ನಿತ್ಯ ನೂತನ ಸತ್ಯ ಚೇತನ

ಬಣ್ಣ ಬಣ್ಣದ ಕುಂಚದ ಕಲಾವಿದ ನಿನಗೆ ನೂರು ನಮಸ್ಕಾರ

ಜಡತ್ವದ ಚೈತನ್ಯವ ಬಡಿದೆಬ್ಬಿಸೊ ಗುರುವು ನೀನು
ಕಪ್ಪು ಹಾಳೆಯ ಮೇಲೆ ಬಣ್ಣ ಚೆಲ್ಲುವ ಕಲಾರಸಿಕನೊ ನೀನು

ನಿನ್ನ ಬರುವಿಕೆಗೆ ಕಾದಿವೆ ನೈದಿಲೆಗಳು ನೂರು
ನಿನ್ನ ಉದಯಕೆ ಹಾಡಿವೆ ಇಂಚರಗಳು ಸಾವಿರಾರು

ಶ್ವೇತಾಶ್ವಗಳನೇರಿ ಸೂತ್ರಾಂಕುಶದಿ ನಮ್ಮ ನೆಡೆಸೋ ತೇಜಪುಂಜವೊ ನೀನು
ಭೂತ ಕತ್ತಲೆ ಕೂಡಿ ಮುಕ್ತಿ ಮಂಜಿನ ಚಾರಣಕೆ ಬೆಳಕ ಚೆಲ್ಲುವ ಮಹಾ ಯೋಗಿಯೋ ನೀನು

ಕಾಲನಾ ಸಾರ್ಥದಿ ಹಿಂಡಾಳು ನಾವೆಲ್ಲಾ
ಆಡುವರೀರ್ವರು,ಗೂಡುವರೀರ್ವರು,ತೊರೆಯುವರೀರ್ವರು,ಹೋರುವರೀರ್ವರು
ಇಂದು ಇದ್ದವರು ನಾಳೆ ಋಣ ಮುಕ್ತರು ಮತ್ತೊಂದು ಹಿಂಡಿನಾ ಪಯಣಿಗರು

ದಾಟಿ ಬಂದುದೋ ಅದು ಎಂಬತ್ನಾಲ್ಕು ಲಕ್ಷಾವತಾರ
ಪಡೆದದಿಂತು ಇದು ಭಾವ ಬುದ್ದಿಗಳ ಸಂಯೋಗ
ಅಂದಿನಿಂದಿನವರೆಗೂ ಸವೆದದೊಂದೇ ಕರ್ಮ ಪಾಶದ ಬಂಧನ

ಅಜ್ಞಾನದ ಕತ್ತಲು ಕರಗಿಸಿ ಜೀವಾತ್ಮವ ಮಾಯೆಯೊಳು ಬೆಳಗಿಸಿ
ಅಣುವಿನೊಳು ಅಣುವಾಗಿಸೋ ಭವತಾರಿಣಿಯೊ ನೀನು ಜಗವೆಲ್ಲ ಪೊರೆವ ಭವತಾರಿಣಿಯೊ ನೀನು

Comments

Popular posts from this blog

aarakshan a great movie

ಬದುಕಿನ ಹವಣಿಕೆ

kavitheya gonchalu