Posts

ಕನ್ನಡ ಮೀಡಿಯಮ್

Image
"ಹಿಂದಿ ಮೀಡಿಯಮ್" ಸಿನೆಮಾ ನೋಡಿದ ಮೇಲೆ ಅದರ ಬಗ್ಗೆ ಏನಾದರೂ ಬರೆಯದೇ ಇದ್ದರೆ ತಪ್ಪು ಅಂಥಾ ಆಗುತ್ತೆ.ಇವತ್ತು ನಾನು ಈ ಸಿನೆಮಾವನ್ನ ಚಿತ್ರೀಕರಿಸಿದ ರೀತಿಯ ಬಗ್ಗೆಯೊ ಅಥವಾ ನಟ ನಟಿಯರ ಬಗ್ಗೆಯೋ ಮಾತಾನಾಡುವುದಿಲ್ಲ ,ಬದಲಾಗಿ ಈ ಚಿತ್ರ ಆಯ್ದುಕೊಂಡಿರುವ ವಿಷಯದ ಬಬ್ಬೆ ಒಂದು ಚೂರು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂಥ ಅನಿಸಿ ಇದನ್ನ ಬರೆಯುತ್ತಿದ್ದೇನೆ.

             ಈ ಚಿತ್ರ ಆಯ್ದುಕೊಂಡಿರುವ ವಿಷಯ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗೆಗಿನದು. ಇವತ್ತು ನಮ್ಮ ಘನತೆವೆತ್ತ ಸರ್ಕಾರಗಳು ಆರ್.ಟಿ.ಈ ಇನ್ನೊಂದು ಮತ್ತೊಂದು ಕಾಯ್ದೆಗಳನ್ನ ತಂದು ಶಿಕ್ಷಣವನ್ನ ಬಲ ಪಡಿಸುತ್ತಿದ್ದೇವೆ ಎಂದು ಬಿಂಬಸಿಕೊಳ್ಳುತ್ತಿರಬಹುದು. ಆದರೆ ನಿಜವಾಗಲು ಈ ಕಾಯ್ದೆ ಸವಲತ್ತುಗಳು ಒಬ್ಬ ಸಾಮಾನ್ಯ ಪ್ರಜೆಯವರೆಗೂ ತಲುಪುತ್ತಿದೆಯಾ? ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಲವರ್ದನೆಯಾಗುತ್ತಿದೆಯಾ? ಇವು ಕಾಡುವ ಪ್ರಶ್ನೆಗಳು.

          ಆದರೆ ನಿಮ್ಮ ಯೋಚನೆ ಸರಿ ಸರ್ಕಾರದ ವ್ಯವಸ್ಥೆಗಳು ಈ ಮಹಾನ್ ದೇಶದ ಪ್ರಜೆಗಳಿಗಿಂತ ಅವರವರ ಕುಟುಂಬ,ವಂಶ ಪೋಷಣೆಗೆ ಪೂರ್ತಿಯಾಗಿ ಸಹಕರಿಸುತ್ತಿರುತ್ತದೆ. ನಿಮ್ಮ ಯೋಚನೆ ಸರಿಯೂ ಹೌದು. ಈ ಕಾಯ್ದೆಗಳಿಂದ ನಮ್ಮ ಘನತೆವೆತ್ತ ಸರ್ಕಾರ ಬೊಬ್ಬೆ ಹೊಡೆಯುತ್ತಿರುವುದೇನೆಂದರೆ
"ಸ್ವಾಮಿ ನೀವು ಯಾಕೆ ಆ ಥರ್ಡ ಕ್ಲಾಸ್ ಸರಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನ ಸೇರಿಸುತ್ತೀರಿ? ಅಲ್ಲಿ ಕಲಿತರೆ ನಿಮ್ಮ ಮಗ…

ಇದು ನನ್ನ ಜೀವನ

ಇದು ನನ್ನ ಜೀವನ. ದುಡಿಯುವೆ  ನನಗೆ ಬೇಕಾದಂತೆ ಖರ್ಚು ಮಾಡುವೆ ಇದು ನನ್ನ ಜೀವನ. ವೀಕೆಂಡ್ ಪಾರ್ಟಿ, ಗೆಳಯ ಗೆಳತಿಯರೊಂದಿಗೆ ಪ್ರವಾಸ, ಹೋಮ್ಸ್ಟೇ, ರೆಸಾರ್ಟ್ ಅಲ್ಲಿ ಮೋಜು ಮಸ್ತಿ ಮಾಡುವೆ ಇದು ನನ್ನ ಜೀವನ. ಪೂರ್ತಿ ಎಣ್ಣೆ ಹೊಡೆದು ನಶೆಯ ಅಮಲಿನಲ್ಲಿ ತೇಲುವೆ ಇದು ನನ್ನ ಜೀವನ. ಈ ಜಗತ್ತಿನ ಜೀವನದಲ್ಲೇನಿದೆ ಬರೀ ನಿಸ್ಸಾರ. ಆ ನಿಸ್ಸಾರವನ್ನ ಸಾರವನ್ನಾಗಿಸುವುದೇ ಈ ಮೋಜು ಮಸ್ತಿ ಹಾಗಾಗಿದ್ದರಿಂದ ಇದು ನನ್ನ ಜೀವನ ನಾನು ಏನು ಬೇಕಾದರೂ ಮಾಡುವೆ.
            ಇದು ನನ್ನ ಜೀವನ ಇದನ್ನ ನಯಂತ್ರಿಸುವುದು ಯಾತಕ್ಕೆ? ಇದು ನನ್ನ ಜೀವನ ನಿಯಂತ್ರಿಸುವ ಹಕ್ಕು ಯಾರೀಗೂ ಇಲ್ಲ. ಇದು ನನ್ನ ಜೀವನ ನಿಯಂತ್ರಣದ ಗಾಳಕ್ಕೆ ಸಿಕ್ಕುವ ಮೀನು ನಾನಲ್ಲ, ಆಗಸದಲ್ಲಿರುವ ಮೋಡಕ್ಕಿಂತ ಮೇಲೆ ಹಾರುವ ಹದ್ದಿನ ಸ್ವಾತಂತ್ರ್ಯ ನಾ ಇಚ್ಚಿಸುವೆ ಅದನ್ನ ಪಡೆದೇ ತೀರುವೆ. ಹೆಂಡತಿ, ಮಕ್ಕಳು, ಸಂಭಂಧಗಳು, ಶಿಷ್ಟಾಚಾರಗಳು,ಸಂಸ್ಕೃತಿಗಳು, ಧರ್ಮಗಳು, ಆಚಾರಗಳು ಇವೆಲ್ಲ ನಾ ಬಯಸುವ ಖುಷಿಯನ್ನ ನನಗೆ ಎಂದಿಗೂ ಕೊಡಲಿಲ್ಲ ಕೊಡುವುದೂ ಇಲ್ಲ. ಇದು ನನ್ನ ಜೀವನ ಅದನ್ನ ನಿಯಂತ್ರಿಸುವ ಅಧಿಕಾರ ಇವುಗಳಿಗೆ ಕೊಟ್ಟವರಾರು? ಮೊದಲೇ ಹೇಳಿದಂತೆ ಇವೆಲ್ಲಾ ಆಗಸದಲ್ಲಿ ಹರಡಿರುವ ಮೋಡದಂತೆ ನಮಗೆ ಸ್ವಚ್ಚಂದವಾಗಿ ಹಾರಾಡಲೂ ಬಿಡದೆ ನಮ್ಮನ್ನ ಬಂಧಿಸಿಡುವ ಎಲ್ಲೆಗಳು, ನಾನು ಇವೆಲ್ಲವನ್ನ ದಾಟಿ ಹಾರುವೆ ಇದೇ ನನ್ನ ಗುರಿ.
            ಮನುಷ್ಯನಾಗಿ ಹುಟ್ಟಿಯಾಗಿದೆ ಇರುವುದೊಂದೇ ಜೀವನ ಸುಮ್ಮನೇ ಕಾ…

ಶರಣೆಂಬೆ ಶಾರದಾಂಬೆ

ನೀಎನ್ನತಾಯವ್ವನೀಎನ್ನತಾಯಿ
ನಗುಮೊಗದತಾಯೇಶ್ರೀಶಾರದಾಂಬೆ ನೀಶುದ್ದಪ್ರಕೃತಿಜಗದೊಳುತುಂಬಿರುವೆ
ನಾಕೇವಲವಿಕೃತಿಜಗದೊಳುಪುಟ್ಟಿರುವೆ
ವಿಕೃತಿಯಪ್ರಾಕೃತಿಸಿ, ಶೂನ್ಯದೊಳುಗುಣಿಸಿ
ನಿಸ್ಸತ್ವವಾಸತ್ವವಾಗಿಸೋಪರಮಚೈತನ್ಯವೋನೀನುಶ್ರೀಶಾರದಾಂಬೆ
ಸೃಷ್ಠಿಕಾರಣವೋನೀಮಹಾಮಾತೆ
ಸೌಂದರ್ಯದಗಣಿಯೋನೀಶ್ರೀಲಲಿತೆ
ಸರ್ವಮಂಗಳೆಯೋನೀನುಶ್ರೀಮಾತೆ
ಹಸಿದವರಿಗೆಹಸಿವನೀಗಿಸೋಅನ್ನದಾತೆ, ಶ್ರೀಶಾರದಾಂಬೆ

ಜಗವೊಂದುಮಾಯಾಪಂಜರನಾನೊಂದುಗಿಳಿಯೋ
ಜಗದಡಂಭವಬಿಡಿಸಿಶುದ್ದಜ್ಞಾನವಎರೆದು

ಹಠ ಮಾಡದಿರು

ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು
ಮನವು ಮಿಡಿಯುತಿಹುದು ನಿನ್ನ ಸನಿಹಕೆ
ಹೃದಯ ಬೀಗುತಿಹುದು ನಿನ್ನ ಸ್ಪರ್ಶಕೆ
ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು
ತಿಳಿದಿರುವೆ ನೀನೆಲ್ಲವ, ಮನದ ಚಿತ್ತವು ನೀನು
ಹೊರಟೆಯೆಂದರೆ ಧಿಕ್ಕರಿಸಿಹೆ ನಿನ್ನ ಮನವ ನೀನು
ನಿನ್ನ ಪಯಣವು ಸೆಳೆದು ನೆಡೆದಿದೆ ನನ್ನ ದೇಹದ ಪ್ರಾಣವ
ವಿರಹ ವೇದನೆ ಬಂದು ಬಡಿದಿದೆ ನನ್ನ ಮನದ ದಡವ
ಜಗವೆಲ್ಲ ಮಸುಕು ನೀ ಎದುರಿಗಿರಲು
ಭಯದ ಸೋಲೋ, ನಾ ನಿನ್ನ ಕೈ ಹಿಡಿದಿರಲು
ನಿನ್ನ ಮೊಗವದೋ ಕೆಣಕುತಿಹುದು ನನ್ನ
ಶಕ್ತಿಯಿರ್ದೊಡೆ ಪಡೆ, ನೀ ಎನ್ನ ನನ್ನ
ನೂರು ಮೈಲು ದೂರವಿದ್ದರು, ಸನಿಹವಿರುವೆ ಎಂದೂ ನೀನು
ನೂರು ಯೋಚನೆ ಹೋಮ್ಮುತ್ತಿದ್ದರು ನಡುವಿರುವ ಹಿರಿ ಚಿಲುಮೆ ನೀನು
ನೂರು ಭಾವ ಬಂದು ಹೋದರು, ಬಂದೂ ಹೋಗದ ಸ್ಥಿರ ಭಾವ ನೀನು
ನೂರು ಜನುಮ ಎತ್ತಿ ಬಂದರೂ, ಮತ್ತೆ ಸೇರುವೆ ನಿನ್ನೇ ನಾನು ನಿನ್ನೇ ನಾನು

ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು
ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು.....ನಾ ಕಂಡ ಸತ್ಯ

ಒಂದು ತಿಂಗಳ ಹಿಂದೆ ವೈಟ್ ಫೀಲ್ಡ್ ಎಸ್.ಜೆ.ಆರ್ ಮುಂದೆ ಒಂದಷ್ಟು ಜನ ನವಯುವಕರು  ಹೋಗೋ ಬರೋರಿಗೆಲ್ಲಾ ಏನೋ ಹೇಳ್ತಾ ನಿಂತಿದ್ದರು. ಅದರ ಮುಂದೆನೇ ಹೋಗುತ್ತಿದ್ದ ನನ್ನನ್ನು ಕರೆದರು. ಯಾವ ಬ್ಯಾಂಕನೋರೋ ಲೋನ್ಗೆ ಕರಿತಿರಬೇಕು ಅಂತ ತಿಳ್ಕೊಂಡೆ. ನೋಡಿದ್ರೆ ಅವರುಗಳು ಒಂದು ಎನ್.ಜಿ.ಓ ಸಂಸ್ಥೆಯಿಂದ ಬಂದವರಾಗಿದ್ದರು. ಅದರಲ್ಲಿದ್ದವನೊಬ್ಬ ನನ್ನ ಕರೆದು. "ನೋಡಿ ಭಾರತದಲ್ಲಿ ಅತ್ಯಾಚಾರ ಜಾಸ್ತಿ ಆಗ್ತಿದಾವೆ. ಅದರ ಬಗ್ಗೆ ಅರಿವು ಮೂಡಿಸೋಕೆ ನಾವು ಬಂದಿರೋದು. ಈಗ ಮೊನ್ನೆ ಮೊನ್ನೆ ಸ್ಕೂಲ್ ಮಗುಮೇಲೆ ಪ್ರಕರಣ ಆಯ್ತು ಇವೆಲ್ಲಾ ಭಾರತದಲ್ಲಿ ಹೆಚ್ಚಾಗುತ್ತಿದೆ ಅದಕ್ಕೆ ನಾವು ಜನರನ್ನ "ಎಜ್ಯುಕೇಟ್ " ಮಾಡಬೇಕು." ಹಂಗೆ ಹಿಂಗೆ ಅಂದ. ಅವನ ಮಾತನ್ನ ತಾಳ್ಮೆಯಿಂದ ಕೇಳಿದ ನಂತರ ಅವನಿಗೆ ಉತ್ತರಿಸಲು ಹೊರಟೆ. ಅದು ಒಂದು ಘಂಟೆಗಳ ಸುದೀರ್ಘ ಚರ್ಚೆಯಾಗಿತ್ತು ಆ ಪಾದಾಚಾರಿ ಮಾರ್ಗದಲ್ಲಿ. ಹಿಂದುವಿನಿಂದ ಮುಸ್ಲಿಂ ಮಥಕ್ಕೆ ಕನವರ್ಟ್, ಆದವನೋಂದಿಗೆ ದೊಡ್ಡವಾದವೇ ನೆಡೀತು. ಅಲ್ಲಿ ಬಂದ ಹಲವಾರು ಪ್ರಶ್ನೆಗಳಿಗೆ ನನ್ನ ಚಿಂತನೆ,ನನ್ನ ಆದರ್ಶದಿಂದ ನೀಡಿದ ಉತ್ತರಗಳನ್ನು ನಿಮ್ಮೊಂದಿಗೆ ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇನೆ.
ಎಸ್ ನಾವೆಲ್ಲಾ ನಾಗರೀಕ ಸಮಾಜದಲ್ಲಿದ್ದೇವೆ. ಎಸ್ ನಾವೆಲ್ಲಾ ಎಜ್ಯುಕೇಟೆಡ್. ಆದರೂ ಈ ಅತ್ಯಾಚಾರವೇನು? ಈ ಮೃಗೀಯ ವರ್ತನೆ ಏಕೆ? ಒಂದು ಸೋ ಕಾಲ್ಡ್ ನಾಗರೀಕ,ಎಜ್ಯುಕೇಟೆಡ್ ಸಮಾಜದಲ್ಲಿ ಈ ರೀತಿಯಾಗಿ ಒಂದು ಹೆಣ್ಣನ್ನ …

ಮುಮುಕ್ಷು

ನನ್ನದೆನ್ನುವುದೇನಿಹುದೆತಾಯೇ ಎಲ್ಲವೂ ನಿನ್ನದಹುದೇ ಪ್ರೇರಕಳು ನೀನು ಕಾರಕಳು ನೀನು ನೀ ಹೆಣೆದ ಲೀಲೆಗೆ ಆಯುಧವು ನಾನು
ಧರ್ಮದಾ ಪಥದಲಿ ಜೀವನದ ತೇರೋ ಜೀವನದ ಭಯಕೆ ಆತ್ಮದಾ ಬೇರೋ ತುಂಬು ಮೂಟೆಯ ಹಮಾಲಿಯೊ ನಾನು ಸಾಗಬೇಕಿದೆ ಹೊತ್ತು, ಕಳೆದು ಕೊಳ್ಳುವ ತನಕ
ಸಲಹುವಳು ನೀನು, ಪೊರೆಯುವಳು ನೀನು ಶಾಶ್ವತ ಬಂಧುವು ನೀನು, ಜಗಜ್ಜನನಿ ಸತ್ಯ ಪ್ರೀತಿಯು,ನಿತ್ಯ ಪ್ರೇಮವು ನಿನ್ನ ಮಡಿಲದೋ, ಜಗದ ಶಯ್ಯೆ
ಧರ್ಮದಾ ಬಾಳ್ವೆ, ಅರಿವಿರುವ ತತ್ವ ತತ್ವದಾ ಅರಿವು,ನಿನ್ನಯಾ ದರುಶನ ದರುಶನದ ಪರಿ, ಜಗವೆಲ್ಲ ಬೆಳಕೋ ಬೆಳಕಿನಾ ಸಿಂಧು, ನಿತ್ಯಾದಾ ಬ್ರಹ್ಮ

ಮೋಡದಾ ಹನಿಯು, ತೊರೆಯಾಗಿ ನದಿಯಾಗಿ ಬಂದುಗೂಡುವವು, ಶರಧಿಯಾ ಒಡಲು ಜಗವೆಲ್ಲ ನೀನಾಗೆ, ನಾವೆಲ್ಲ ಬಿಂಬ ಬಿಂಬ ಒಡೆದೊಡನೆ, ಉಳಿಯುವುದೊಂದೇ ನೀನೆಂಬ ಸತ್ಯ
ನೀನೆಂಬ ಸತ್ಯ.

ಮತ್ತೆ ಅವತರಿಸು

ಮತ್ತೆ ಅವತರಿಸು
ಓ ಎನ್ನ ತಾಯೇ, ಭಾರತಿಯೆ
ಮತ್ತೆ ಬಿತ್ತರಿಸು
ಆ ನಿನ್ನ ಛಾಯೆ,ಭಾರತಿಯೆ

ಜಗವೆಲ್ಲ ಬಯಸಿಹುದು ಶಾಂತಿಯಾ ಬಾಳ
ಪುರವೆಲ್ಲ ಸಿಲುಕಿಹುದು ಬ್ರಾಂತಿಯಾ ಗಾಳ
ನೀನ್ ಅವತರಿಸಿರ್ದೊಡೆ ಜಗಕೆಲ್ಲ ಬೆಳಗೊ
ನೀನ್ ವಿಹರಿಸಿರ್ದೊಡೆ ಜಗವೆಲ್ಲ ಬೆರಗೋ

ರುಂಡಮಾಲಿನಿ ಕಾಳಿಯಾಗೆನ್ನ ದೇಶದಲಿ
ರಕ್ಕಸರ ರುಂಡವಾ ಕೆಡುವುತಾ
ಉಕ್ಕೇರಿದ ಕ್ರೋದಾಗ್ನಿ ಜ್ವಲಿಸಲಿ
ಅಧರ್ಮಿಯರ ಹೃದಯವಾ ದಹಿಸುತ

ಯುಗ ಪರಿವರ್ತಿಸಲಿ ನಿನ್ನ ಇಚ್ಚಾನುಸಾರ
ಬ್ರಹ್ಮಾಂಡ ಜೈಂಕರಿಸಲಿ ಸನಾತನದ ಹುಂಕಾರ
ನಿನ್ನ ರೌದ್ರವತೆಗೆ ಸರ್ವವೂ ಸ್ವಾಹಾಕಾರ
ನಿನ್ನ ಅಪ್ಪಣೆಯೇ ಎಲ್ಲೆಲ್ಲು ಅಧಿಕಾರ

ಸಜ್ಜನರ ಮೊರೆಯಿನ್ನು ಆಲಿಸೆಯ ತಾಯೆ
ದುರ್ಜನರ ದುರ್ನಡತೆ ಕಾಣಿಸದೆ ಮಾಯೆ
ಇನ್ನೆಷ್ಟು ದಿವಸ, ತಮೋರಜದ ಅಜ್ಞಾತ
ಸಾಕಿನ್ನು ಅವತರಿಸು, ಮಾರಿಯಾ ಹಾಗೆ

ಬೇಡಿಕೆಯೊಂದೇ ನಿನ್ನ ಪಾದದಡಿಯಲಿ
ನವರಾಷ್ಟ್ರ ನಿರ್ಮಾಣ ಸನಾತನದ ನೆಲೆಯಡಿಯಲಿ
ಹಂಬಲವು ಒಂದೇ, ಜಗವೆಲ್ಲ ಬೆಳಗೊ ಜ್ಞಾನದಾ ಬೆಳಗು
ಹೊತ್ತಿ ಉದಯಿಸಲಿ ನಿನ್ನ ಗರ್ಭದಲಿ
ಹೊತ್ತಿ ಬೆಳಗಲಿ ನಿನ್ನ ಗರ್ಭದಲಿ