ಜೊತೆಗಾತಿ

ನೀ ನನ್ನ ಬದುಕಿನ ಪ್ರಾಣ
ಪ್ರಾಣದೊಳಗಿನ ಮೌನ
ಮೌನದೊಳಗಿನ ಗಾನ
ಗಾನವೆಂಬ ಜೀವಸುಧೆಯ ಧ್ಯಾನ

ಧ್ಯಾನದೊಳು ಮಾಯೆಯಾಗಿ
ಮಾಯೇಯೋಳು ಹೆಣ್ಣಾಗಿ
ಹೆಣ್ಣೆಂಬ ಆಸರೆಯಾಗಿ
ಆಸರೆಗೆ ಬೆಡುತಿಹೆ ನಾನೊಬ್ಬ ತಿರುಕ

ತಿರುಕನ ಜೀವನದ ಸಿರಿಯೋ
ಸಿರಿಯ ದಾರಿಗೆ ಛಲದ ಭಲವೋ
ಭಲದ ಜನನಕೆ ನೀ ಮಹಾಶಕ್ತಿಯೋ
ಶಕ್ತಿ ನೀ ಎನ್ನಯ ಹೃದಯದ ಮನೆಗೋ

ಮನೆಯೆಂಬ ಗುಡಿಗೆ ನೀ ಹೊನ್ನ ಕಲಶ
ಕಲಶದ ಚಿಗುರು ಈ ನಿನ್ನ ಹರೆಯ
ಹರೆಯದ ಭಾವಕೆ ನೀನೊಂದು ಸ್ಪೂರ್ತಿ
ಸ್ಪೂರ್ತಿಯ ಚಿಲುಮೆಯೋ ನಿನ್ನ ಜೊತೆಗಿನ ಜೀವನ

ಜೀವನದಿ ಹಡಗು ನೀ
ನೀ ನನ್ನ ಪಯಣದೀ
ಪಯಣದ ದಡವೋ ನಿತ್ಯದ ಸುಖವೊ
ಸುಖದ ಅಂತ್ಯವೋ ಬದುಕಿನ ಗುರಿಯೋ
ಗುರಿಯ ತಲುಪಲು ಬೇಕು ನಿನ್ನಯ ಜೊತೆಯೋ ನಿನ್ನಯ ಜೊತೆಯೋ


Comments

  1. ಪ್ರಾಣ-ಮೌನ-ಧ್ಯಾನ-ಮಾಯೆ-ಹೆಣ್ಣು ಈ ಸರಪಣಿ ಹೊಸದೆನಿಸಿತು...
    ಆಹ್ ಪ್ರಾಯಶಃ ಅದರ ಹಿಂದೊಂದಿಷ್ಟು ವಿಚಾರಗಳಿರಲೂಬಹುದು...ಅವುಗಳ ಬಗ್ಗೆ ಹೇಳಲು ನನ್ನ ಓದು ಸಾಲದು..

    ಈ ಕವನದಲ್ಲಿ ಒಂದು ವಿಶೇಷತೆ ಕಂಡೆ...ಬರಿ ಭಾವದಲ್ಲಷ್ಟೇ ಅಲ್ಲದೇ ಪದಗಳಲ್ಲಿಯೂ ಸಹ ಒಂದೊಂದು ಪ್ಯಾರಾಗಳ ನಡುವೆ ಸಂಬಂಧ ಮತ್ತು ಬಂಧವಿದೆ...ಛಂದದ ಪ್ರಯೋಗಗಳು ಗುರುಗಳೇ...

    ಬರೀತಾ ಇರಿ :)

    ಸಿರಿಯ ದಾರಿಗೆ ಛಲದ ಭಲವೋ ಒಂದು ಅರ್ಥವಾಗ್ಲಿಲ್ಲಾ ನೋಡಿ..

    ReplyDelete

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ