ಜಾಗೋ ಭಾರತ್ ಜಾಗೋ
1960 ರೋಮ್ ಒಲಿಂಪಿಕ್ಸ್ ಭಾರತದ “ಪ್ಲೆಯಿಂಗ್ ಸಿಕ್” ಮೊದಲನೆಯವನಾಗಿ ಓಡುತ್ತಿದ್ದವ ಒಮ್ಮೆ ಹಿಂದಿರುಗಿ ನೋಡಿದ, ಅಷ್ಟರಲ್ಲಿ ಹಿಂದೆ ಉಳಿದ ಎಲ್ಲರೂ ಮುಂದೆ ಹೋಗಿಯಾಗಿತ್ತು. ಇದು “ಭಾಗ್ ಮಿಲ್ಕಾ ಭಾಗ್” ಚಿತ್ರದಲ್ಲಿ ಬರುವ ಮೊದಲ ಸೀನ್.ಈ ಸೀನ್ ನೋಡಿದಾಕ್ಷಣ ಕಂಡದ್ದು ಮಿಲ್ಕಾ ಸಿಂಗ್ ಅಲ್ಲ ಬದಲಾಗಿ ಭಾರತದ ಈಗಿನ ಪರಿಸ್ಥಿತಿ ಕಣ್ಣ ಮುಂದೆ ಹಾಗೇ ರೂಪುಗೊಳ್ಳಲು ಶರುವಾಯಿತು. ಭಾರತದ ಯುಕರಲ್ಲಿ ಶಕ್ತಿ ಇಲ್ಲವಾ? ಭಾರತದ ಜನರ ಸಂಸ್ಕೃತಿಗೆ ಅರ್ಥವಿಲ್ಲವಾ? ಭಾರತದ ಜನರು ಹೊದ್ದು ಮಲಗಿಕೊಳ್ಳಲು ಕಾರಣವಾದರೂ ಏನು? ಭಾರತೀಯರಾದ ನಾವು ಈ ಶೊಚನೀಯ ಪರಿಸ್ಥಿತಿಯಲ್ಲಿರಲು ಕಾರಣವಾದರು ಏನು? ನಿಜವಾಗಲು ಭಾರತದ ಪ್ರಸ್ತುತ ಸ್ತಿತಿಗೆ ಕಾರಣವಾದರು ಏನು? ನಾವು ಎಡವಿದ್ದೆಲ್ಲಿ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದವು.ಮಿಲ್ಕಾ ಸಿಂಗ್ ತನ್ನೆಲ್ಲಾ ಶಕ್ತಿಯನ್ನ ಮೀರಿ ಒಲಿಂಪಿಕ್ ಅಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದ, ಆತ ತನ್ನೆಲ್ಲಾ ಜೀವನವನ್ನ ಪಣವಾಗಿಟ್ಟು ತನ್ನೊಡನೆ ತಾನು ಹೋರಾಡಿ ಗೆದ್ದಿದ್ದಾ, ಆದರೂ ಆ ಹಳೆಯ ಕಹಿನೆನಪುಗಳಲ್ಲವೆ ಆತನ ದೃತಿಗೆಡಿಸಿದ್ದು? ...