Posts

Showing posts from 2018

ನಾನಿರುವೆನು ನಿನ್ನ ಜೊತೆ

ಕನ್ನಡವೇ ನೀನೇಕೆ ಸೊರಗಿರುವೇ? ನಾನಿರುವೆನು ನಿನ್ನ ಜೊತೆ ತಾಯ ಗರ್ಭದಲಿ ಕಿವಿ ತಮಟೆ ತಟ್ಟಿದಾ ಪ್ರಣವ ನೀನೇ ಸ್ವರಗಳೇ ಮಜ್ಜೆಯಾಗಿ ವ್ಯಂಜನಗಳೇ ಮಾಂಸವಾಗಿಹವು ನನ್ನಲಿ ಹೃದಯದಿ ಪ್ರಾಣಾಂಕುರವಾಗುವ ಮುನ್ನ ನೀ ಆವರಿಸಿದ್ದೆ ಪೂರ್ತಿ ನನ್ನ ನಿನ್ನ ರೂಪವೇ ನನ್ನ ಈ ಜನ್ಮದಾ ಅಸ್ಮಿತೆ ನೀನು ನಾನಾಗಿ ನಾನೇ ನೀನಾಗಿರುವಾಗ ನೀನೇಕೆ ಮರೆಯಾಗಿರುವೇ? ನಾನಿರುವೆನು ನಿನ್ನ ಜೊತೆ ನನ್ನ ದುಃಖದಾ ಆರ್ದತೆ ನೀನೇ ನಕ್ಕಾಗ ಬೊಬ್ಬಿರಿದ ಹಾಸ್ಯ ನೀನೇ ಭಯದೋತ್ತರದ ಚೀತ್ಕಾರ ನೀನೇ ಕಡುಕೋಪದಿಂದ ಉಸುರಿದ ಅಗ್ನಿ ಜ್ವಾಲೆಯೂ ನೀನೇ ನೆಲೆಸಿದಾ ಶಾಂತಿಯ ಮಾರ್ಧವತೆಯೂ ನೀನೇ ನೀನೇಕೆ ನಿರ್ಭಾವವಾಗಿರುವೇ? ನಾನಿರುವೆನು ನಿನ್ನ ಜೊತೆ ತಾಯಿಯಾ ಆರೈಕೆಯಾ ಪ್ರೀತಿ ನೀನು ತಂದೆಯಾ ಶಿಕ್ಷಣದ ಬುದ್ದಿ ನೀನು ಅಜ್ಜ ಅಜ್ಜಿಯರ ಆಶ್ರಯದ ಪರಂಪರೆ ನೀನು ಬಂಧುಗಳ ಬಂಧನದಾ ಗೀಳು ನೀನು ವಿಶ್ವಾಸದ ಸ್ನೇಹದಾ ಸೇತು ನೀನು ನೀನೇಕೆ ಏಕಾಂಗಿ? ನಾನಿರುವೆನು ನಿನ್ನ ಜೊತೆ ಗಣಿತದಾ ಅಗಾಧತೆಯ ಕಲಿಸಿದ್ದು ನೀನೇ ವಿಜ್ಞಾನದ ವೈಖರಿಯ ಪರಿಚಯಿಸಿದ್ದೂ ನೀನೇ ಸಮಾಜದ ಸಂಭ್ರಮವ ಉಣಿಸಿದ್ದೂ ನೀನೇ ನೂರು ಭಾಷೆಗಳ ಅರ್ಥೈಸಿದ ಅರಿವು ನೀನೇ ನನ್ನೆಲ್ಲಾ ಜ್ಞಾನದ ಮೂಲ ನೀನೇ ನೀನೇಕೆ ಕಳಾಹೀನವಾರಿರುವೇ? ನಾನಿರುವೆನು ನಿನ್ನ ಜೊತೆ ಅಗಸ್ತ್ಯ ಮುನಿವರೇಣ್ಯರ ಅರ್ಚಿಸಿದ ಪೂಜ್ಯೆ ನೀನು ಜನಕನಿಗೆ ಮಳೆಯುಣಿಸಿದಾ ಗಂಗೆ ನೀನು ಪಾಂಡವರಿಗೆ ಆಶ್ರಯವಿತ್ತ ಗೃಹಲಕ್ಷ್ಮಿಯ