Posts

Showing posts from December, 2013

ತೇರಿನಾ ಜಾತ್ರೆ

ಕನಸುಗಳ ಸಂತೆಯಲಿ ಕಳೆದುಹೋಗುವ ಕನಸಾಗದಿರು ನೀನು ನನ್ನ ಒಲವಿನೂರಿನ   ಜಾತ್ರೆಯಲಿ ಪ್ರೀತಿ ಹೊತ್ತು ಸಾಗುವ ತೇರಾಗು ಪಯಣದ ಹಾದಿಗೆ ಕೊನೆಯೊಂದೇ ಮರಣವು ಎಳೆದು ಸಾಗುವವು ಕಾಲದ ಸೆಳೆತವು ಹೊತ್ತು ಸಾಗುವೆ ನಿನ್ನ ರಾಜವೀದಿಯಲಿ ನಾನು ಧಿಕ್ಸೂಚಿಯಾಗಿಹುದು ಕಲ್ಲು ಮುಳ್ಳಿನ ಪಾಠವು ಗುಡಿಯೊಳಗೆ ಬೆಳಗಿಹುದು ಪ್ರೇಮದ ಬೆರಗು ಉತ್ಸವವ ಹೊರಟಿಹುದು ಪ್ರೀತಿಯ ಬೆಳಗು ಬೆಳಗಿನ ಬೆಳಕಿನೊಳು ಜಗವೆಲ್ಲ ಹೊಳಪು ಓಡಿಹುದು ಕಪ್ಪು, ಊರಿನಾ ಹೊರಗೂ ನೀಗೂಡಿದರೆ ಸಂಭ್ರಮದ  ಜಾತ್ರೆಯೋ ಇಲ್ಲವದುವೆ ಮಸಣದ ಮೆರವಣಿಗೆಯೊ ನಿನ್ನ ಪ್ರೀತಿಯ ಸುಧೆಗೆ ಕಾದಿರುವ ಹಂಸಪಕ್ಷಿಯೋ ನಾನು ತುಂಬು ಪ್ರೀತಿಯ  ಕೊಡುವ ತಾಯಾಗು ನೀನು ಸಂಜೀವಿನಿಯ ಈಯುವ ತಾಯಾಗು ನೀನು