ಕನ್ನಡ ಮೀಡಿಯಮ್




            "ಹಿಂದಿ ಮೀಡಿಯಮ್" ಸಿನೆಮಾ ನೋಡಿದ ಮೇಲೆ ಅದರ ಬಗ್ಗೆ ಏನಾದರೂ ಬರೆಯದೇ ಇದ್ದರೆ ತಪ್ಪು ಅಂಥಾ ಆಗುತ್ತೆ.ಇವತ್ತು ನಾನು ಈ ಸಿನೆಮಾವನ್ನ ಚಿತ್ರೀಕರಿಸಿದ ರೀತಿಯ ಬಗ್ಗೆಯೊ ಅಥವಾ ನಟ ನಟಿಯರ ಬಗ್ಗೆಯೋ ಮಾತಾನಾಡುವುದಿಲ್ಲ ,ಬದಲಾಗಿ ಈ ಚಿತ್ರ ಆಯ್ದುಕೊಂಡಿರುವ ವಿಷಯದ ಬಬ್ಬೆ ಒಂದು ಚೂರು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂಥ ಅನಿಸಿ ಇದನ್ನ ಬರೆಯುತ್ತಿದ್ದೇನೆ.

             ಈ ಚಿತ್ರ ಆಯ್ದುಕೊಂಡಿರುವ ವಿಷಯ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಬಗೆಗಿನದು. ಇವತ್ತು ನಮ್ಮ ಘನತೆವೆತ್ತ ಸರ್ಕಾರಗಳು ಆರ್.ಟಿ.ಈ ಇನ್ನೊಂದು ಮತ್ತೊಂದು ಕಾಯ್ದೆಗಳನ್ನ ತಂದು ಶಿಕ್ಷಣವನ್ನ ಬಲ ಪಡಿಸುತ್ತಿದ್ದೇವೆ ಎಂದು ಬಿಂಬಸಿಕೊಳ್ಳುತ್ತಿರಬಹುದು. ಆದರೆ ನಿಜವಾಗಲು ಈ ಕಾಯ್ದೆ ಸವಲತ್ತುಗಳು ಒಬ್ಬ ಸಾಮಾನ್ಯ ಪ್ರಜೆಯವರೆಗೂ ತಲುಪುತ್ತಿದೆಯಾ? ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬಲವರ್ದನೆಯಾಗುತ್ತಿದೆಯಾ? ಇವು ಕಾಡುವ ಪ್ರಶ್ನೆಗಳು.

          ಆದರೆ ನಿಮ್ಮ ಯೋಚನೆ ಸರಿ ಸರ್ಕಾರದ ವ್ಯವಸ್ಥೆಗಳು ಈ ಮಹಾನ್ ದೇಶದ ಪ್ರಜೆಗಳಿಗಿಂತ ಅವರವರ ಕುಟುಂಬ,ವಂಶ ಪೋಷಣೆಗೆ ಪೂರ್ತಿಯಾಗಿ ಸಹಕರಿಸುತ್ತಿರುತ್ತದೆ. ನಿಮ್ಮ ಯೋಚನೆ ಸರಿಯೂ ಹೌದು. ಈ ಕಾಯ್ದೆಗಳಿಂದ ನಮ್ಮ ಘನತೆವೆತ್ತ ಸರ್ಕಾರ ಬೊಬ್ಬೆ ಹೊಡೆಯುತ್ತಿರುವುದೇನೆಂದರೆ
"ಸ್ವಾಮಿ ನೀವು ಯಾಕೆ ಆ ಥರ್ಡ ಕ್ಲಾಸ್ ಸರಕಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನ ಸೇರಿಸುತ್ತೀರಿ? ಅಲ್ಲಿ ಕಲಿತರೆ ನಿಮ್ಮ ಮಗು ಉದ್ದಾರ ಆಗೊಲ್ಲಾ. ಅಂತಾ ಕೆಳ ವರ್ಗದ ಮಕ್ಕಳ ಜೊತೆ ನಿಮ್ಮ ಮಕ್ಕಳೂ ಕಲಿತರೆ ಅವುಗಳ ಬುದ್ದೀನೇ ಬರುತ್ತೆ ಆದ್ದರಿಂದ ಎಲ್ಲಾ ಸವಲತ್ತುಗಳು ಇರುವ, "ಹಣಕ್ಕೆ ತಕ್ಕ ಹಾಗೆ ಕಜ್ಜಾಯ" ಎನ್ನುವಂತಿರುವ ನಮ್ಮ ಖಾಸಗೀ ಶಾಲೆಗಳಿಗೇ ಮಕ್ಕಳನ್ನ ಕಳುಹಿಸಿ. ನಾವು ನಿಮ್ಮ ಮಕ್ಕಳನ್ನ ಈ ಸ್ಪರ್ಧತ್ಮಕ ಯುಗಕ್ಕೆ ತಯಾರು ಮಾಡುತ್ತೀವಿ ಎಂದು"

           ಎಂತಹ ದುರ್ವಿದಿ ಅಲ್ಲವೆ ಗೆಳೆಯರೇ. ಇವರು ಮಾಡುತ್ತಿರುವ ಕೆಲಸ ಇನ್ನೇನಿಲ್ಲ ಭವ್ಯ ಭಾರತವನ್ನ ಬಾವಿಯೊಳಗಿನ ಕಪ್ಪೆಯಂತಿರುವ,ಹಣದ ಖಜಾನೆಯನ್ನೇ ಸೃಷ್ಟಿಸಲು ಹೊರಟಿರುವ ಖಾಸಗೀ ಶಾಲೆಗಳಲ್ಲಿ ಕಾಣಹೊರಟ್ಟಿದ್ದಾರೆ ಅಷ್ಟೇ.ಈಗ ಬೇಕಾದರು ನೀವೇ ಹೋಗಿ ಒಂದು ಸರ್ವೆ ಮಾಡಿ, ಸಮಾಜದ ಪ್ರತಿಷ್ಠಿತರು, ನಾಯಕರು, ಕನ್ನಡಕ್ಕಾಗಿ ಬೊಬ್ಬೊ ಹೊಡೆಯುವ ಧೀರರು ಎಲ್ಲರ ಮಕ್ಕಳನ್ನೂ ಒಮ್ಮೆ ಕೇಳಿ ನೋಡಿ
"ಪುಟ್ಟಾ ನೀನು ಯಾವ ಶಾಲೆಯಲ್ಲಪ್ಪ ಓದೋದು" ಎಂದು
ಆ ಪುಟ್ಟ ಹೂವಿನ ಮೊಗ್ಗಿನಂತಹಾ ಬಾಯಿಯಿಂದ ಬರುವ ಹೆಸರು ಯಾವುದೋ ಕಾನ್ವೆಂಟ್,ಇನ್ಯಾವುದೋ ಇಂಗ್ಲೀಷ್ ಶಾಲೆಯೇ ಹೊರತು ಸರ್ಕಾರಿ ಕನ್ನಡ ಶಾಲೆಯೆಂದಲ್ಲ.

          ಸರಿ ಹಾಗಾದರೆ ನೀವು ನನಗೆ ಕೇಳಬಹುದು ಬರೀ ರಾಜಕಾರಣಿಗಳು,ಪ್ರತಿಷ್ಠಿತರ ಮೇಲೇ ಯಾಕಪ್ಪಾ ಗೂಬೆ ಕೂರಿಸ್ತಿಯಾ ಬದಲಾವಣೆ ನಮ್ಮಿಂದ ಶುರುವಾಗಬೇಕು ಎಂದು.ಆದರೆ ಸ್ವಾಮಿ ರಾಜಕಾರಣಿಗಳಾಗುವ ಮುನ್ನ ಅವರುಗಳು ನಾಯಕಾರಗಿದ್ದರು. ನಾವೆಲ್ಲರೂ "ಅವರೇ ನಮ್ಮ ನಾಯಕರು, ಇವರೇ ನಮ್ಮ ಭಾಗ್ಯ ವಿದಾತ" ಎಂದು ಪಟ್ಟ ಕೊಟ್ಟು ಕೂರಿಸಿಲ್ಲವೇ? ಹಾಗಾಗಿ ಆ ಮಹಾನ್ ನಾಯರು ಸರಿ ಇದ್ದರೆ ಮಾತ್ರ ದೇಶ,ಸಮಾಜ ಸುಸ್ಥಿತಿಗೆ ಬರುವುದು. ಅಲ್ಲದೆ ನಾಯಕನೆಂದರೆ "ಯಾರು ಒಳ್ಳೆಯದ್ದನ್ನ ಮಾಡುತ್ತಾನೋ ಅವನೇ ಹೊರತು ಹೇಳುವವನಲ್ಲ"
"ಕೃತಿ ಶ್ರೇಷ್ಠವಾದ ಸಂವಹನ ಕ್ರಿಯೆಯಲ್ಲಿ ಒಂದು ಅದೇ ಮಾತು ಅತ್ಯಂತ ಹೀನ ಸಂವಹನ ಕ್ರಿಯೆ"
ನಾಯಕ ನೆಡೆದ ಹಾದಿಯನ್ನ ನೂರು ಜನ ಪಾಲಿಸುತ್ತಾರೆ,ನಾಯಕನ ನುಡಿಗೇ ಬಾರೀ ಮಹತ್ವವಿದೆ. ಇಂತಹಾ ಒಳ್ಳೆಯ ಸ್ಥಾನ ಮಾನವನ್ನ ಈ ರಾಜಕಾರಣಿಗಳಿಗೆ ದೇವರು ನೀಡಿದ್ದರೂ ಸಹ ಅದನ್ನ ಸ್ವಾರ್ಥಕ್ಕಾಗಿ ಬಳಸುವ ಈ ನಾಯಕರಿಗೆ ಏನು ಹೇಳಬೇಕೋ ತಿಳಿಯದು.
 
           ಬೇಕಾದರೆ ಒಂದು ಪ್ರಯೋಗ ನೆಡೆದೇ ಹೋಗಲಿ ಈ ಮಹಾನ್ ನಾಯಕರುಗಳು, ಪ್ರತಿಷ್ಟಿತರು, ಬುದ್ದಿಜೀವಿಗಳು ನಾವೇ ಮೇಧವಿ ಎಂದು ಮೆರೆಯುವ ಜನರು ತಮ್ಮ ತಮ್ಮ ಮನೆಯಲ್ಲಿರುವ ಮಕ್ಕಳುಗಳನ್ನ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಲಿ ಆಗ ಸಮಾಜ ಹೇಗೆ ಬದಲಾಯಿಸುತ್ತ ಅದರ ಯೋಚನಾ ಲಹರಿ ಹೇಗೆ ಬದಲಾಯಿಸುತ್ತೆ ಎಂದು ನೋಡಿ.

           ಗೆಳೆಯರೆ ಡೆಮೊಗ್ರೆಸಿ "All are equal" ಎಂಬ ಇಂಗ್ಲೀಶ್ ಮಂತ್ರವನ್ನ ಜಪಮಾಡೋ ಜನರೆಲ್ಲಾ ತಮ್ಮ ತಮ್ಮ ಲೆವೆಲ್ಗೆ ಬೇಕಾಗಿರೋ ಸ್ಕೂರು,ಕಾಲೇಜು,ಆಸ್ಪತ್ರೆ,ಬಸ್,ವಿಮಾನ,ಕಾರು,ಕಾನೂನು ವ್ಯವಸ್ಥೆ, ಸಮಾಜ ವ್ಯವಸ್ಥೆ ಎಲ್ಲವನ್ನೂ ಅವರಿಗೆ ಬೇಕಾದಂತೆ ಕಟ್ಟಿಕೊಂಡಿದ್ದಾರೆ. ಹೀಗಿದ್ದರೂ ಸರ್ವ ಸಮಾನತೆ ಬಗ್ಗೆ ಮಾತಾಡುವುದು ಕೇವಲ ತೀಟೆ ತೀರಿಸಿಕೊಳ್ಳೋದಕ್ಕೆ ಅಷ್ಟೆ.

         ಬಡಿ ನನಗೆ ಏಳುವ ಪ್ರಶ್ನೆ ಈ ಸೋ ಕಾಲ್ಡ್ ಪ್ರತಿಷ್ಟಿತ ಖಾಸಗೀ ಕಾಲೇಜು,ಸ್ಕೂಲುಗಳು ಮಕ್ಕಳನ್ನ ತಯಾರು ಮಾಡುತ್ತಿರುವುದಾದರು ಎಂತಕ್ಕೆ? ಮಗು ದೊಡ್ಡವನಾದ ಮೇಲೆ ಪಬ್,ಬಾರ್ ಅಲ್ಲಿ ಪಾರ್ಟಿ ಮಾಡುವುದು ಹೇಗೆ ಅಲ್ಲಿಯ ಶಿಶ್ಟಾಚಾರಗಳೇನು, ಇಂಗ್ಲೀಷ್ ಮಾತಾಡುವುದು ಹೇಗೆ, ಒಂಟಿಯಾಗಿರುವುದು ಹೇಗೆ, ಎಲ್ಲಿಯೂ ಆಡಹೋಗದೇ ಕ್ಲೀನ್ ಆಗಿರುವುದು ಹೇಗೆ, ಕಾರು ಓಡಿಸುವುದು ಮೈ-ಕೈ ನೋವಾಗದಂತೆ ಆಡುವುದು ಹೇಗೆ, ಜನರೊಂದಿಗೆ ಮಾತನಾಡದಿರುವುದು ಹೇಗೆ, ಬರೀ ದುಡ್ಡು ಮಾಡುವುದು, ಮಜಾ ಮಾಡುವುದು ಹೇಗೆ ಎಂಬ ವಿಷಯಗಳಿಗೇನು? ಇದರ ಹೊರತು ನನಗೆ ಬೇರೆ ಯಾವುದೂ ಕಾಣುತ್ತಿಲ್ಲ ಕಂಡವರು ದಯವಿಟ್ಟು ತಿಳಿಸಿ "ಉಳಿದವರು ಕಂಡಂತೆ".

         ಯಾವ ಶಾಲೆ ನಮ್ಮ ಸಂಸ್ಕೃತಿಯನ್ನ ಕಲಿಸುತ್ತದೆಯೋ,ಯಾವುದು ದೇಶ ಪ್ರೇಮದ ಹೊಳಯನ್ನೇ ಹರಿಸುತ್ತದೆಯೋ, ಯಾವುದು ಮಾತೃ ಭಾಷಯಲ್ಲಿ ಮಗುವಿಗೆ ಶಿಕ್ಷಣ ನೀಡುತ್ತದೆಯೋ, ಯಾವುದು ಪ್ರಕೃತಿಯೊಂದಿಗೆ ಬೆರೆಯುವುದನ್ನ ಹೇಳಿಕೊಡ್ಡುತ್ತದೆಯೋ, ಯಾವುದು ಜನರೊಂದಿಗೆ ಬೆರೆಯುವುದನ್ನ ಹೇಳಿಕೊಡುತ್ತದೆಯೋ, ಯಾವುದು ಎಂತಹ ಕಷ್ಟಕರ ಸಂಧರ್ಭವನ್ನೂ ಭೇದಿಸಿ ಹೊರಗೆ ಬರುವಂತೆ ಮಾಡುತ್ತದೋ, ಯಾವುದು ಮನುಷ್ಯನ ಚೇತನವನ್ನ ಸಮಾಜಕ್ಕೆ ಹರಿಸುವಂತೆ ಮಾಡುತ್ತದೋ ಅದು ಶಾಲೆ,ಅದು ಶಿಕ್ಷಣ.

"ಕನ್ನಡ ಒಂದು ಮುಳುಗುತ್ತಿರುವ ಟೈಟಾನಿಕ್" ಹೇಳಿದವರು ಜಯಂತ ಕಾಯ್ಕಿಣಿ.
          ಹೀಗಿರುವಾಗ ಅದನ್ನ ಮೇಲೆತ್ತಲು, ಕನ್ನಡ ಬರದೇ ಇದ್ದವರಿಗೆ ಕನ್ನಡ ಕಲಿಸುವುದು, ಪರಭಾಷಿಗರಿಗೆ ಕನ್ನಡ ಮಾತಾಡುವಂತೆ ಹೇಳುವುದು, ಕನ್ನಡದ ರಾಯಭಾರಿಯೋ ಎಂಬಂತೆ ಬಿಂಬಿತವಾಗಿರುವ ಸಿನೆಮಾಗಳನ್ನು ನೋಡುವುದೋ ಇವೆಲ್ಲವುಕ್ಕಿಂತಲೂ ಹೆಚ್ಚಾಗಿ "ಮಕ್ಕಳಲ್ಲಿ ಕನ್ನಡ" ಎಂಬುದು ನೆಡೆಯಬೇಕು.
ನಾಮ್ಮ ಮುಂದಿನ ಪೀಳಿಗೆಯಾದರೂ ಕನ್ನಡ ಮಯವಾಗಿರಲು ಈಗಲೆ ಸಸಿ ನೆಡುವ ಕಾರ್ಯವನ್ನ ಪ್ರತಿಯೊಬ್ಬರೂ ಮಾಡುವ ಅಗತ್ಯವಿದೆ.
         ಇಂದು ಆಂಗ್ಲ ಭಾಷೆ ಇಷ್ಟು ಅಗಾಧವಾಗಿ ಬೆಳೆದಿದೆಯೆಂದರೆ ಅದು ಆ ಭಾಷೆಯ "Perfectness" ಅಲ್ಲ ಬದಲಾಗಿ ಆ ಜನರ ಭಷಾ ನಿಷ್ಠೆ, ಆ ಜನರ ಭಾಷಾ ದೃಡತೆ. ಎಲ್ಲವನ್ನೂ ಅವರಿಂದ ಕಲಿಯುವ ನಾವು ಇದನ್ನಾದರೂ ಕಲಿತು ಕನ್ನಡವನ್ನ ಅದರ ಮೂಲಕ ಭಾರತ ಜನ್ಯ ಭಾಷೆಗಳನ್ನ ಕಟ್ಟಿ ಬೆಳೆಸುವ ಎಲ್ಲಾ ಭಾಷೆಗಳನ್ನ ಗೌರವಿಸುವ.

ಧನ್ಯವಾದಗಳು
ಪೃಥ್ವಿರಾಜ್

Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ