Posts

Showing posts from 2013

ತೇರಿನಾ ಜಾತ್ರೆ

ಕನಸುಗಳ ಸಂತೆಯಲಿ ಕಳೆದುಹೋಗುವ ಕನಸಾಗದಿರು ನೀನು ನನ್ನ ಒಲವಿನೂರಿನ   ಜಾತ್ರೆಯಲಿ ಪ್ರೀತಿ ಹೊತ್ತು ಸಾಗುವ ತೇರಾಗು ಪಯಣದ ಹಾದಿಗೆ ಕೊನೆಯೊಂದೇ ಮರಣವು ಎಳೆದು ಸಾಗುವವು ಕಾಲದ ಸೆಳೆತವು ಹೊತ್ತು ಸಾಗುವೆ ನಿನ್ನ ರಾಜವೀದಿಯಲಿ ನಾನು ಧಿಕ್ಸೂಚಿಯಾಗಿಹುದು ಕಲ್ಲು ಮುಳ್ಳಿನ ಪಾಠವು ಗುಡಿಯೊಳಗೆ ಬೆಳಗಿಹುದು ಪ್ರೇಮದ ಬೆರಗು ಉತ್ಸವವ ಹೊರಟಿಹುದು ಪ್ರೀತಿಯ ಬೆಳಗು ಬೆಳಗಿನ ಬೆಳಕಿನೊಳು ಜಗವೆಲ್ಲ ಹೊಳಪು ಓಡಿಹುದು ಕಪ್ಪು, ಊರಿನಾ ಹೊರಗೂ ನೀಗೂಡಿದರೆ ಸಂಭ್ರಮದ  ಜಾತ್ರೆಯೋ ಇಲ್ಲವದುವೆ ಮಸಣದ ಮೆರವಣಿಗೆಯೊ ನಿನ್ನ ಪ್ರೀತಿಯ ಸುಧೆಗೆ ಕಾದಿರುವ ಹಂಸಪಕ್ಷಿಯೋ ನಾನು ತುಂಬು ಪ್ರೀತಿಯ  ಕೊಡುವ ತಾಯಾಗು ನೀನು ಸಂಜೀವಿನಿಯ ಈಯುವ ತಾಯಾಗು ನೀನು

ಜೊತೆಗಾತಿ

ನೀ ನನ್ನ ಬದುಕಿನ ಪ್ರಾಣ ಪ್ರಾಣದೊಳಗಿನ ಮೌನ ಮೌನದೊಳಗಿನ ಗಾನ ಗಾನವೆಂಬ ಜೀವಸುಧೆಯ ಧ್ಯಾನ ಧ್ಯಾನದೊಳು ಮಾಯೆಯಾಗಿ ಮಾಯೇಯೋಳು ಹೆಣ್ಣಾಗಿ ಹೆಣ್ಣೆಂಬ ಆಸರೆಯಾಗಿ ಆಸರೆಗೆ ಬೆಡುತಿಹೆ ನಾನೊಬ್ಬ ತಿರುಕ ತಿರುಕನ ಜೀವನದ ಸಿರಿಯೋ ಸಿರಿಯ ದಾರಿಗೆ ಛಲದ ಭಲವೋ ಭಲದ ಜನನಕೆ ನೀ ಮಹಾಶಕ್ತಿಯೋ ಶಕ್ತಿ ನೀ ಎನ್ನಯ ಹೃದಯದ ಮನೆಗೋ ಮನೆಯೆಂಬ ಗುಡಿಗೆ ನೀ ಹೊನ್ನ ಕಲಶ ಕಲಶದ ಚಿಗುರು ಈ ನಿನ್ನ ಹರೆಯ ಹರೆಯದ ಭಾವಕೆ ನೀನೊಂದು ಸ್ಪೂರ್ತಿ ಸ್ಪೂರ್ತಿಯ ಚಿಲುಮೆಯೋ ನಿನ್ನ ಜೊತೆಗಿನ ಜೀವನ ಜೀವನದಿ ಹಡಗು ನೀ ನೀ ನನ್ನ ಪಯಣದೀ ಪಯಣದ ದಡವೋ ನಿತ್ಯದ ಸುಖವೊ ಸುಖದ ಅಂತ್ಯವೋ ಬದುಕಿನ ಗುರಿಯೋ ಗುರಿಯ ತಲುಪಲು ಬೇಕು ನಿನ್ನಯ ಜೊತೆಯೋ ನಿನ್ನಯ ಜೊತೆಯೋ

ಗಿರಿಗಳ ನಡುವಿನ ನಗರಿ ಶೃಂಗೇರಿ

                 ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು. ಕರ್ಣಗಳಿಗೆ ಮುದ ನೀಡುವ ಸಾವಿರಾರು ಪಕ್ಷಿ ಸಂಕುಲದ ಗಾನ.ಆ ಗಾನವನ್ನ ನೂರಾರು ಹೂ ಹಣ್ಣುಗಳ ಗಂಧದೊಂದಿಗೆ ಬೆರೆಸಿ ಎಲ್ಲೆಲ್ಲೂ ಔತಣವನ್ನೀಡುವ ಆ ತಣ್ಣನೆಯ ಗಾಳಿ.ಪ್ರಕರ ಸೂರ್ಯನ ಶಾಕಕ್ಕೆ ಆವಿಯಾಗುವ ನೀರು ಬೆಟ್ಟ ಗುಡಗಳ ನಡುವೆ ಎದ್ದು ಬಾನ ಸೇರಿ ಮೋಡವಾಗುವ ರೋಮಾಂಚನವಾದ ದೃಶ್ಯಗಳು. ಈ ವೈಭೋಗದಲ್ಲಿ ವೈರಾಗ್ಯವನು ತಾಳಿ ತಪಸ್ಸನ್ನಾಚರಿಸುವಂತೆ ದೃಢವಾಗಿ ನಿಂತಿರುವ ಋಷಿಸ್ವರೂಪವಾದ ಬೆಟ್ಟ ಗುಡ್ಡಗಳು.                 ಈ ನಡುವೆ ಸನಾತನ ಧರ್ಮವನ್ನ ಯುಗಯುಗಗಳಿಂದ ಸಂರಕ್ಷಿಸುತ್ತಾ ಮಾನವ ಜನಾಂಗಕ್ಕೆ ಆದ್ಯಾತ್ಮದ ಅಮೃತವನ್ನ ನೀಡುತ್ತಾ ಜದ್ಗುರುವಾಗಿ ವಿರಾಜಿಸುತ್ತಿರುವ ನಗರ ಶೃಂಗೇರಿ, ಮಲೆನಾಡಿನ ಮುಕುಟವೇ ಈ ಶೃಂಗೇರಿ ಹಾಗು ತನ್ನ ಮಕ್ಕಳನ್ನ ಪ್ರೀತಿಯಿಂದ ಸಲಹುತ್ತಿರುವ ತಾಯಿ ಇಲ್ಲಿನ ಅದಿದೇವತೆ ಶ್ರೀ ಶಾರಾದಾಂಬೆ. ಈ ಪುಣ್ಯಕ್ಷೇತ್ರ ಇತಿಹಾಸ ಕೇವಲ ಕಲಿಯುಗದಲ್ಲ.ಶೃಂಗೇರಿಯ ಉಲ್ಲೇಕವು ರಾಮಾಯಣ ಮಹಾಭಾರತಗಳಲ್ಲಿಯೂ ಇವೆ.ಕಾಶ್ಯಪರ ಮಗನಾದ ವಿಡಂಭಕ ಋಷಿಯ ಮಗನಾದ ಋಷ್ಯಶೃಂಗರು ಇದ್ದ ಪುಣ್ಯಕ್ಷೇತ್ರ ಈ ಶೃಂಗೇರಿ. ಶ್ರೀ ಋಷ್ಯಶೃಂಗರು ಧಶರಥ ಮಹಾರಾಜನು ಪುತ್ರ ಸಂತಾನವಿಲ್ಲದೆ ಪುತ್ರಕಾಮೇಷ್ಠಿಯಾಗವನ್ನ ಮಾಡಲು ನಿರ್ದರಿಸಿದ್ದಾಗ ಆ ಕಾರ್ಯವನ್ನ ಪೂರ್ಣಗಳಿಸಿ ಕೊಟ್ಟು ಸನಾತನ ಧರ್ಮದ ರಕ್ಷಣೆಗಾಗಿ ನಮ್ಮೆಲ್ಲರ ಒಳಿತಿಗಾಗಿ ಪಿತೃ ಸ್ವರೂಪರಾದ ಶ್ರೀ ರಾಮರ ಅವತಾರಕ್ಕೆ ನಾಂದಿ ಹಾಡಿದ ಮಹಾನು

ಜಾಗೋ ಭಾರತ್ ಜಾಗೋ

                                 1960 ರೋಮ್  ಒಲಿಂಪಿಕ್ಸ್ ಭಾರತದ “ಪ್ಲೆಯಿಂಗ್ ಸಿಕ್” ಮೊದಲನೆಯವನಾಗಿ ಓಡುತ್ತಿದ್ದವ ಒಮ್ಮೆ ಹಿಂದಿರುಗಿ ನೋಡಿದ, ಅಷ್ಟರಲ್ಲಿ ಹಿಂದೆ ಉಳಿದ ಎಲ್ಲರೂ ಮುಂದೆ ಹೋಗಿಯಾಗಿತ್ತು. ಇದು “ಭಾಗ್ ಮಿಲ್ಕಾ ಭಾಗ್” ಚಿತ್ರದಲ್ಲಿ ಬರುವ ಮೊದಲ ಸೀನ್.ಈ ಸೀನ್ ನೋಡಿದಾಕ್ಷಣ ಕಂಡದ್ದು ಮಿಲ್ಕಾ ಸಿಂಗ್ ಅಲ್ಲ ಬದಲಾಗಿ ಭಾರತದ ಈಗಿನ ಪರಿಸ್ಥಿತಿ ಕಣ್ಣ ಮುಂದೆ ಹಾಗೇ ರೂಪುಗೊಳ್ಳಲು ಶರುವಾಯಿತು.      ಭಾರತದ ಯುಕರಲ್ಲಿ ಶಕ್ತಿ ಇಲ್ಲವಾ? ಭಾರತದ ಜನರ ಸಂಸ್ಕೃತಿಗೆ ಅರ್ಥವಿಲ್ಲವಾ? ಭಾರತದ ಜನರು ಹೊದ್ದು ಮಲಗಿಕೊಳ್ಳಲು ಕಾರಣವಾದರೂ ಏನು? ಭಾರತೀಯರಾದ ನಾವು ಈ ಶೊಚನೀಯ ಪರಿಸ್ಥಿತಿಯಲ್ಲಿರಲು ಕಾರಣವಾದರು ಏನು? ನಿಜವಾಗಲು ಭಾರತದ ಪ್ರಸ್ತುತ ಸ್ತಿತಿಗೆ ಕಾರಣವಾದರು ಏನು? ನಾವು ಎಡವಿದ್ದೆಲ್ಲಿ? ಹೀಗೆ ಹತ್ತು ಹಲವು ಪ್ರಶ್ನೆಗಳು ಉದ್ಭವಿಸಿದವು.ಮಿಲ್ಕಾ ಸಿಂಗ್ ತನ್ನೆಲ್ಲಾ ಶಕ್ತಿಯನ್ನ ಮೀರಿ ಒಲಿಂಪಿಕ್ ಅಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡಿದ್ದ, ಆತ ತನ್ನೆಲ್ಲಾ ಜೀವನವನ್ನ ಪಣವಾಗಿಟ್ಟು ತನ್ನೊಡನೆ ತಾನು ಹೋರಾಡಿ ಗೆದ್ದಿದ್ದಾ, ಆದರೂ ಆ ಹಳೆಯ ಕಹಿನೆನಪುಗಳಲ್ಲವೆ ಆತನ ದೃತಿಗೆಡಿಸಿದ್ದು?      ಭಾರತದ ಈಗಿನ ಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಸ್ವಾತಂತ್ರ್ಯ ಸಂಗ್ರಾಮ ಎಂಬ ಒಂದು ಮಹಾನ್ ಯುದ್ದದಲ್ಲಿ ಗೆದ್ದ ಜನ ಇನ್ನೂ ವಿಶ್ರಾಂತಿಯಿಂದ ಎದ್ದಿಲ್ಲ. ಭಾರತಕ್ಕೆ ಬೇಕಾಗಿರೋದು ಹಣಶಕ್ತಿಯಾಗಲಿ ಅಥವಾ ಇನ್ನಯಾವುದೇ ಶಕ್ತಿಯ

ಮುರಿದ ಮನೆ

ಕಟ್ಟ ಕಡೆಯ ಊರಿನಲ್ಲಿ ಮುರಿದುಬಿದ್ದ ಮನೆಯೊ ಮೂಡುತಿರುವ ಆಸೆಗೊಂದು ಹಾವು ಚೇಳು ತಡೆಯೊ ಬೋರ್ಗರೆಯಿತು ಮಳೆಯು ಮಿಂಚಿ ಮಾಡ ಜಂತಿ ಭಾರ ತುಂಬಿ ಕಂಬವೊಂದು ಬಲವು ಕುಂದಿ ಇದ್ದ ಮಾಡು ಬಿತ್ತು ಕಳಚಿ ಪಾಯ ಅದುವೆ ಗಟ್ಟಿ ಗಟ್ಟಿ ಗೋಡೆಯದುವೆ ಇನ್ನು ಜಟ್ಟಿ ಬಿದ್ದ ಮಾಡ ಮತ್ತೆ ಕಟ್ಟಿ ತೋರು ನಿನ್ನ ಬಲದ ಶಕ್ತಿ ಗೃಹದ ಕಪ್ಪು ಕಳಚಲಿಂದು ಆಸರೆಯ ಆಲಾಪನೆ ಮೊಳಗಲಿಂದು ಕೂಗ ಕೇಳಿ ಓಡಿ ಬರಲಿ ಇಂದು ನೂರು ಪ್ರಾಣಿ ಪಕ್ಷಿ ದಂಡು ಮನೆಯ ಗುಡಿಯ ಬಲವು ಒಂದೆ ಉರಿಯುತಿರುವ ದೀಪ ಬೆಳಕೆ ಕರಿಯು ಕಳೆದು ಬೆ ಳಗು ಬೆಳಗಿ ಉದ್ಬವಿಸುವ ಚೇತನವೆ ಸಲಹು ಎನ್ನನು ಎನ್ನ ಮನವನು ಎನ್ನ ಮನವನು

ಕನಸು

ಕಟ್ಟದಿರು ಕನಸಿನ ಸೌಧವ ಕನಸೆಂಬ ಜೀವನದೊಳು ಶೃಂಗರಿಸದಿರು ಅದನು ಆಸೆಯೆಂಬ ವಜ್ರವೈಡೂರ್ಯದೊಳು ಸೌಧ ಕಂಡೊಡನೆ ಒಳಗೆ ಬರುವರು ನೂರು ಜನ ವಿದಾಯ ಹೇಳುವರು ಮುನ್ನೂರು ಜನ ಷಡ್ ಶತ್ರುಗಳ ಮಿತ್ರರೆಂದು ಭಾವಿಸಿ ದಾಸರಾಗಿಹೆವು ನಾವು ಸುಂದರದ ಕತ್ತಲಲಿ ಕತ್ತಲಾಗಿಹೆವು ನಾವು ಕುಣಿದು ಕುಪ್ಪಳಿಸಿದ,ತಿಂದು ತೇಗಿದ ಪಡೆದು ಬೀಗಿದ ಸಂಭ್ರಮವು ನಾನು ನನ್ನವರು,ಬಂಧು ಮಿತ್ರರು ಒಡಗೂಡಿ ನಲಿದ ಖುಷಿಗಳೆಲ್ಲವು ಭ್ರಮೆಯೆನಿಸುವವು ಸತ್ಯದ ಅರಿವಾದೊಡನೆ ನಿಜ ಸತ್ಯದ ಅರಿವಾದೊಡನೆ.

ಎಂದು ಬರುವನೋ ರಾಮ

ಎಂದು ಬರುವನೋ ರಾಮ ಮಾಯೆಯಾ ಮನೆ ಕಡೆಗೆ ನನ್ನ ಮನವನು ತಣಿಸಲು ನನ್ನ ಜನರ ಸಲಹಲು ಜಗವೆಲ್ಲ ಬೆಂದಿಹುದು ರಾವಣನ ಧಗೆಗೆ ಜನರೆಲ್ಲ ಸೋತಿಹರು ದುಷ್ಟನ ಭಯಕೆ ತಮದೊಳು ಬೆಳದಿಹನು ಆ ರಕ್ಕಸ ತಮವು ಆವರಿಸಿಹುದು ಈ ಮನಸ ವಿಕೃತಿಯು ಕುಣಿದಿಹುದು ಈ ಪ್ರಕೃತಿಯೊಳಗೆ ಪ್ರಕೃತಿಯು ನೊಂದಿಹುದು ಈ ಮಾಯೆಯೊಳಗೆ ಆರ್ಭಟಿಸುತಿಹುದು ನನ್ನೊಳಗೆ ಆ ಧೈತ್ಯನಾ ಕೂಗು ನಡುಗುತಿಹುದು ನನ್ನೆದೆ ಆ ಘೋರ ಘರ್ಜನೆಗೆ ಅಡಗಿ ಹೋಗಿದೆ ಸಾತ್ವಿಕತೆಯ ಕೂಗು ವಿಜೃಂಬಿಸಿದೆ ಅವಸಾನದ ಹಾಡು ಎಂದು ಬರುವನೋ ರಾಮ ಈ ದುಷ್ಟನಾ ಅಳಿವಿಗೆ ನಾಂದಿಯನು ಹಾಡಲು ಎಂದು ಕರುಣಿಸುವನೋ ರಾಮ ನನ್ನ ನಾ ಕಾಣಲು ಬೇಡುವೆನು ರಾಮನ ರಾವಣನ ಅಂತ್ಯಕೆ ಮಾಯೆಯ ಈ ಜಗದ ಉಳಿವಿಗೆ ದಯತೋರು ರಘುರಾಮ ಯೋಗಿಯ ಪಥದೆಡೆಗೆ ದಯತೋರು ರಘುರಾಮ ಮುಕ್ತಿಯಾ ಬ್ರಹ್ಮನೆಡೆಗೆ

ಜೀವನದ ಸಿಂಹಾವಲೋಕನ

ಅಹಾ! ಅದೆಂತಹ ಬೆಚ್ಚಗಿನ ಆ ಆಸರೆ. ಮತ್ತೆ ಮತ್ತೆ ಮುದುರಿ ಮಲಗುವ ಆ ಸುಖ ನಿದ್ರೆ. ಆಗಾಗ ಸಿಗುವ ಆ ತಾಯಿಯ ಮುತ್ತುಗಳು. ಆಹಾ ಆ ಬೆಚ್ಚಗಿನ ಆಸರೆಯ ಸುಖದ ನೆನಪು ಮಾತ್ರ ಮೆಲುಕು ಹಾಕಲು ಉಳಿದಿದೆ. ನಾವುಗಳು ಆಡುತ್ತಿದ್ದ ಭಯಾನಕ ಆಟಗಳ ನೆನಪುಗಳೆಷ್ಟೋ. ಆಡುವಾಗು ಬಿದ್ದಾಗ ಒಳಗಿನ ಬಿಳಿ ಕಾಣುವಂತೆ ಆಗುತ್ತಿದ್ದ ಅ ಗಾಯದ ಸವಿ ನೋವಿನ ನೆನಪುಗಳು. ಗೆಳಯರೊಂದಿಗೆ ಕಿತ್ತಾಡಿ “ನೀನು ನಮ್ಮನೆಗೆ ಬರಬೇಡ ನನ್ನ ಜೊತೆ ಜಗಳ ಆಡಿದ್ಯ” ಅಂತ ಜಗಳವಾಡಿದ ಆ ನೆನಪುಗಳೆಷ್ಡೋ. ರಬ್ಬರು, ಎರೆಡು ಕಡೆಯು ಬರೆಯುವ ಪೆನ್ಸಿಲ್, ಮೆಂಡರ್ರು, ಅರ್ದ ಮುರಿದ ಸ್ಕೇಲು, ಕಾಗೆ ಕಾಲು ಗುಬ್ಬಿ ಕಾಲಿನಂತಹ ಅಕ್ಷರಗಳು ಅಬ್ಬಾ ನೆನಪಿಸಿಕೊಳ್ಳುತ್ತಾ ಹೊದಂತೆ ಕಣ್ಣು ಒದ್ದೆಯಾಗುತ್ತಾ ಹೋಗುತ್ತದಲ್ವ ಗೆಳೆಯರೆ. ನಮ್ಮ ಮೊದಲನೇ ಮೂರು ಚಕ್ರದ ಸೈಕಲ್ ಅದೆಷ್ಟು ಖುಷಿ ಆ ಒಂದು ರೈಡಿನಲ್ಲಿ. ರಾಜ ರಾಣಿ ಕಳ್ಳ ಪೋಲೀಸ್ ನೆನಪಿರಬೇಕಲ್ವ ಆ ರಾಜ ಬಂದಾಗ ಅರಳಿಕೊಳ್ಳುತ್ತಿದ್ದ ಆ ನಮ್ಮ ಮುಖಗಳು. ಅಪ್ಪ ಬರುವುದನ್ನೇ ಕಾದು ಕಾದು ಅವರು ಬಂದಾಗ ಸಿಕ್ಕುವ ಆ ಚಾಕೋಲೇಟ್, ಕಾದು ಕಾದು ಸಿಗುವ ಈ ಡಿಗ್ರಿಗಿಂತ ಹೆಚ್ಚು ಸಂತೋಷಕೊಡುತ್ತಿತ್ತೇನೋ ಅಲ್ವ ಗೆಳೆಯರೆ. ಸ್ಕೂಲಿನಲ್ಲಿ ಗೆಳೆಯನಿಗೆ ಹೊಡೆದಾಗ ಟೀಚರ್ ಕೊಟ್ಟ ಅ ಏಟು ಅದೆಷ್ಟು ನೋಯುತ್ತಿತ್ತೋ ಅಲ್ವ ಗೆಳೆಯರೆ. ಮಳೆಗಾಲದಲ್ಲಿ ಮಾವಿನಕಾಯಿಗೆ ಖರಾ ಪುಡಿ ಹಾಕಿತಿನ್ನುತ್ತಿದ್ದ ಆ ಸಂತೋಷ ಖಂಡಿತವಾಗಿಯು ಕೆ ಎಫ್ ಸಿ ಕ್ರಷರ್ ಕೊಡೋದು ಸಾಧ್ಯವ

ಉದಯಿಸುವನಾ ಸೂರ್ಯ

ಜಾರಿಹನು ದಿನಕರ ದಿನಗೂಲಿ ಮುಗಿಸಿ ಮತ್ತೊಂದು ಉದಯಕ್ಕೆ ನಾಂದಿಯನು ಹಾಡುತ ಚೆಲ್ಲಿಹುದು ಕೆಂಪು ಪ್ರಕೃತಿಯ ಮಾಯೆಗೆ ಬಳಿದಿಹುದು ಮಾಯೆ ನಮ್ಮ ಈ ಕಣ್ಣಿಗೆ ಅದೆಂತಹ ಅಧ್ಬುತವೊ ಆ ಸೂರ್ಯಾಸ್ತಮವೊ ಅದೆಂತಹ ಆಶ್ಚರ್ಯವೊ ನಮ್ಮೊಳಗಿನ ತಮವೊ ತಮದೊಳು ಹೆದರಿ ಗೂಡ ಸೇರಿದವು ಪಶುಜಂತುಗಳು ಒಳಗತ್ತಲೆಗೆ ಬೆದರಿ ಮೂಲೆ ಹೊಕ್ಕವು ಸದ್ಬಾವನೆಗಳು ತಮೋರಕ್ಕಸ ಎದ್ದಿಹನು ಜಗದಲಿ ಜಗವೆಲ್ಲ ಕಬಳಿಸುವ ಆ ಹುಚ್ಚು ಛಲದಲಿ ಮನದೊಳಗೆ ಬೆಳದಿಹನು ಶಡ್ಗುಣಗಳ ರಕ್ಕಸ ನನ್ನನ್ನೆ ಮುಗಿಸುವ ಆ ನೂರು ಯೋಜನೆಯಲಿ ಕತ್ತಲಾವರಿಸುವುದೋ ಜಗದಲಿ ಭಯದ ಜನನವೊ ನಮ್ಮ ಈ ಮನದಲಿ ಕಣ್ಗೆಟ್ಟಿಹವು ಜಗದ ಮಕ್ಕಳು ಕಾಣದಾಗಿದೆ ದಾರಿ ನೆಡೆಯುವ ಪಥದಲಿ ಉದಯವಾಗುವುದೊ ಆ ಪ್ರಕರ ಬೆಳಕು ಸರ್ವೊದಯವಾಗುವುದೊ ಎಲ್ಲರಾ ಬದುಕು ದಾರಿ ಸವೆಯುವುದು ಆ ಸನಾತನ ನೆಡೆಯಲಿ ದಾರಿ ತಿಳಿಯಾಗುವುದು ಬೆಳಕಿನ ದರ್ಶನದಿ ನಂಬು ನೀ ಬೆಳಕ ತಮವು ಅಡಗುವುದು ತಿಳಿ ನೀ ಭಾರತವ ಒಳಗತ್ತಲೆಯ ಬೆಳಗಿಸಲು ದೇಶವಲ್ಲವೋ ಇದು ತಾಯಿನಾಡು ಎಲ್ಲರನು ಸಲಹುವ ಆ ಚೈತನ್ಯದ ಬೀಡು ನಮ್ಮೊಳಗೆ ಉದಯಿಸುವನಾ ಜ್ಞಾನ ಸೂರ್ಯ ನಮ್ಮೊಳಗೆ ಅಸ್ತಮಿಸುವುದಾಜ್ಞಾನದ ಭಯ ನಮ್ಮೊಳಗಿನ ಬೆಳಕೋ ಬೆಳಗುವುದು ಜಗವ ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ ದಾರಿ ತೋರುವುದು ಜಗಕೆ ಮುಕ್ತಿಯಾ ಮನೆಕಡೆಗೆ

ಬದುಕಿನ ಹವಣಿಕೆ

ಕಂಡ ಕನಸೆಲ್ಲವೂ ಕಲ್ಲಾದವು ಬಂದ ನೆನಪೆಲ್ಲವೂ ಮರೆಯಾದವು ಗೊಂದಲದ ಬದುಕಲ್ಲಿ ಆಯ್ಕೆಯೇ ಮುಳ್ಳಾದವು ಕನಸ ಕಾಣಲಾರೆನಾ ನೆನಪ ಬಯಸಲಾರೆನಾ ಬಂದ ಜೀವನವ ಬದುಕ ಹೊರತು ವಿಧಿಯಿಲ್ಲಯೆನಗೆ ಬಂದ ಆಸೆಗಳ ಬಿಡದ ಹೊರತು ಬಿಡುವಿಲ್ಲವೆನಗೆ ಸಾಗುತಿಹುದು ಪಯಣ ಮುಂದೊಂದು ಪಯಣದೆಡೆಗೆ ಬೆಳೆಯುತಿಹುದು ಆಸೆಯ ಭಂಡಾರ ಆಗಸದೆಡೆಗೆ ನಿಲ್ಲಿಸಲಾಗದು ಪಯಣ ಅದು ಪ್ರಕೃತಿ ತಡೆಯಲಾಗದು ಆಸೆ ಅದೊಂದು ಆಷಾಡಭೂತಿ ಆಸೆ ನಿಂತೊಡನೆ ಪಯಣ ಮುಗಿವುದು ಪಯಣ ನಿಂತೊಡನೆ ಬದುಕು ಮುಗಿವುದು ಬಂದ ಜನರೆಲ್ಲ ನಿಂತರು ಮನದ ಹೊಸ್ತಿಲಲಿ ತೆರೆದ ಕದವ ದಾಟಿದವರಿಲ್ಲ ದಾಟಿದವ ಮನದೊಳಗೆ ಉಳಿಯಲಿಲ್ಲ ಒಂಟಿನಾನಾಗಿರುವೆ ಬದುಕ ಆಟದಲಿ ಹುಡುಕಾಟ ಪಯಣಿಗನಿಗೆ ಬದುಕ ಪಥದಲಿ ಸಾಧನೆಯ ಛಲಕೆ ಬೇಕಿಂದು ಮನವು ಮನಸಿನ ಹಾದಿಯಲಿ ನೂರೆಂಟು ವಿಘ್ನ ಕನಸಿನ ಕಲ್ಪನೆಗೆ ಸಿಗಲಿಲ್ಲ ಬಿಂಬ ಕಾರಣವು ನೂರು ಅಡಚಣೆಯ ಹೆಸರಿಗೆ ಗೆಲ್ಲುವವನೊಬ್ಬನೇ ತನ್ನ ಗೆದ್ದವ ಗೆಲ್ಲುವವನೊಬ್ಬನೇ ತನ್ನ ಗೆದ್ದವ