ಯುಗದ ಆದಿ ಯುಗಾದಿಯುಗದ ಆದಿ ಮೊಳಗಿದೆ,
ಯುಗದ ಆದಿ ಮೊಳಗಿದೆ,
ವಸಂತವ ತಂದಿದೆ ಮನಕೆ,
ಹೊಸತನಕೆ ಯುಗದ ನಾಂದಿ ಹಾಡಿದೆ.

ಹೊಸ ಸಾಧನೆಗಳು ಚಿಗುರಿದೆ,
ಹೊಸ ಭಾವನೆಗಳು ಉಕ್ಕಿದೆ,
ಹೊಸ ಕಾರುಣ್ಯವು ಹರಿದಿದೆ,
ಬಂದಿದೆ ಬಂದಿದೆ ಯುಗದ ಆದಿ ಮೊಳಗಿದೆ.


ಸಮರಸವ ಕಲಿಸಿದೆ,
ಸಹ್ಷ್ಣುತೆಯ ಬೆಳಸಿದೆ,
ಕಾಮನನು ದಹಿಸಿದೆ,
ಪೊರೆದಿದೆ ಪೊರೆದಿದೆ ಯುಗದ ಆದಿ ಮೊಳಗಿದೆ.

ಜೀವನವು ಬೆಳಗಿದೆ,
ಮನಗಳು ಅರಳಿವೆ,
ಉತ್ಸಾಹವು ಚಿಮ್ಮಿದೆ,
ಬೆಳಸಿದೆ ಬೆಳಸಿದೆ ಯುಗದ ಆದಿ ಮೊಳಗಿದೆ.ಮಾಯೆಯು ಹೆಚ್ಚಿದೆ,
ಮನವು ನಂಬಿದೆ,
ಅಜ್ಞಾನವ ಕಳೆವ ಬೆಳಕು ಹರಿದಿದೆ,
ಉದಿಸಿದೆ ಉದಿಸಿದೆ ಹೊಸತು ಯುಗವೊಂದು ಉದಿಸಿದೆ.


Comments

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ