ಕನಸು

ಕಟ್ಟದಿರು ಕನಸಿನ ಸೌಧವ
ಕನಸೆಂಬ ಜೀವನದೊಳು
ಶೃಂಗರಿಸದಿರು ಅದನು
ಆಸೆಯೆಂಬ ವಜ್ರವೈಡೂರ್ಯದೊಳು

ಸೌಧ ಕಂಡೊಡನೆ ಒಳಗೆ ಬರುವರು
ನೂರು ಜನ
ವಿದಾಯ ಹೇಳುವರು
ಮುನ್ನೂರು ಜನ

ಷಡ್ ಶತ್ರುಗಳ ಮಿತ್ರರೆಂದು ಭಾವಿಸಿ
ದಾಸರಾಗಿಹೆವು ನಾವು
ಸುಂದರದ ಕತ್ತಲಲಿ
ಕತ್ತಲಾಗಿಹೆವು ನಾವು

ಕುಣಿದು ಕುಪ್ಪಳಿಸಿದ,ತಿಂದು ತೇಗಿದ
ಪಡೆದು ಬೀಗಿದ ಸಂಭ್ರಮವು
ನಾನು ನನ್ನವರು,ಬಂಧು ಮಿತ್ರರು
ಒಡಗೂಡಿ ನಲಿದ ಖುಷಿಗಳೆಲ್ಲವು
ಭ್ರಮೆಯೆನಿಸುವವು
ಸತ್ಯದ ಅರಿವಾದೊಡನೆ
ನಿಜ ಸತ್ಯದ ಅರಿವಾದೊಡನೆ.

Comments

Popular posts from this blog

ಬದುಕಿನ ಹವಣಿಕೆ

ಮೂರ್ತಿಯಲ್ಲಿದ್ದಾನಾ ಭಗವಂತ

aarakshan a great movie