ಮನದ ಮನೆ

ನೀನಿಲ್ಲದ ಮನದ ಮನೆಯಲಿ
ಮುಂಜಾವು ಮೂಡದು
ಎದ್ದ ಕಾಮನೆಗಳ ಸಂತೈಸುವವರಿಲ್ಲ
ಬಂದ ನೆಂಟರ ಸತ್ಕರಿಸುವವರಿಲ್ಲಿಲ್ಲ

ನಿನ್ನ ನಗುವಿನ ತೋರಣವಿಲ್ಲ
ನಿನ್ನ ಮಾತಿನ ಆಲಾಪನೆ ಅಲ್ಲಿಲ್ಲ
ತುಂಬಿಹುದು ಮನವು ಜಡದ ಮತ್ತಿನಲಿ
ಕಳೆದ ಕರಾಳ ರಾತ್ರಿಗಳ ಎಣಿಕೆಯಲಿ
ನಿನ್ನ ಸ್ಪರ್ಶದ ಆಲೋಚನೆಯಲಿ

ದೂರವಿದ್ದಷ್ಟು ನೀ,ದೂಕುವವು ನನ್ನ
ಮನೆಯ ಉಗ್ರಾಣದಲಿ
ಹಳೆ ನೆನಪ ಕೂಡಿಟ್ಟ ಆ ಮೂಲೆಯ ಉಗ್ರಾಣದಲಿ

ಬಂದುಬಿಡು ಬೇಗ,ಮನದ ಮನೆಗೆ ಸವಿ ಓಲವಿನ ಹಾಲ ಉಕ್ಕಿಸಿ
ಅಚ್ಚೊತ್ತಿಬಿಡು ನಿನ್ನ ಪ್ರೀತಿಯ,ಮನದ ಮನೆಯ ಗೋಡೆಯಲಿ
ತುಂಬಿ ಬಿಡು ಮನೆಯ ವಾತ್ಸಲ್ಯದ ಧೂಮದಲಿ
ಗೆಳತಿ ಬದುಕಿಸು ನನ್ನನು, ನಿನ್ನ ಪ್ರೀತಿಯ ಪಾಷದಲಿ



Comments

Popular posts from this blog

ಬದುಕಿನ ಹವಣಿಕೆ

aarakshan a great movie

kavitheya gonchalu