ಗೊಂದಲದ ಬದುಕು

ಬರೆಯಲೇನೋ ಹೊರಟೆ ಅಕ್ಷರದ ಬುತ್ತಿ ಇಲ್ಲದೆ,
ಗೀಚಲೇನೋ    ಹೊರಟೆ ಲೇಖನಿಯ ಹಿಡಿಯುವ ಮನಸ್ಸಿಲ್ಲದೆ,
ಹೇಳಲೇನೋ    ಹೊರಟೆ ಹೇಳುವ ವಿಷಯವಿಲ್ಲದೆ,
ಕಾಣಲೇನೋ     ಹೊರಟೆ ಕಣ್ಣ ರೆಪ್ಪೆಯ ತೆರೆಯದೆ,
ಇರುವುದೊಂದೇ ಭಾವನೆಗಳ ತೊಡಕಾಟ,
ಬರೆಯಲೋ,ಗೀಚಲೋ,ಹೇಳಲೋ,ಕಾಣಲೋ ಎಂಬ ನಡುವಿನ ಸಂಘರ್ಷ,
ಬೇಡುವುದೊಂದೇ ನಿಮ್ಮದಿಯ ಮನವ, ಗೊಂದಲವಿಲ್ಲದ ನೆಮ್ಮದಿಯ ಮನವ.


Comments