ಬದುಕಿನ ಹವಣಿಕೆ



ಕಂಡ ಕನಸೆಲ್ಲವೂ ಕಲ್ಲಾದವು
ಬಂದ ನೆನಪೆಲ್ಲವೂ ಮರೆಯಾದವು
ಗೊಂದಲದ ಬದುಕಲ್ಲಿ ಆಯ್ಕೆಯೇ ಮುಳ್ಳಾದವು
ಕನಸ ಕಾಣಲಾರೆನಾ
ನೆನಪ ಬಯಸಲಾರೆನಾ
ಬಂದ ಜೀವನವ ಬದುಕ ಹೊರತು ವಿಧಿಯಿಲ್ಲಯೆನಗೆ
ಬಂದ ಆಸೆಗಳ ಬಿಡದ ಹೊರತು ಬಿಡುವಿಲ್ಲವೆನಗೆ

ಸಾಗುತಿಹುದು ಪಯಣ ಮುಂದೊಂದು ಪಯಣದೆಡೆಗೆ
ಬೆಳೆಯುತಿಹುದು ಆಸೆಯ ಭಂಡಾರ ಆಗಸದೆಡೆಗೆ
ನಿಲ್ಲಿಸಲಾಗದು ಪಯಣ ಅದು ಪ್ರಕೃತಿ
ತಡೆಯಲಾಗದು ಆಸೆ ಅದೊಂದು ಆಷಾಡಭೂತಿ
ಆಸೆ ನಿಂತೊಡನೆ ಪಯಣ ಮುಗಿವುದು
ಪಯಣ ನಿಂತೊಡನೆ ಬದುಕು ಮುಗಿವುದು

ಬಂದ ಜನರೆಲ್ಲ ನಿಂತರು ಮನದ ಹೊಸ್ತಿಲಲಿ
ತೆರೆದ ಕದವ ದಾಟಿದವರಿಲ್ಲ ದಾಟಿದವ ಮನದೊಳಗೆ ಉಳಿಯಲಿಲ್ಲ
ಒಂಟಿನಾನಾಗಿರುವೆ ಬದುಕ ಆಟದಲಿ
ಹುಡುಕಾಟ ಪಯಣಿಗನಿಗೆ ಬದುಕ ಪಥದಲಿ

ಸಾಧನೆಯ ಛಲಕೆ ಬೇಕಿಂದು ಮನವು
ಮನಸಿನ ಹಾದಿಯಲಿ ನೂರೆಂಟು ವಿಘ್ನ
ಕನಸಿನ ಕಲ್ಪನೆಗೆ ಸಿಗಲಿಲ್ಲ ಬಿಂಬ
ಕಾರಣವು ನೂರು ಅಡಚಣೆಯ ಹೆಸರಿಗೆ
ಗೆಲ್ಲುವವನೊಬ್ಬನೇ ತನ್ನ ಗೆದ್ದವ
ಗೆಲ್ಲುವವನೊಬ್ಬನೇ ತನ್ನ ಗೆದ್ದವ

Comments

  1. ತುಂಬಾ ಅರ್ಥವತ್ತಾಗಿದೆ. ಮುಂದುವರಿಸಿ ಬರಹ. ದೇವರು ಒಳ್ಳೇದು ಮಾಡಲಿ.

    ReplyDelete
    Replies
    1. ಧನ್ಯವಾದಗಳು ಸರ್ ನಿಮ್ಮ ಅನಿಸಿಕೆಗೆ

      Delete
  2. Replies
    1. ಧನ್ಯವಾದಗಳು ಧಿಘ್ವಾಸ್ ಸರ್.

      Delete

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ