ಇದು ನನ್ನ ಜೀವನ
ಇದು ನನ್ನ ಜೀವನ. ದುಡಿಯುವೆ ನನಗೆ ಬೇಕಾದಂತೆ ಖರ್ಚು ಮಾಡುವೆ ಇದು ನನ್ನ ಜೀವನ. ವೀಕೆಂಡ್ ಪಾರ್ಟಿ, ಗೆಳಯ ಗೆಳತಿಯರೊಂದಿಗೆ ಪ್ರವಾಸ, ಹೋಮ್ಸ್ಟೇ, ರೆಸಾರ್ಟ್ ಅಲ್ಲಿ ಮೋಜು ಮಸ್ತಿ ಮಾಡುವೆ ಇದು ನನ್ನ ಜೀವನ. ಪೂರ್ತಿ ಎಣ್ಣೆ ಹೊಡೆದು ನಶೆಯ ಅಮಲಿನಲ್ಲಿ ತೇಲುವೆ ಇದು ನನ್ನ ಜೀವನ. ಈ ಜಗತ್ತಿನ ಜೀವನದಲ್ಲೇನಿದೆ ಬರೀ ನಿಸ್ಸಾರ. ಆ ನಿಸ್ಸಾರವನ್ನ ಸಾರವನ್ನಾಗಿಸುವುದೇ ಈ ಮೋಜು ಮಸ್ತಿ ಹಾಗಾಗಿದ್ದರಿಂದ ಇದು ನನ್ನ ಜೀವನ ನಾನು ಏನು ಬೇಕಾದರೂ ಮಾಡುವೆ. ಇದು ನನ್ನ ಜೀವನ ಇದನ್ನ ನಯಂತ್ರಿಸುವುದು ಯಾತಕ್ಕೆ? ಇದು ನನ್ನ ಜೀವನ ನಿಯಂತ್ರಿಸುವ ಹಕ್ಕು ಯಾರೀಗೂ ಇಲ್ಲ. ಇದು ನನ್ನ ಜೀವನ ನಿಯಂತ್ರಣದ ಗಾಳಕ್ಕೆ ಸಿಕ್ಕುವ ಮೀನು ನಾನಲ್ಲ, ಆಗಸದಲ್ಲಿರುವ ಮೋಡಕ್ಕಿಂತ ಮೇಲೆ ಹಾರುವ ಹದ್ದಿನ ಸ್ವಾತಂತ್ರ್ಯ ನಾ ಇಚ್ಚಿಸುವೆ ಅದನ್ನ ಪಡೆದೇ ತೀರುವೆ . ಹೆಂಡತಿ, ಮಕ್ಕಳು, ಸಂಭಂಧಗಳು , ಶಿಷ್ಟಾಚಾರಗಳು,ಸಂಸ್ಕೃತಿಗಳು, ಧರ್ಮಗಳು, ಆಚಾರಗಳು ಇವೆಲ್ಲ ನಾ ಬಯಸುವ ಖುಷಿಯನ್ನ ನನಗೆ ಎಂದಿಗೂ ಕೊಡಲಿಲ್ಲ ಕೊಡುವುದೂ ಇಲ್ಲ . ಇದು ನನ್ನ ಜೀವನ ಅದನ್ನ ನಿಯಂತ್ರಿಸುವ ಅಧಿಕಾರ ಇವುಗಳಿಗೆ ಕೊಟ್ಟವರಾರು? ಮೊದಲೇ ಹೇಳಿದಂತೆ ಇವೆಲ್ಲಾ ಆಗಸದಲ್ಲಿ ಹರಡಿರುವ ಮೋಡದಂತೆ ನಮಗೆ ಸ್ವಚ್ಚಂದವಾಗಿ ಹಾರಾಡಲೂ ಬಿಡದೆ ನಮ್ಮನ್ನ ಬಂಧಿಸಿಡುವ ಎಲ್ಲೆಗಳು, ನ...