Posts

Showing posts from May, 2017

ಕನ್ನಡ ಮೀಡಿಯಮ್

Image
            "ಹಿಂದಿ ಮೀಡಿಯಮ್" ಸಿನೆಮಾ ನೋಡಿದ ಮೇಲೆ ಅದರ ಬಗ್ಗೆ ಏನಾದರೂ ಬರೆಯದೇ ಇದ್ದರೆ ತಪ್ಪು ಅಂಥಾ ಆಗುತ್ತೆ.ಇವತ್ತು ನಾನು ಈ ಸಿನೆಮಾವನ್ನ ಚಿತ್ರೀಕರಿಸಿದ ರೀತಿಯ ಬಗ್ಗೆಯೊ ಅಥವಾ ನಟ ನಟಿಯರ ಬಗ್ಗೆಯೋ ಮಾತಾನಾಡುವುದಿಲ್ಲ ,ಬದಲಾಗಿ ಈ ಚಿತ್ರ ಆಯ್ದುಕೊಂಡಿರುವ ವಿಷಯದ ಬಬ್ಬೆ ಒಂದು ಚೂರು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂಥ ಅನಿಸಿ ಇದನ್ನ ಬರೆಯುತ್ತಿದ್ದೇನೆ.              ಈ ಚಿತ್ರ ಆಯ್ದುಕೊಂಡಿರುವ ವಿಷಯ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗೆಗಿನದು. ಇವತ್ತು ನಮ್ಮ ಘನತೆವೆತ್ತ ಸರ್ಕಾರಗಳು ಆರ್.ಟಿ.ಈ ಇನ್ನೊಂದು ಮತ್ತೊಂದು ಕಾಯ್ದೆಗಳನ್ನ ತಂದು ಶಿಕ್ಷಣವನ್ನ ಬಲ ಪಡಿಸುತ್ತಿದ್ದೇವೆ ಎಂದು ಬಿಂಬಸಿಕೊಳ್ಳುತ್ತಿರಬಹುದು. ಆದರೆ ನಿಜವಾಗಲು ಈ ಕಾಯ್ದೆ ಸವಲತ್ತುಗಳು ಒಬ್ಬ ಸಾಮಾನ್ಯ ಪ್ರಜೆಯವರೆಗೂ ತಲುಪುತ್ತಿದೆಯಾ? ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಲವರ್ದನೆಯಾಗುತ್ತಿದೆಯಾ? ಇವು ಕಾಡುವ ಪ್ರಶ್ನೆಗಳು.           ಆದರೆ ನಿಮ್ಮ ಯೋಚನೆ ಸರಿ ಸರ್ಕಾರದ ವ್ಯವಸ್ಥೆಗಳು ಈ ಮಹಾನ್ ದೇಶದ ಪ್ರಜೆಗಳಿಗಿಂತ ಅವರವರ ಕುಟುಂಬ,ವಂಶ ಪೋಷಣೆಗೆ ಪೂರ್ತಿಯಾಗಿ ಸಹಕರಿಸುತ್ತಿರುತ್ತದೆ. ನಿಮ್ಮ ಯೋಚನೆ ಸರಿಯೂ ಹೌದು. ಈ ಕಾಯ್ದೆಗಳಿಂದ ನಮ್ಮ ಘನತೆವೆತ್ತ ಸರ್ಕಾರ ಬೊಬ್ಬೆ ಹೊಡೆಯುತ್ತಿರುವುದೇನೆಂದರೆ "ಸ್ವಾಮಿ ನೀವು ಯಾಕೆ ಆ ಥರ್ಡ ಕ್ಲಾಸ್ ಸರಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನ ಸೇರಿಸುತ್ತೀರಿ? ಅಲ್ಲಿ ಕಲಿತರೆ