Posts

Showing posts from 2015

ಶರಣೆಂಬೆ ಶಾರದಾಂಬೆ

ನೀ ಎನ್ನ ತಾಯವ್ವ ನೀ ಎನ್ನ ತಾಯಿ ನಗುಮೊಗದ ತಾಯೇ ಶ್ರೀ ಶಾರದಾಂಬೆ ನೀ ಶುದ್ದ ಪ್ರಕೃತಿ ಜಗದೊಳು ತುಂಬಿರುವೆ ನಾ ಕೇವಲ ವಿಕೃತಿ ಜಗದೊಳು ಪುಟ್ಟಿರುವೆ ವಿಕೃತಿಯ ಪ್ರಾಕೃತಿಸಿ , ಶೂನ್ಯದೊಳು ಗುಣಿಸಿ ನಿಸ್ಸತ್ವವಾ ಸತ್ವವಾಗಿಸೋ ಪರಮ ಚೈತನ್ಯವೋ ನೀನು ಶ್ರೀ ಶಾರದಾಂಬೆ ಸೃಷ್ಠಿಕಾರಣವೋ ನೀ ಮಹಾಮಾತೆ ಸೌಂದರ್ಯದ ಗಣಿಯೋ ನೀ ಶ್ರೀ ಲಲಿತೆ ಸರ್ವಮಂಗಳೆಯೋ ನೀನು ಶ್ರೀ ಮಾತೆ ಹಸಿದವರಿಗೆ ಹಸಿವನೀಗಿಸೋ ಅನ್ನದಾತೆ , ಶ್ರೀ ಶಾರದಾಂಬೆ ಜಗವೊಂದು ಮಾಯಾಪಂಜರ ನಾನೊಂದು ಗಿಳಿಯೋ ಜಗದ ಡಂಭವ ಬಿಡಿಸಿ ಶುದ್ದಜ್ಞಾನವ ಎರೆದು ಜೀವನಾಂತ್ಯವ ತೋರೋ ಆದಿ ಗುರುವೋ ನೀನು ಪರಾತತ್ವವಾ ತಿಳಿಸೋ ಮೋಕ್ಷದಾಯಿನಿ ನೀನು ಶ್ರೀ ಶಾರದಾಂಬೆ ದೇಹದಾ ಕಣಕಣದ ಸತ್ವವೋ ನೀನು ಮಹಾರಾಜ್ಷಿ ಬಾಳಿನಾ ಕ್ಷಣಕ್ಷಣದ ತುಡಿತವೋ ನೀನು ಆನಂದ ಸ್ವರೂಪಿ ನಿರ್ಗುಣದ ಗುಣವೋ , ನಿರ್ವಿಕಾರದ ಆ ಕಾರವೋ ನೀ ಬ್ರಹ್ಮಾಜ್ಞಿ ನೀನಿಲ್ಲದೇ ಏನಿಲ್ಲಾ , ನಿನ್ನಿಂದಲೇ ಜಗವೆಲ್ಲಾ ಜಗದ ಹೃದಯದಾ ಶಕ್ತಿ ನೀನು ಶ್ರೀ ಶಾರದಾಂಬೆ ಜಗದ ಹೃದಯದಾ ಶಕ್ತಿ ನೀನು ಶ್ರೀ ಶಾರದಾಂಬೆ ನೀ ಎನ್ನ ತಾಯವ್ವ ನೀ ಎನ್ನ ತಾಯಿ ನಗುಮೊಗದ ತಾಯೇ ಶ್ರೀ ಶಾರದಾಂಬೆ

ಹಠ ಮಾಡದಿರು

ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು ಮನವು ಮಿಡಿಯುತಿಹುದು ನಿನ್ನ ಸನಿಹಕೆ ಹೃದಯ ಬೀಗುತಿಹುದು ನಿನ್ನ ಸ್ಪರ್ಶಕೆ ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು ತಿಳಿದಿರುವೆ ನೀನೆಲ್ಲವ, ಮನದ ಚಿತ್ತವು ನೀನು ಹೊರಟೆಯೆಂದರೆ ಧಿಕ್ಕರಿಸಿಹೆ ನಿನ್ನ ಮನವ ನೀನು ನಿನ್ನ ಪಯಣವು ಸೆಳೆದು ನೆಡೆದಿದೆ ನನ್ನ ದೇಹದ ಪ್ರಾಣವ ವಿರಹ ವೇದನೆ ಬಂದು ಬಡಿದಿದೆ ನನ್ನ ಮನದ ದಡವ ಜಗವೆಲ್ಲ ಮಸುಕು ನೀ ಎದುರಿಗಿರಲು ಭಯದ ಸೋಲೋ, ನಾ ನಿನ್ನ ಕೈ ಹಿಡಿದಿರಲು ನಿನ್ನ ಮೊಗವದೋ ಕೆಣಕುತಿಹುದು ನನ್ನ ಶಕ್ತಿಯಿರ್ದೊಡೆ ಪಡೆ, ನೀ ಎನ್ನ ನನ್ನ ನೂರು ಮೈಲು ದೂರವಿದ್ದರು, ಸನಿಹವಿರುವೆ ಎಂದೂ ನೀನು ನೂರು ಯೋಚನೆ ಹೋಮ್ಮುತ್ತಿದ್ದರು ನಡುವಿರುವ ಹಿರಿ ಚಿಲುಮೆ ನೀನು ನೂರು ಭಾವ ಬಂದು ಹೋದರು, ಬಂದೂ ಹೋಗದ ಸ್ಥಿರ ಭಾವ ನೀನು ನೂರು ಜನುಮ ಎತ್ತಿ ಬಂದರೂ, ಮತ್ತೆ ಸೇರುವೆ ನಿನ್ನೇ ನಾನು ನಿನ್ನೇ ನಾನು ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು.....