ಗಿರಿಗಳ ನಡುವಿನ ನಗರಿ ಶೃಂಗೇರಿ

                 ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚ ಹಸಿರು. ಕರ್ಣಗಳಿಗೆ ಮುದ ನೀಡುವ ಸಾವಿರಾರು ಪಕ್ಷಿ ಸಂಕುಲದ ಗಾನ.ಆ ಗಾನವನ್ನ ನೂರಾರು ಹೂ ಹಣ್ಣುಗಳ ಗಂಧದೊಂದಿಗೆ ಬೆರೆಸಿ ಎಲ್ಲೆಲ್ಲೂ ಔತಣವನ್ನೀಡುವ ಆ ತಣ್ಣನೆಯ ಗಾಳಿ.ಪ್ರಕರ ಸೂರ್ಯನ ಶಾಕಕ್ಕೆ ಆವಿಯಾಗುವ ನೀರು ಬೆಟ್ಟ ಗುಡಗಳ ನಡುವೆ ಎದ್ದು ಬಾನ ಸೇರಿ ಮೋಡವಾಗುವ ರೋಮಾಂಚನವಾದ ದೃಶ್ಯಗಳು. ಈ ವೈಭೋಗದಲ್ಲಿ ವೈರಾಗ್ಯವನು ತಾಳಿ ತಪಸ್ಸನ್ನಾಚರಿಸುವಂತೆ ದೃಢವಾಗಿ ನಿಂತಿರುವ ಋಷಿಸ್ವರೂಪವಾದ ಬೆಟ್ಟ ಗುಡ್ಡಗಳು.
                ಈ ನಡುವೆ ಸನಾತನ ಧರ್ಮವನ್ನ ಯುಗಯುಗಗಳಿಂದ ಸಂರಕ್ಷಿಸುತ್ತಾ ಮಾನವ ಜನಾಂಗಕ್ಕೆ ಆದ್ಯಾತ್ಮದ ಅಮೃತವನ್ನ ನೀಡುತ್ತಾ ಜದ್ಗುರುವಾಗಿ ವಿರಾಜಿಸುತ್ತಿರುವ ನಗರ ಶೃಂಗೇರಿ, ಮಲೆನಾಡಿನ ಮುಕುಟವೇ ಈ ಶೃಂಗೇರಿ ಹಾಗು ತನ್ನ ಮಕ್ಕಳನ್ನ ಪ್ರೀತಿಯಿಂದ ಸಲಹುತ್ತಿರುವ ತಾಯಿ ಇಲ್ಲಿನ ಅದಿದೇವತೆ ಶ್ರೀ ಶಾರಾದಾಂಬೆ.
ಈ ಪುಣ್ಯಕ್ಷೇತ್ರ ಇತಿಹಾಸ ಕೇವಲ ಕಲಿಯುಗದಲ್ಲ.ಶೃಂಗೇರಿಯ ಉಲ್ಲೇಕವು ರಾಮಾಯಣ ಮಹಾಭಾರತಗಳಲ್ಲಿಯೂ ಇವೆ.ಕಾಶ್ಯಪರ ಮಗನಾದ ವಿಡಂಭಕ ಋಷಿಯ ಮಗನಾದ ಋಷ್ಯಶೃಂಗರು ಇದ್ದ ಪುಣ್ಯಕ್ಷೇತ್ರ ಈ ಶೃಂಗೇರಿ. ಶ್ರೀ ಋಷ್ಯಶೃಂಗರು ಧಶರಥ ಮಹಾರಾಜನು ಪುತ್ರ ಸಂತಾನವಿಲ್ಲದೆ ಪುತ್ರಕಾಮೇಷ್ಠಿಯಾಗವನ್ನ ಮಾಡಲು ನಿರ್ದರಿಸಿದ್ದಾಗ ಆ ಕಾರ್ಯವನ್ನ ಪೂರ್ಣಗಳಿಸಿ ಕೊಟ್ಟು ಸನಾತನ ಧರ್ಮದ ರಕ್ಷಣೆಗಾಗಿ ನಮ್ಮೆಲ್ಲರ ಒಳಿತಿಗಾಗಿ ಪಿತೃ ಸ್ವರೂಪರಾದ ಶ್ರೀ ರಾಮರ ಅವತಾರಕ್ಕೆ ನಾಂದಿ ಹಾಡಿದ ಮಹಾನುಭಾವರು ಶ್ರೀ ಋಷ್ಯಶೃಂಗರು.

             ಅದರ ನಂತರ ಶ್ರೀ ಋಷ್ಯಶೃಂಗರು ಪತ್ನಿ ಸಮೇತರಾಗಿ ಶೃಂಗೇರಿಗೆ ಬಂದು ಶೃಂಗೇರಿಯ ಶ್ರೀ ಮಲಹಾನಿಕೇಶ್ವರ ಲಿಂಗದ ಮುಂದೆ ತಪಸ್ಸನ್ನಾಚರಿಸುತ್ತಿದ್ದ ಅವರ ತಂದೆಯಾದ ವಿಢಂಬಕರ ಸೇವೆಯನ್ನಾರಂಭಿಸಿದರು. ನಂತರ ಮಹಾನುಭಾವರಾದ ವಿಢಂಬಕರು ಆ ಮಲಹಾನಿಕೇಶ್ವರ ಲಿಂಗದಲ್ಲೇ ಲೀನರಾದರು. ಈ ಮಲಹಾನಿಕೇಶ್ವರ ಲಿಂಗವನ್ನ ಈಗಲೂ ನಾವು ಶೃಂಗೇರಿಯ ಹೃದಯಭಾಗದಲ್ಲಿ ನೋಡಬಹುದು.ವಿಢಂಬಕರ ಐಕ್ಯದ ನಂತರ ಶ್ರೀ ಋಷ್ಯಶೃಂಗರು ಶೃಂಗೇರಿಯ ಸಮೀದಲ್ಲೇ ಇರುವ ಕಿಗ್ಗಾದಲ್ಲಿ ಹೋಗಿ ತಪಸ್ಸನ್ನ ಆಚರಿಸಿದರು. ಅಲ್ಲಿರುವ ಋಷ್ಯಶೃಂಗ ಲಿಂಗ ಈಗಲೂ ಇರುವುದನ್ನ ನಾವು ಕಾಣಬಹುದು.ನಂತರ ಶ್ರೀ ಋಷ್ಯಶೃಂಗರು ಋಗ್ವೇದದ 2ನೇ ಮಂಡಲದ 136ನೇ ಅಷ್ಟಕದ 7ನೇ ಶ್ಲೋಕದ ದೃಷ್ಟಾರರಾದರು.ಹೀಗೆ ವೇದ ಜ್ಞಾನವನ್ನ ಜಗತ್ತಿಗೇ ನೀಡುವಲ್ಲಿ ಶೃಂಗೇರಿಯು ಮುಂಚೂಣಿಯಲ್ಲಿದೆ.

                ಮಹಾನುಭಾವರಾದ ಶ್ರೀ ಶಂಕರರು ತುಂಗಾನದಿಯ ತೀರದಲ್ಲಿ ಸಹಜ ಶತ್ರುಗಳಾದ ಹಾವು ಮತ್ತು ಕಪ್ಪೆಗಳು ಪರಸ್ಪರ ಮಿತ್ರರಾಗಿರುವಂತಹ ಶೃಂಗೇರಿಯ ವಿಶೇಷತೆಯನ್ನ ಅರಿತು ಇದು ತಪೂಯೋಗ್ಯವಾದ ಪವಿತ್ರ ಸ್ಥಳ ಎಂದು ಶ್ರೀ ಶಂಕರರು ನಂತರದ ದಿನಗಳಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಈ ಶೃಂಗೇರಿ ಕ್ಷೇತ್ರವನ್ನ ಚತುರಾಮ್ನಾಯ ಪೀಠದಲ್ಲಿ ಮೊದಲನೆಯದಾಗಿ ಸ್ಥಾಪಿಸಿದರು.ನಂತರ ಭಾರತ ದೇಶವನ್ನೆಲ್ಲಾ ತಿರುಗಿ ಧರ್ಮದ ಪುನರುತ್ತಾನಕ್ಕೆ ಕಾರಣರಾದರು. ಶ್ರೀ ಶಂಕರರ ಶಿಷ್ಯವೃಂದದಲ್ಲಿ ಹಿರಿಯರಾದ ಶ್ರೀ ಸುರೇಶ್ವರಾಚಾರ್ಯರನ್ನ ಶೃಂಗೇರಿಯ ಪೀಠಾಧಿಪತಿಯರನ್ನಾಗಿಸಿದರು.

              ಶ್ರೀ ಸುರೇಶ್ವರಾಚಾರ್ಯರಿಂದ ಹಿಡಿದು ಈಗಿನ ಯತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ತನಕವೂ ಬಂದ ಗುರುಪರಂಪರೆ ಅವಿಚ್ಚಿನ್ನವಾಗಿರುವುದು. ಎಲ್ಲರೂ ಮಹಾತಪಸ್ವಿಗಳೇ. ಪ್ರತಿಯೊಬ್ಬರು ಸಮಾಜದ ಏಳ್ಗೆಗಾಗಿ ದುಡಿದವರೇ.ಪ್ರತಿಯೊಬ್ಬರೂ ಸನಾತನ ಧರ್ಮದ ರಕ್ಷಣೆಯಲ್ಲಿ ಮುಂದಿದ್ದವರೇ.ಇಡೀ ದೇಶವು ಮುಸ್ಲೀಮರ ದಾಳಿಗೆ ನಲುಗಿ ಹೋಗುತ್ತಿದ್ದಾಗ ಹಕ್ಕ ಬುಕ್ಕರಿಗೆ ಧೈರ್ಯವನ್ನ ತುಂಬಿ ಸುತ್ತಲೂ ಇದ್ದ ಮುಸ್ಲೀಮರ ಸಾರ್ಮಾಜ್ಯದ ಮದ್ಯ ವಿಜಯನಗರ ಹಿಂದೂ ಸಾರ್ಮಾಜ್ಯವನ್ನ ಸ್ಥಾಪಿಸುವಂತೆ ಹೇಳಿದವರು ಶ್ರೀ ವಿದ್ಯಾರಣ್ಯರು.ಹೀಗೆ ಪ್ರತೀಬಾರಿಯು ಸಮಾಜದ ಶಕ್ತಿ ಕುಂದಿದಾಗಲೆಲ್ಲಾ ತಮ್ಮ ಆದ್ಯಾತ್ಮ ಶಕ್ತಿಯಿಂದ ಸನಾತನ ಧರ್ಮದ ಅಡಿಪಾಯದ ಮೇಲೆ ಆ ಸಮಾಜಕ್ಕೆ ಪುನಶ್ಚೇತನ ಮಾಡುವ ಕಾರ್ಯವನ್ನ ಶ್ರೀ ಶೃಂಗೇರಿಯ ಗುರುಪರಂಪರೆ ಮಾಡುತ್ತಾ ಬಂದಿದೆ.
ನಂತರದ ದಿನಗಳಲ್ಲಿ ಬ್ರಿಟೀಷರ ದಾಳಿ,ಮುಸ್ಲೀಮರ ದಾಳಿಯನ್ನು ಎದುರಿಸಿ ವಿಜಯನಗರ ಸಂಸ್ಥಾನ,ಕೆಳದಿ ನಾಯಕರ ಆಶ್ರಯ,ನಂತರ ಮೈಸೂರು ಸಂಸ್ಥಾನದ ಆಶ್ರಯ ನಂತರದ ದಿನಗಳಲ್ಲಿ ಕರ್ನಾಟಕ ಪ್ರಾಂತ್ಯಕ್ಕೆ ಶೃಂಗೇರಿಯು ಸೇರಿಕೊಂಡಿತು.
           ಈಗಲೂ ಶೃಂಗೇರಿ ಪೀಠವು ಧರ್ಮಪ್ರಚಾರವಾಗಲೀ,ವೇದೋಪಸನೆಯಾಗಲಿ,ಶಿಕ್ಷಣ ಕ್ಷೇತ್ರದಲ್ಲಾಗಲಿ ಪ್ರತಿಯೊಂದು ಕ್ಷೇತ್ರದಲ್ಲೂ ಶೃಂಗೇರಿ ಪೀಠವು ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಇದಕ್ಕೊಂದು ಉದಾಹರಣೆಯೆಂದರೆ ಸುತ್ತಮುತ್ತಲಿನ ಶಾಲಾ ಕಾಲೇಜುಗಳಿಗೆ ಮದ್ಯಾಹ್ನದ ಊಟವನ್ನ ಶೃಂಗೇರಿ ಮಠದಿಂದ ಪ್ರತಿದಿನ ಉಚಿತವಾಗಿ ನೀಡಲಾಗುತ್ತಿದೆ.ಇನ್ನೂ ಸಮಾಜ ಮುಖಿಯಾದ ಅನೇಕ ಕಾರ್ಯಗಳನ್ನ ಮಾಡುತ್ತಿದ್ದಾರೆ.

           ಶೃಂಗೇರಿಯ ವಿಶೇಷತೆಯಲ್ಲಿ ನವರಾತ್ರಿಯೂ ಒಂದು. ನವರಾತ್ರಿಯ ಆಚರಣೆಗೆ ತನ್ನದೇ ಆದ ರಂಗನ್ನ ಶೃಂಗೇರಿಯಲ್ಲಿ ನಾವು ಕಾಣಬಹುದು.ಶ್ರೀ ಶಾರಾದಾಂಬೆ ನವರಾತ್ರಿಯ ಪ್ರತಿದಿನವೂ ಒಂದೊಂದು ಅಲಂಕಾರದಲ್ಲಿ ವಿಜೃಂಬಿಸುತ್ತ ಎಲ್ಲರ ಮನಸ್ಸಿಗೆ ಮುದವನ್ನ ನೀಡುತ್ತಾಳೆ. ನವರಾತ್ರಿಯ ರಾತ್ರಿಯಂದು  ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು ಸಾನಿದ್ಯದಲ್ಲಿ ನೆಡೆಯುವ ದರ್ಬಾರನ್ನು ಜೀವಮಾನದಲ್ಲಿ ಒಮ್ಮೆಯಾದರೂ ನೋಡಿ ಮನತುಂಬಿಕೊಳ್ಳಬೇಕು. ವಿಜೃಂಬಣೆ ಎಷ್ಟೇ ಇರಲಿ ಶಾಸ್ತ್ರಸಂಪ್ರದಾಯಗಳಿಗೆ ಚ್ಯುತಿಬಾರದಂತೆ ಪ್ರತಿಯೊಂದನ್ನು ನೆಡೆಸಿಕೊಂಡು ಹೋಗುವಲ್ಲಿ ಶೃಂಗೇರಿ ತನ್ನ ವಿಶೇಷತೆತಲ್ಲಿ ಆರ್ಕಷಣೆಯನ್ನು ಹೊಂದಿದೆ. ಶರನ್ನವರಾತ್ರಿ ಉತ್ಸವ ಇನ್ನೇನು ಪ್ರಾರಂಭವಾಗುತ್ತಿದೆ.ಪ್ರತಿಯೊಬ್ಬರೂ ಬಂದು ಶ್ರೀ ಅಮ್ಮನವರ ದರ್ಶನವನ್ನ ಪಡೆದು ಧನ್ಯರಾಗೋಣ.


ಶೃಂಗೇರಿಯಲ್ಲಿ ಶ್ರೀ ಶಂಕರರು ಸ್ಥಾಪಿಸಿದ ಶ್ರೀ ಚಕ್ರವಿದೆ. ಆ ಶ್ರೀ ಚಕ್ರಕ್ಕೆ ಅಮ್ಮನವರಾದ ಶ್ರೀ ಶಾರದಾಂಬೆಯ ಶಕ್ತಿಯನ್ನ ಆಹ್ವಾನಿಸಿದ್ದಾರೆ.ನಂತರ ಶ್ರೀ ಚಕ್ರದ ರಕ್ಷಣೆಗಾಗಿ ಶೃಂಗೇರಿಯ ನಾಲ್ಕು ದಿಕ್ಕುಗಳಲ್ಲಿ ಕ್ಷೇತ್ರಪಾಲರಾದ ಕಾಲಭೈರೇಶ್ವರ,ದುರ್ಗಾದೇವಿ,ಕಾಳಿ ಮತ್ತು ಹನುಂತನ ದೇವಸ್ತಾನವನ್ನ ಸ್ತಾಪಿಸಿದ್ದಾರೆ.ಈಗಲು ಇವುಗಳಿಗೆ ಪ್ರತಿ ದಿನವು ಪೂಜೆ ನೆಡೆಯುತ್ತದೆ.ಒಟ್ಟಿನಲ್ಲಿ ಹೇಳಬೇಕಾದರೆ ಶೃಂಗೇರಿಯು ಜಿಜ್ಞಾಸುಗಳಿಗೆ ಜ್ಞಾನಾಮೃತವನ್ನು ನೀಡುತ್ತ,ಭಕ್ತರಿಗೆ ಆಶ್ರಯವನ್ನ ನೀಡುತ್ತ,ಸೋತವರಿಗೆ ಸಹಕಾರವನ್ನ ನೀಡುತ್ತಾ,ಇಡೀ ಸಮಾಜವನ್ನ ಧರ್ಮದ ಹಾದಿಯಲ್ಲಿ ನೆಡೆಸುವ ಕಾರ್ಯವನ್ನ ಹಿಂದಿನಿಂದಲೂ ಮಾಡುತ್ತಲೇಬಂದಿದೆ ಮುಂದೆಯೂ ಶ್ರೀ ಅಮ್ಮನವರ ಕೃಪೆಯಿಂದ ಮಾಡುತ್ತ ಮುಂದುವರೆಯುತ್ತದೆ.


Comments

  1. Shrngeri ya bagge nange tilidittu aadre yavaga adre bagge abhimana banto nange gotglilla,, Sri. Shankra ra 4 peetagllalli ondu anta gotdaginda annisutte, yeno visheshavada abhimana nange Srangeri ya bagge idde ide......... Nijakku Shankarara jeevana yeshtu adrsha prya alva,,,,,,, Smrtha kutumba dinda bindiddar inda annisutte namma manegallli ammanavra muka nod de belge ne agalla ........

    ReplyDelete

Post a Comment

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್