ಚಂದಿರನ ಚೆಲುವನ್ನು ದರ್ಪಣದಿ ಹಿಡಿದಿಟ್ಟು ನಿನ್ನ ಮೊಗ ನೋಡುವೆನು ಸುಕುಮಾರಿ, ಸ್ಪರ್ಶದಲೆ ತಂಪಿರಿಸಿ ನೋಟದಲೆ ಮನಕುಣಿಸಿ ಕಾಡುತಿಹೆ ನೀ ಎನ್ನ ರಾಜ್ ಕುಮಾರಿ, ಮುದ್ದಿಸೆನ್ನನು ಮನಬಂದಂತೆ, ನಿಂದಿಸೆನ್ನನು ಮಗುವಿನಂತೆ, ಕಡು ಪೋಲಿ ಹುಡುಗನ ಪೋರಿಯಾಗಿಹೆ ನೀನು ಬಂದಿಸೆನ್ನನು ನಿನ್ನ ಮೋಹ ಪಾಶದೊಳು, ನೀನೊಂದೆ ಜಗವೆನಗೆ ಅರಿಯೆನು ಬೇರೆ, ಬೆಳಕಾಗು ಎನ್ನ ಗುರಿಪಥದ ಮೇಲೆ, ಕಾಮಿನಿಯು ನೀ ಎನ್ನ ಜೀವನದಿ ಸುಳಿದೆ, ಮಾಯೆ ನೀ ಎನ್ನಯ ಮನವನು ಕಸಿದೆ, ನಿನ್ನ ಈ ಬಂದನವೇ ಜೇವನವು ಎನಗೆ, ನನ್ನ ನೀ ಬಿಟ್ಟ ಮರುಕ್ಷಣವೇ ಮರಣವು ಎನಗೆ ಗೆಳತಿ ಮರಣವು ಎನಗೆ
Posts
Showing posts from January, 2013
ಮನದ ಮನೆ
- Get link
- X
- Other Apps
ನೀನಿಲ್ಲದ ಮನದ ಮನೆಯಲಿ ಮುಂಜಾವು ಮೂಡದು ಎದ್ದ ಕಾಮನೆಗಳ ಸಂತೈಸುವವರಿಲ್ಲ ಬಂದ ನೆಂಟರ ಸತ್ಕರಿಸುವವರಿಲ್ಲಿಲ್ಲ ನಿನ್ನ ನಗುವಿನ ತೋರಣವಿಲ್ಲ ನಿನ್ನ ಮಾತಿನ ಆಲಾಪನೆ ಅಲ್ಲಿಲ್ಲ ತುಂಬಿಹುದು ಮನವು ಜಡದ ಮತ್ತಿನಲಿ ಕಳೆದ ಕರಾಳ ರಾತ್ರಿಗಳ ಎಣಿಕೆಯಲಿ ನಿನ್ನ ಸ್ಪರ್ಶದ ಆಲೋಚನೆಯಲಿ ದೂರವಿದ್ದಷ್ಟು ನೀ,ದೂಕುವವು ನನ್ನ ಮನೆಯ ಉಗ್ರಾಣದಲಿ ಹಳೆ ನೆನಪ ಕೂಡಿಟ್ಟ ಆ ಮೂಲೆಯ ಉಗ್ರಾಣದಲಿ ಬಂದುಬಿಡು ಬೇಗ,ಮನದ ಮನೆಗೆ ಸವಿ ಓಲವಿನ ಹಾಲ ಉಕ್ಕಿಸಿ ಅಚ್ಚೊತ್ತಿಬಿಡು ನಿನ್ನ ಪ್ರೀತಿಯ,ಮನದ ಮನೆಯ ಗೋಡೆಯಲಿ ತುಂಬಿ ಬಿಡು ಮನೆಯ ವಾತ್ಸಲ್ಯದ ಧೂಮದಲಿ ಗೆಳತಿ ಬದುಕಿಸು ನನ್ನನು, ನಿನ್ನ ಪ್ರೀತಿಯ ಪಾಷದಲಿ