ಯುಗದ ಆದಿ ಯುಗಾದಿ



ಯುಗದ ಆದಿ ಮೊಳಗಿದೆ,
ಯುಗದ ಆದಿ ಮೊಳಗಿದೆ,
ವಸಂತವ ತಂದಿದೆ ಮನಕೆ,
ಹೊಸತನಕೆ ಯುಗದ ನಾಂದಿ ಹಾಡಿದೆ.

ಹೊಸ ಸಾಧನೆಗಳು ಚಿಗುರಿದೆ,
ಹೊಸ ಭಾವನೆಗಳು ಉಕ್ಕಿದೆ,
ಹೊಸ ಕಾರುಣ್ಯವು ಹರಿದಿದೆ,
ಬಂದಿದೆ ಬಂದಿದೆ ಯುಗದ ಆದಿ ಮೊಳಗಿದೆ.


ಸಮರಸವ ಕಲಿಸಿದೆ,
ಸಹ್ಷ್ಣುತೆಯ ಬೆಳಸಿದೆ,
ಕಾಮನನು ದಹಿಸಿದೆ,
ಪೊರೆದಿದೆ ಪೊರೆದಿದೆ ಯುಗದ ಆದಿ ಮೊಳಗಿದೆ.

ಜೀವನವು ಬೆಳಗಿದೆ,
ಮನಗಳು ಅರಳಿವೆ,
ಉತ್ಸಾಹವು ಚಿಮ್ಮಿದೆ,
ಬೆಳಸಿದೆ ಬೆಳಸಿದೆ ಯುಗದ ಆದಿ ಮೊಳಗಿದೆ.



ಮಾಯೆಯು ಹೆಚ್ಚಿದೆ,
ಮನವು ನಂಬಿದೆ,
ಅಜ್ಞಾನವ ಕಳೆವ ಬೆಳಕು ಹರಿದಿದೆ,
ಉದಿಸಿದೆ ಉದಿಸಿದೆ ಹೊಸತು ಯುಗವೊಂದು ಉದಿಸಿದೆ.


Comments