ಡ್ರಾಮ ತದರಿನನ.........
"ಬೊಂಬೆಯಾಡ್ಸೋನು ಮ್ಯಾಲೆ ಕುಂತವ್ನೆ ನಮ್ಗೆ ನಿಮಗೆ ಯಾಕೆ ಟೆನ್ಸನ್ನು" ನಮಸ್ಕಾರ ಗೆಳೆಯರೆ,ಮೇಲಿನ ಸಾಲು ನೊಡುತ್ತಿದ್ದಂತೆ ನಿಮಗೆ ಡ್ರಾಮ ಚಿತ್ರ ನೆನಪಾಗುತ್ತೆ ಅಲ್ವ.ಹೌದು ಗೆಳೆಯರೆ ನಾನು ಈ ಮೂಲಕ ಚಿತ್ರದ ಬಗ್ಗೆ ನನ್ನ ಅಭಿಪ್ರಾಯವನ್ನು ಹೇಳುವ ಒಂದು ಚಿಕ್ಕ ಪ್ರಯತ್ನವನ್ನ ಮಾಡುತ್ತಿದ್ದೇನೆ. ಯೋಗರಾಜ್ ಭಟ್ರ "ಡ್ರಾಮ" ಚಿತ್ರ ಶುಕ್ರವಾರ ಬಿಡುಗಡೆ ಆಗಿತ್ತು.ಆಗಲೇ ಬಹು ನಿರೀಕ್ಷೆಯನ್ನು ಹೊತ್ತು ನಿಂತಂತಹ ಚಿತ್ರ ಅದು. ಹಾಡುಗಳ ವಿಚಾರ,ಸಾರರಹಿತ ಚಿತ್ರ,ಬಿಟ್ಟಿ ಸಂಭಾಷಣೆ ಇಂತಹ ಹಲವಾರು ನಿಂದನೆಗಳು ಮತ್ತು ಅವರ ಚಿತ್ರಗಳನ್ನ ನೋಡಿ ಹಲವು ಪ್ರಶ್ನೆಗಳ ಉತ್ತರಕ್ಕೆ ಕಾಯುತ್ತಿದ್ದವರಿಗೆ ಈ ಚಿತ್ರವಾದರು ಉತ್ತರ ನೀಡಬಹುದೇ ಎಂದು ಕಾಯುತ್ತಿದ್ದೆ.ಆದರೆ ಭಟ್ರು ಒಂದು ಮಟ್ಟಿಗೆ ಎಲ್ಲಕ್ಕೂ ಉತ್ತರಿಸುವಲ್ಲಿ ಗೆದ್ದಿದ್ದಾರೆ.ಡ್ರಾಮ ಗೆದ್ದಿದೆ. ಭಟ್ರು ಮತ್ತೊಮ್ಮೆ ನನಗೆ ಕಥೆಗಿಂತ ಪಾತ್ರಪೋಷಣೆಯೇ ಮುಖ್ಯ ಎಂಬುದನ್ನು ನಿರೂಪಿಸಿದ್ದಾರೆ.ಹೌದು ಭಟ್ರ ಎಲ್ಲಾ ಚಿತ್ರಗಳಲ್ಲೂ ಕಥೆಗಿಂತ ಪಾತ್ರ ಪೋಷಣೆಯೇ ಮುಖ್ಯವಾಗಿರುತ್ತೆ ಈ ಚಿತ್ರದಲ್ಲಿ ಬರುವಂತಹ ಪ್ರತಿಯೋಂದು ಪಾತ್ರಗಳಿಗೆ ಅದರದೇ ಆದಂತಹ ಅರ್ಧ ಮತ್ತು ಉದ್ದೇಶಗಳಿವೆ.ಭಟ್ರು ಪ್ರತಿಯೊಂದು ಪಾತ್ರಗಳಿಗೂ ಸಹ ನ್ಯಾಯ ಒದಗಿಸಿವಲ್ಲಿ ಗೆದ್ದಿದ್ದಾರೆ. ಭಟ್ರ ಚಿತ್ರಗಳಲ್ಲಿ ಖುಷಿಯವಿಚಾರವೆಂದರೆ ಕಾಂಕ್ರೀಟ್ ಕಾಡಿನಿಂದ ದೂರ ಹೋಗಿ ಹಳ್ಳಿಗಳಲ್ಲಿ ಚಿತ್ರಿಸುವ ಬಗೆ. ಹಳ್ಳಿಗಳ ...