ಮುಮುಕ್ಷು
ನನ್ನದೆನ್ನುವುದೇನಿಹುದೆ
ತಾಯೇ
ಎಲ್ಲವೂ
ನಿನ್ನದಹುದೇ
ಪ್ರೇರಕಳು
ನೀನು ಕಾರಕಳು ನೀನು
ನೀ
ಹೆಣೆದ ಲೀಲೆಗೆ ಆಯುಧವು ನಾನು
ಧರ್ಮದಾ
ಪಥದಲಿ ಜೀವನದ ತೇರೋ
ಜೀವನದ
ಭಯಕೆ ಆತ್ಮದಾ ಬೇರೋ
ತುಂಬು
ಮೂಟೆಯ ಹಮಾಲಿಯೊ ನಾನು
ಸಾಗಬೇಕಿದೆ
ಹೊತ್ತು, ಕಳೆದು ಕೊಳ್ಳುವ ತನಕ
ಸಲಹುವಳು
ನೀನು, ಪೊರೆಯುವಳು ನೀನು
ಶಾಶ್ವತ
ಬಂಧುವು ನೀನು, ಜಗಜ್ಜನನಿ
ಸತ್ಯ
ಪ್ರೀತಿಯು,ನಿತ್ಯ ಪ್ರೇಮವು
ನಿನ್ನ
ಮಡಿಲದೋ, ಜಗದ ಶಯ್ಯೆ
ಧರ್ಮದಾ
ಬಾಳ್ವೆ, ಅರಿವಿರುವ ತತ್ವ
ತತ್ವದಾ
ಅರಿವು,ನಿನ್ನಯಾ ದರುಶನ
ದರುಶನದ
ಪರಿ, ಜಗವೆಲ್ಲ ಬೆಳಕೋ
ಬೆಳಕಿನಾ
ಸಿಂಧು, ನಿತ್ಯಾದಾ ಬ್ರಹ್ಮ
ಮೋಡದಾ
ಹನಿಯು, ತೊರೆಯಾಗಿ ನದಿಯಾಗಿ
ಬಂದುಗೂಡುವವು,
ಶರಧಿಯಾ ಒಡಲು
ಜಗವೆಲ್ಲ
ನೀನಾಗೆ, ನಾವೆಲ್ಲ ಬಿಂಬ
ಬಿಂಬ
ಒಡೆದೊಡನೆ, ಉಳಿಯುವುದೊಂದೇ ನೀನೆಂಬ ಸತ್ಯ
ನೀನೆಂಬ
ಸತ್ಯ.
Comments
Post a Comment