Posts

Showing posts from March, 2013

ಚಂದಿರನ ಅನ್ವೇಷಣೆ

ನಿಲ್ಲು ನೀರೆ ಆಡದೆ ಕಾಣಲಿ ಚಂದದ ಚಂದಿರ, ಬೀಸುವ ತಂಗಾಳಿಯ ಸ್ಪರ್ಶಕೆ ಕಲಕದಿರು ಬಿಂಬವ. ಮೂಡಿದ ಭಾವನೆಯೊಂದು ಮನದಿ, ಕೆದಕ ಹೊರಟಿದೆ ಮನಸ ಮಗನ ನಿನ್ನ ಮೊಗದಲಿ, ಬೇಡುವೆನು ನಿನ್ನ, ನಿಂತು ಸಹಕರಿಸು ಮತ್ತೆ ಆಡದೆ ಆ ತಂಗಾಳಿಯ ಸುಖಸ್ಪರ್ಶಕೆ ನೋಡುವ ಹಂಬಲ ಚೆಂದಿರನ ಚೆಲುವ ಕಣ್ತುಂಬಿಕೊಳ್ಳುವ ಹಂಬಲ ಆ ಕಾಂತಿಯ, ಅನುಭವಿಸುವ ಹಂಬಲ ಆ ಹಾಲ ಬೆಳಕ ಸ್ಪರ್ಶಿಸುವ ಹಂಬಲ ಆ ತಿಳಿಗಾಳಿಯ. ನಿನ್ನ ಮೊಗವದೋ ನನಗೆ ದರ್ಪಣದಂತಿರಲಿ ನಿನ್ನ ಆವರಿಸಿದೆ ಬೆಳದಿಂಗಳ ಬೆಳಕು, ಕಂಡ ಚೆಂದಿರನ ಬಿಂಬಿಸೆನ್ನನು ನನಗೆ, ತಂಗಾಳಿಗು ಓಲದೆ,ಬಿರುಗಾಳಿಗು ಜಗ್ಗದೆ. ಸುತ್ತ ಕವಿದಿದೆ ಕಡುಗತ್ತಲು ಜೊತೆಗೆ ಬೆರೆತಿದೆ ಆ ತಿಳಿಬೆಳಕು, ಸಹಕರಿಸು ನಿನ್ನ ಚಂಚಲತೆಯ ಬಿಟ್ಟು ದಾರಿ ದೀಪವು ನಿನ್ನ ಮೊಗವದೋ ನನಗೆ. ನಿಲ್ಲು ನೀರೆ ಆಡದೆ ಕಾಣಲಿ ಚಂದದ ಚೆಂದಿರ, ಬೀಸುವ ತಂಗಾಳಿಯ ಸ್ಪರ್ಶಕೆ ಕಲಕದಿರು ಬಿಂಬವ. (ಮನಸ ಮಗ:- ನಮ್ಮ ಪುರಾಣಗಳ ಪ್ರಕಾರ ಚಂದಿರನನ್ನು ಶ್ರೀ ಮಹಾವಿಷ್ಣುವಿನ ಮುಖದಿಂದ ಹುಟ್ಟಿದವನೆಂದು ಹೇಳುತ್ತವೆ ಅದನ್ನು ಇಲ್ಲಿ ಉತ್ಪ್ರೇಕ್ಷೆಯಾಗಿ ಬಳಸಿದ್ದೇನೆ)

ಗೊಂದಲದ ಬದುಕು

ಬರೆಯಲೇನೋ ಹೊರಟೆ ಅಕ್ಷರದ ಬುತ್ತಿ ಇಲ್ಲದೆ, ಗೀಚಲೇನೋ    ಹೊರಟೆ ಲೇಖನಿಯ ಹಿಡಿಯುವ ಮನಸ್ಸಿಲ್ಲದೆ, ಹೇಳಲೇನೋ    ಹೊರಟೆ ಹೇಳುವ ವಿಷಯವಿಲ್ಲದೆ, ಕಾಣಲೇನೋ     ಹೊರಟೆ ಕಣ್ಣ ರೆಪ್ಪೆಯ ತೆರೆಯದೆ, ಇರುವುದೊಂದೇ ಭಾವನೆಗಳ ತೊಡಕಾಟ, ಬರೆಯಲೋ,ಗೀಚಲೋ,ಹೇಳಲೋ,ಕಾಣಲೋ ಎಂಬ ನಡುವಿನ ಸಂಘರ್ಷ, ಬೇಡುವುದೊಂದೇ ನಿಮ್ಮದಿಯ ಮನವ, ಗೊಂದಲವಿಲ್ಲದ ನೆಮ್ಮದಿಯ ಮನವ.

ಜೀವನವ ಜೀವಿಸಿ ನೋಡಿ

              ಜೀವನ ಈ ಪದದ ಅರ್ಥವನ್ನ ಹುಡುಕುತ್ತಲೇ ಪ್ರತಿಯೊಬ್ಬರೂ ಜೀವಿಸುತ್ತಾರೆ.ಹಾಗಾದರೆ ಜೀವನದ ಅರ್ಥವನ್ನ ಕಂಡುಕೊಂಡವರೆಷ್ಟು ಮಂದಿ? ಜೀವನದ ಪ್ರತಿ ಹೆಜ್ಜೆಯಲೂ ಹೋರಾಟ. ಅಜ್ಞಾನವೆಂಬ ಕತ್ತಲೊಂದಿಗೆ ಹೋರಾಟ. ಬೆಳಕಿನೆಡೆಗೆ ಹೋಗುವ ಧಾವಂತ.ಬೆಳಕ ಕಂಡವರ ಜೀವನದಿಂದ ನಾವು ಕಲಿಯಬೇಕಾದ ಪಾಠವೆಂದರೆ “ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ಪಯಣವೇ ಜೀವನ”.               ಪ್ರತಿಯೊಬ್ಬ ಮನುಷ್ಯನ ಜೀವನವು ಒಂದು ಹೋರಾಟ.ಪ್ರತಿಯೊಬ್ಬನೂ ಸೈನಿಕನೇ. ಪ್ರತಿಯೊಬ್ಬರೂ ತನ್ನೊಳಗಿರುವ ರಾಗದ್ವೇಷಗಳೊಂದಿಗೆ ಹೋರಾಟವನ್ನ ಪ್ರತಿದಿನ ಪ್ರತಿಕ್ಷಣವೂ ನೆಡೆಸುತ್ತಿರುತ್ತಾನೆ. ಒಮ್ಮೆ ಯೋಚಿಸಿ ಗೆಳೆಯರೆ ನಿಮ್ಮ ಜೀವನದಲ್ಲಿ ನೀವು ನೆಡೆಸಿರುವ ಹೋರಾಟವನ್ನ.ಚಿಕ್ಕ ಮಗುವಾಗಿದ್ದಾಗ ಚಿಕ್ಕದೊಂದು ಚಾಕೊಲೇಟ್ ಗಾಗಿ ನೀವು ನೆಡೆಸಿದ ಹೋರಾಟ,ಅದನ್ನ ಪಡೆದಾಗ ಆದ ಸಂತೋಷ. ಬೆಳೆಯುತ್ತಾಬಂದ ಹಾಗೆ ನಿಮ್ಮ ವಾತವರಣದೊಂದಿಗೆ ನೆಡೆಸಿದ ಹೋರಾಟ,ನಂತರ ನಿಮ್ಮೊಳಗೇ ಏಳುವ ಭಾವನೆಗಳ ಏರಿಳಿತದೊಂದಿಗೆ ನೆಡೆಸಿದ ಹೋರಾಟ,ವೃತ್ತಿ ಬದುಕಿನಲ್ಲಿ ಏಳ್ಗೆಗಾಗಿ ನೆದೆಸುವ ಹೋರಾಟ,ಕೀರ್ತಿ,ಯಶಸ್ಸು,ಹಣ,ಶಾಂತಿಗಾಗಿ ನೆಡೆಸುವ ಹೋರಾಟ,ಕೊನೆಗೆ ಕೆಲವರು ಸಾವಿಗಾಗಿ ನೆಡೆಸುವ ಹೋರಾಟ ಅಬ್ಬಾ!! ಅದೆಷ್ಟು ಹೋರಾಟ ಗೆಳೆಯರೆ. ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದೀರಿ ಹಾಗೆ ಮುಂದೆಯೂ ಎದುರಿಸುತ್ತೀರಿ ಅದೆಂತಹ ಶಕ್ತಿ ನಿಮ್ಮಲ್ಲಿ.ಪ್ರತಿಯೊಂದು ಹೋರಾಟದಲ್ಲಿಯೂ ಗೆಲ್ಲುವ ಹುಮ್ಮಸ್ಸಲ್ಲೇ