Posts

Showing posts from October, 2013

ಜೊತೆಗಾತಿ

ನೀ ನನ್ನ ಬದುಕಿನ ಪ್ರಾಣ ಪ್ರಾಣದೊಳಗಿನ ಮೌನ ಮೌನದೊಳಗಿನ ಗಾನ ಗಾನವೆಂಬ ಜೀವಸುಧೆಯ ಧ್ಯಾನ ಧ್ಯಾನದೊಳು ಮಾಯೆಯಾಗಿ ಮಾಯೇಯೋಳು ಹೆಣ್ಣಾಗಿ ಹೆಣ್ಣೆಂಬ ಆಸರೆಯಾಗಿ ಆಸರೆಗೆ ಬೆಡುತಿಹೆ ನಾನೊಬ್ಬ ತಿರುಕ ತಿರುಕನ ಜೀವನದ ಸಿರಿಯೋ ಸಿರಿಯ ದಾರಿಗೆ ಛಲದ ಭಲವೋ ಭಲದ ಜನನಕೆ ನೀ ಮಹಾಶಕ್ತಿಯೋ ಶಕ್ತಿ ನೀ ಎನ್ನಯ ಹೃದಯದ ಮನೆಗೋ ಮನೆಯೆಂಬ ಗುಡಿಗೆ ನೀ ಹೊನ್ನ ಕಲಶ ಕಲಶದ ಚಿಗುರು ಈ ನಿನ್ನ ಹರೆಯ ಹರೆಯದ ಭಾವಕೆ ನೀನೊಂದು ಸ್ಪೂರ್ತಿ ಸ್ಪೂರ್ತಿಯ ಚಿಲುಮೆಯೋ ನಿನ್ನ ಜೊತೆಗಿನ ಜೀವನ ಜೀವನದಿ ಹಡಗು ನೀ ನೀ ನನ್ನ ಪಯಣದೀ ಪಯಣದ ದಡವೋ ನಿತ್ಯದ ಸುಖವೊ ಸುಖದ ಅಂತ್ಯವೋ ಬದುಕಿನ ಗುರಿಯೋ ಗುರಿಯ ತಲುಪಲು ಬೇಕು ನಿನ್ನಯ ಜೊತೆಯೋ ನಿನ್ನಯ ಜೊತೆಯೋ

ಗಿರಿಗಳ ನಡುವಿನ ನಗರಿ ಶೃಂಗೇರಿ

                 ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು. ಕರ್ಣಗಳಿಗೆ ಮುದ ನೀಡುವ ಸಾವಿರಾರು ಪಕ್ಷಿ ಸಂಕುಲದ ಗಾನ.ಆ ಗಾನವನ್ನ ನೂರಾರು ಹೂ ಹಣ್ಣುಗಳ ಗಂಧದೊಂದಿಗೆ ಬೆರೆಸಿ ಎಲ್ಲೆಲ್ಲೂ ಔತಣವನ್ನೀಡುವ ಆ ತಣ್ಣನೆಯ ಗಾಳಿ.ಪ್ರಕರ ಸೂರ್ಯನ ಶಾಕಕ್ಕೆ ಆವಿಯಾಗುವ ನೀರು ಬೆಟ್ಟ ಗುಡಗಳ ನಡುವೆ ಎದ್ದು ಬಾನ ಸೇರಿ ಮೋಡವಾಗುವ ರೋಮಾಂಚನವಾದ ದೃಶ್ಯಗಳು. ಈ ವೈಭೋಗದಲ್ಲಿ ವೈರಾಗ್ಯವನು ತಾಳಿ ತಪಸ್ಸನ್ನಾಚರಿಸುವಂತೆ ದೃಢವಾಗಿ ನಿಂತಿರುವ ಋಷಿಸ್ವರೂಪವಾದ ಬೆಟ್ಟ ಗುಡ್ಡಗಳು.                 ಈ ನಡುವೆ ಸನಾತನ ಧರ್ಮವನ್ನ ಯುಗಯುಗಗಳಿಂದ ಸಂರಕ್ಷಿಸುತ್ತಾ ಮಾನವ ಜನಾಂಗಕ್ಕೆ ಆದ್ಯಾತ್ಮದ ಅಮೃತವನ್ನ ನೀಡುತ್ತಾ ಜದ್ಗುರುವಾಗಿ ವಿರಾಜಿಸುತ್ತಿರುವ ನಗರ ಶೃಂಗೇರಿ, ಮಲೆನಾಡಿನ ಮುಕುಟವೇ ಈ ಶೃಂಗೇರಿ ಹಾಗು ತನ್ನ ಮಕ್ಕಳನ್ನ ಪ್ರೀತಿಯಿಂದ ಸಲಹುತ್ತಿರುವ ತಾಯಿ ಇಲ್ಲಿನ ಅದಿದೇವತೆ ಶ್ರೀ ಶಾರಾದಾಂಬೆ. ಈ ಪುಣ್ಯಕ್ಷೇತ್ರ ಇತಿಹಾಸ ಕೇವಲ ಕಲಿಯುಗದಲ್ಲ.ಶೃಂಗೇರಿಯ ಉಲ್ಲೇಕವು ರಾಮಾಯಣ ಮಹಾಭಾರತಗಳಲ್ಲಿಯೂ ಇವೆ.ಕಾಶ್ಯಪರ ಮಗನಾದ ವಿಡಂಭಕ ಋಷಿಯ ಮಗನಾದ ಋಷ್ಯಶೃಂಗರು ಇದ್ದ ಪುಣ್ಯಕ್ಷೇತ್ರ ಈ ಶೃಂಗೇರಿ. ಶ್ರೀ ಋಷ್ಯಶೃಂಗರು ಧಶರಥ ಮಹಾರಾಜನು ಪುತ್ರ ಸಂತಾನವಿಲ್ಲದೆ ಪುತ್ರಕಾಮೇಷ್ಠಿಯಾಗವನ್ನ ಮಾಡಲು ನಿರ್ದರಿಸಿದ್ದಾಗ ಆ ಕಾರ್ಯವನ್ನ ಪೂರ್ಣಗಳಿಸಿ ಕೊಟ್ಟು ಸನಾತನ ಧರ್ಮದ ರಕ್ಷಣೆಗಾಗಿ ನಮ್ಮೆಲ್ಲರ ಒಳಿತಿಗಾಗಿ ಪಿತೃ ಸ್ವರೂಪರಾದ ಶ್ರೀ ರಾಮರ ಅವತಾರಕ್ಕೆ ನಾಂದಿ ಹಾಡಿದ ಮಹಾನು