ಸುರಿಯುತಿರುವ ಈ ಜಡಿ ಮಳೆಯು ಕೆದುಕುತಿಹುದು ಮನವೆಂಬ ಜಲಾಶಯವ ಹುಟ್ಟುವ ಭಾವನೆಗಳೆಷ್ಟೋ,ಬರುವ ಯೋಚನೆಗಳೆಷ್ಟೋ,ಈಡೇರುವ ನೆನಪುಗಳೆಷ್ಟೋ, ಈ ಸಂಭ್ರಮದಲಿ ಮರೆಯಲಾರದ ನನ್ನವಳ ನೆನಪುಗಳೆಷ್ಟೋ ಆಡಿದ ಪಿಸುಮಾತುಗಳೆಷ್ಟೋ, ತೀರದ ದಾಹವ ತಣಿಸಲು ಮೀಯಬೇಕು ಇನ್ನು ಈ ಮಳೆಯಲಿ ಮಳೆಯ ಸಿಂಚನದಲಿ
ಕಂಡ ಕನಸೆಲ್ಲವೂ ಕಲ್ಲಾದವು ಬಂದ ನೆನಪೆಲ್ಲವೂ ಮರೆಯಾದವು ಗೊಂದಲದ ಬದುಕಲ್ಲಿ ಆಯ್ಕೆಯೇ ಮುಳ್ಳಾದವು ಕನಸ ಕಾಣಲಾರೆನಾ ನೆನಪ ಬಯಸಲಾರೆನಾ ಬಂದ ಜೀವನವ ಬದುಕ ಹೊರತು ವಿಧಿಯಿಲ್ಲಯೆನಗೆ ಬಂದ ಆಸೆಗಳ ಬಿಡದ ಹೊರತು ಬಿಡುವಿಲ್ಲವೆನಗೆ ಸಾಗುತಿಹುದು ಪಯಣ ಮುಂದೊಂದು ಪಯಣದೆಡೆಗೆ ಬೆಳೆಯುತಿಹುದು ಆಸೆಯ ಭಂಡಾರ ಆಗಸದೆಡೆಗೆ ನಿಲ್ಲಿಸಲಾಗದು ಪಯಣ ಅದು ಪ್ರಕೃತಿ ತಡೆಯಲಾಗದು ಆಸೆ ಅದೊಂದು ಆಷಾಡಭೂತಿ ಆಸೆ ನಿಂತೊಡನೆ ಪಯಣ ಮುಗಿವುದು ಪಯಣ ನಿಂತೊಡನೆ ಬದುಕು ಮುಗಿವುದು ಬಂದ ಜನರೆಲ್ಲ ನಿಂತರು ಮನದ ಹೊಸ್ತಿಲಲಿ ತೆರೆದ ಕದವ ದಾಟಿದವರಿಲ್ಲ ದಾಟಿದವ ಮನದೊಳಗೆ ಉಳಿಯಲಿಲ್ಲ ಒಂಟಿನಾನಾಗಿರುವೆ ಬದುಕ ಆಟದಲಿ ಹುಡುಕಾಟ ಪಯಣಿಗನಿಗೆ ಬದುಕ ಪಥದಲಿ ಸಾಧನೆಯ ಛಲಕೆ ಬೇಕಿಂದು ಮನವು ಮನಸಿನ ಹಾದಿಯಲಿ ನೂರೆಂಟು ವಿಘ್ನ ಕನಸಿನ ಕಲ್ಪನೆಗೆ ಸಿಗಲಿಲ್ಲ ಬಿಂಬ ಕಾರಣವು ನೂರು ಅಡಚಣೆಯ ಹೆಸರಿಗೆ ಗೆಲ್ಲುವವನೊಬ್ಬನೇ ತನ್ನ ಗೆದ್ದವ ಗೆಲ್ಲುವವನೊಬ್ಬನೇ ತನ್ನ ಗೆದ್ದವ
ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು ಮನವು ಮಿಡಿಯುತಿಹುದು ನಿನ್ನ ಸನಿಹಕೆ ಹೃದಯ ಬೀಗುತಿಹುದು ನಿನ್ನ ಸ್ಪರ್ಶಕೆ ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು ತಿಳಿದಿರುವೆ ನೀನೆಲ್ಲವ, ಮನದ ಚಿತ್ತವು ನೀನು ಹೊರಟೆಯೆಂದರೆ ಧಿಕ್ಕರಿಸಿಹೆ ನಿನ್ನ ಮನವ ನೀನು ನಿನ್ನ ಪಯಣವು ಸೆಳೆದು ನೆಡೆದಿದೆ ನನ್ನ ದೇಹದ ಪ್ರಾಣವ ವಿರಹ ವೇದನೆ ಬಂದು ಬಡಿದಿದೆ ನನ್ನ ಮನದ ದಡವ ಜಗವೆಲ್ಲ ಮಸುಕು ನೀ ಎದುರಿಗಿರಲು ಭಯದ ಸೋಲೋ, ನಾ ನಿನ್ನ ಕೈ ಹಿಡಿದಿರಲು ನಿನ್ನ ಮೊಗವದೋ ಕೆಣಕುತಿಹುದು ನನ್ನ ಶಕ್ತಿಯಿರ್ದೊಡೆ ಪಡೆ, ನೀ ಎನ್ನ ನನ್ನ ನೂರು ಮೈಲು ದೂರವಿದ್ದರು, ಸನಿಹವಿರುವೆ ಎಂದೂ ನೀನು ನೂರು ಯೋಚನೆ ಹೋಮ್ಮುತ್ತಿದ್ದರು ನಡುವಿರುವ ಹಿರಿ ಚಿಲುಮೆ ನೀನು ನೂರು ಭಾವ ಬಂದು ಹೋದರು, ಬಂದೂ ಹೋಗದ ಸ್ಥಿರ ಭಾವ ನೀನು ನೂರು ಜನುಮ ಎತ್ತಿ ಬಂದರೂ, ಮತ್ತೆ ಸೇರುವೆ ನಿನ್ನೇ ನಾನು ನಿನ್ನೇ ನಾನು ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು.....
ಒಬ್ಬ ಹಿಂದು,ಹಬ್ಬದ ಬೆಳಿಗ್ಗೆ ಎದ್ದು ಸ್ನಾನ ಮುಗಿಸಿ ಹೊಸ ಬಟ್ಟೆ ತೊಟ್ಟು ದೇವಸ್ತಾನಕ್ಕೆ ಹೊಗುತ್ತಾನೆ. ಹಿಂದುವಿನ ಮನೆಯ ಒಂದು ಸಣ್ಣ ಕೊಣೆಯಲ್ಲಿ ಒಂದಷ್ಟು ದೇವರ ಮೂರ್ತಿಗಳನ್ನಿರಿಸಿ ಅದಕ್ಕೆ ಕೈ ಮುಗಿಯುತ್ತಾರೆ. ಗೌರೀ ಗಣೇಶ ಹಬ್ಬದಂದು ಬೀದಿ ಬೀದಿಗಳಲ್ಲಿ ಗೌರೀಗಣೇಶರ ವಿಗ್ರಹಗಳನ್ನಿರಿಸಿ ಪೂಜಿಸುತ್ತಾರೆ.ಪ್ರತಿಯೊಬ್ಬರ ಭಾವನೆ ದೇವರು ಆ ವಿಗ್ರಹದಲ್ಲಿದ್ದಾನೆ ಎಂಬುದೆ.ಗರ್ಭಗುಡಿಯ ಸರಳಿನ ಹಿಂದೆ ದೇವರನ್ನಿರಿಸಿ ಪೂಜಾರಿಯನ್ನು ಕಾವಲಿಗಿರಿಸಿ ದೇವರನ್ನು ಒಂದು ಕೋಣೆಗೆ ಸೀಮೆತಗೊಳಿಸಿದೆಯೆ ಹಿಂದೂ ಧರ್ಮ. ಖಂಡಿತ ಇಲ್ಲಾ. ಹಿಂದು ಧರ್ಮದಲ್ಲಿ ವೇದೋಪನಿಷದ್ಗಳು ಹೇಳಿದ ಪ್ರತಿಯೊಂದು ಆಚರಣೆಗೂ ಒಂದು ಅರ್ಥವಿದೆ.ಹಾಗೆಯೇ ಈ ಮೂರ್ತಿ ಪೂಜೆಯು ಸಹ. ಮನುಷ್ಯ ಯಾವುದಾದರೊಂದನ್ನು ಗುರುತಿಸಬೇಕಾದರೆ ಆ ವಸ್ತುವಿನ ಪೂರ್ಣ ಚಿತ್ರಣ ಆತನ ಮನಸ್ಸಿನಲ್ಲಿ ಮೂಡಬೇಕು.ಒಮ್ಮೆ ಮೂಡಿದರೆ ಆ ವಸ್ತುವನ್ನು ಕತ್ತಲಲ್ಲೂ ಆತ ಗುರುತಿಸಬಲ್ಲನು.ಆ ನಿಟ್ಟಿನಲ್ಲಿ ಸಗುಣೋಪಾಸನೆ ನಿರಾಕಾರ ತತ್ವದರ್ಶನದೆಡೆಗೆ ಹೋಗುವ ದಾರಿಯಾಗಿದೆ. ಹಿಂದೂ ಧರ್ಮದಲ್ಲಿ ಮುನ್ನೂರಮುವತ್ತು ಕೋಟಿ ದೇವತೆಗಳಿದ್ದಾರೆ ಎಂ...
Comments
Post a Comment