ಶರಣೆಂಬೆ ಶಾರದಾಂಬೆ

ನೀ ಎನ್ನ ತಾಯವ್ವ ನೀ ಎನ್ನ ತಾಯಿ
ನಗುಮೊಗದ ತಾಯೇ ಶ್ರೀ ಶಾರದಾಂಬೆ
ನೀ ಶುದ್ದ ಪ್ರಕೃತಿ ಜಗದೊಳು ತುಂಬಿರುವೆ
ನಾ ಕೇವಲ ವಿಕೃತಿ ಜಗದೊಳು ಪುಟ್ಟಿರುವೆ
ವಿಕೃತಿಯ ಪ್ರಾಕೃತಿಸಿ, ಶೂನ್ಯದೊಳು ಗುಣಿಸಿ
ನಿಸ್ಸತ್ವವಾ ಸತ್ವವಾಗಿಸೋ ಪರಮ ಚೈತನ್ಯವೋ ನೀನು ಶ್ರೀ ಶಾರದಾಂಬೆ

ಸೃಷ್ಠಿಕಾರಣವೋ ನೀ ಮಹಾಮಾತೆ
ಸೌಂದರ್ಯದ ಗಣಿಯೋ ನೀ ಶ್ರೀ ಲಲಿತೆ
ಸರ್ವಮಂಗಳೆಯೋ ನೀನು ಶ್ರೀ ಮಾತೆ
ಹಸಿದವರಿಗೆ ಹಸಿವನೀಗಿಸೋ ಅನ್ನದಾತೆ, ಶ್ರೀ ಶಾರದಾಂಬೆ

ಜಗವೊಂದು ಮಾಯಾಪಂಜರ ನಾನೊಂದು ಗಿಳಿಯೋ
ಜಗದ ಡಂಭವ ಬಿಡಿಸಿ ಶುದ್ದಜ್ಞಾನವ ಎರೆದು
ಜೀವನಾಂತ್ಯವ ತೋರೋ ಆದಿ ಗುರುವೋ ನೀನು
ಪರಾತತ್ವವಾ ತಿಳಿಸೋ ಮೋಕ್ಷದಾಯಿನಿ ನೀನು ಶ್ರೀ ಶಾರದಾಂಬೆ

ದೇಹದಾ ಕಣಕಣದ ಸತ್ವವೋ ನೀನು ಮಹಾರಾಜ್ಷಿ
ಬಾಳಿನಾ ಕ್ಷಣಕ್ಷಣದ ತುಡಿತವೋ ನೀನು ಆನಂದ ಸ್ವರೂಪಿ
ನಿರ್ಗುಣದ ಗುಣವೋ, ನಿರ್ವಿಕಾರದ ಕಾರವೋ ನೀ ಬ್ರಹ್ಮಾಜ್ಞಿ
ನೀನಿಲ್ಲದೇ ಏನಿಲ್ಲಾ, ನಿನ್ನಿಂದಲೇ ಜಗವೆಲ್ಲಾ
ಜಗದ ಹೃದಯದಾ ಶಕ್ತಿ ನೀನು ಶ್ರೀ ಶಾರದಾಂಬೆ
ಜಗದ ಹೃದಯದಾ ಶಕ್ತಿ ನೀನು ಶ್ರೀ ಶಾರದಾಂಬೆ

ನೀ ಎನ್ನ ತಾಯವ್ವ ನೀ ಎನ್ನ ತಾಯಿ
ನಗುಮೊಗದ ತಾಯೇ ಶ್ರೀ ಶಾರದಾಂಬೆ

Comments

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ನಾನಿರುವೆನು ನಿನ್ನ ಜೊತೆ

ಕನ್ನಡ ಮೀಡಿಯಮ್