ಮೂಡಿಸೋಕೆ ನಾವು ಬಂದಿರೋದು. ಈಗ ಮೊನ್ನೆ ಮೊನ್ನೆ ಸ್ಕೂಲ್ ಮಗುಮೇಲೆ ಪ್ರಕರಣ ಆಯ್ತು ಇವೆಲ್ಲಾ ಭಾರತದಲ್ಲಿ ಹೆಚ್ಚಾಗುತ್ತಿದೆ ಅದಕ್ಕೆ ನಾವು ಜನರನ್ನ "ಎಜ್ಯುಕೇಟ್ " ಮಾಡಬೇಕು." ಹಂಗೆ ಹಿಂಗೆ ಅಂದ. ಅವನ ಮಾತನ್ನ ತಾಳ್ಮೆಯಿಂದ ಕೇಳಿದ ನಂತರ ಅವನಿಗೆ ಉತ್ತರಿಸಲು ಹೊರಟೆ. ಅದು ಒಂದು ಘಂಟೆಗಳ ಸುದೀರ್ಘ ಚರ್ಚೆಯಾಗಿತ್ತು ಆ ಪಾದಾಚಾರಿ ಮಾರ್ಗದಲ್ಲಿ. ಹಿಂದುವಿನಿಂದ ಮುಸ್ಲಿಂ ಮಥಕ್ಕೆ ಕನವರ್ಟ್, ಆದವನೋಂದಿಗೆ ದೊಡ್ಡವಾದವೇ ನೆಡೀತು. ಅಲ್ಲಿ ಬಂದ ಹಲವಾರು ಪ್ರಶ್ನೆಗಳಿಗೆ ನನ್ನ ಚಿಂತನೆ,ನನ್ನ ಆದರ್ಶದಿಂದ ನೀಡಿದ ಉತ್ತರಗಳನ್ನು ನಿಮ್ಮೊಂದಿಗೆ ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ. ಎಸ್ ನಾವೆಲ್ಲಾ ನಾಗರೀಕ ಸಮಾಜದಲ್ಲಿದ್ದೇವೆ. ಎಸ್ ನಾವೆಲ್ಲಾ ಎಜ್ಯುಕೇಟೆಡ್. ಆದರೂ ಈ ಅತ್ಯಾಚಾರವೇನು? ಈ ಮೃಗೀಯ ವರ್ತನೆ ಏಕೆ? ಒಂದು ಸೋ ಕಾಲ್ಡ್ ನಾಗರೀಕ,ಎಜ್ಯುಕೇಟೆಡ್ ಸಮಾಜದಲ್ಲಿ ಈ ರೀತಿಯಾಗಿ ಒಂದು ಹೆಣ