ನೀ ಹತ್ತಿರಕೆ ಬಂದಾಗ ಬೆಳಕೇ ಇಲ್ಲದ ಜಗಕೆ ಸೂರ್ಯೋದಯವದಂತಾಗುವುದು
ನಿಶಬ್ಧವಾದ ಪ್ರಕೃತಿಗೆ ಹಕ್ಕಿಗಳ ಕಲರವ ಜೀವ ತುಮ್ಬಿದಂಥಾಗುವುದು
ಮರುಭೂಮಿಯಲ್ಲಿ ಅಲೆಯುವವನಿಗೆ ಜಲಪಾತ ಸಿಕ್ಕಿದಂಥಾಗುವುದು
ನೀ ಬಂದು ದೂರ ಹೋದಾಗ ಕತ್ತಲು ಕವಿದು ಕಲರವ ಕರಗಿ
ಸುಂಟರ ಗಾಳಿ ಎದ್ದು ಬರುವ ಮಳೆಯಂತೆ ನನ್ನ ಕಣ್ಣಿನಲಿ ಕಣ್ಣೀರು ಜಿನುಗುವುದು
ಗೆಳತಿ ಕಣ್ಣೀರು ಜಿನುಗುವುದು
Comments
Post a Comment