ಹಠ ಮಾಡದಿರು

ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು
ಮನವು ಮಿಡಿಯುತಿಹುದು ನಿನ್ನ ಸನಿಹಕೆ
ಹೃದಯ ಬೀಗುತಿಹುದು ನಿನ್ನ ಸ್ಪರ್ಶಕೆ
ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು

ತಿಳಿದಿರುವೆ ನೀನೆಲ್ಲವ, ಮನದ ಚಿತ್ತವು ನೀನು
ಹೊರಟೆಯೆಂದರೆ ಧಿಕ್ಕರಿಸಿಹೆ ನಿನ್ನ ಮನವ ನೀನು
ನಿನ್ನ ಪಯಣವು ಸೆಳೆದು ನೆಡೆದಿದೆ ನನ್ನ ದೇಹದ ಪ್ರಾಣವ
ವಿರಹ ವೇದನೆ ಬಂದು ಬಡಿದಿದೆ ನನ್ನ ಮನದ ದಡವ

ಜಗವೆಲ್ಲ ಮಸುಕು ನೀ ಎದುರಿಗಿರಲು
ಭಯದ ಸೋಲೋ, ನಾ ನಿನ್ನ ಕೈ ಹಿಡಿದಿರಲು
ನಿನ್ನ ಮೊಗವದೋ ಕೆಣಕುತಿಹುದು ನನ್ನ
ಶಕ್ತಿಯಿರ್ದೊಡೆ ಪಡೆ, ನೀ ಎನ್ನ ನನ್ನ

ನೂರು ಮೈಲು ದೂರವಿದ್ದರು, ಸನಿಹವಿರುವೆ ಎಂದೂ ನೀನು
ನೂರು ಯೋಚನೆ ಹೋಮ್ಮುತ್ತಿದ್ದರು ನಡುವಿರುವ ಹಿರಿ ಚಿಲುಮೆ ನೀನು
ನೂರು ಭಾವ ಬಂದು ಹೋದರು, ಬಂದೂ ಹೋಗದ ಸ್ಥಿರ ಭಾವ ನೀನು
ನೂರು ಜನುಮ ಎತ್ತಿ ಬಂದರೂ, ಮತ್ತೆ ಸೇರುವೆ ನಿನ್ನೇ ನಾನು ನಿನ್ನೇ ನಾನು

ಇಂದೇ ಹೋಗುವ ಹಠ ಮಾಡದಿರು ಹಠ ಮಾಡದಿರು
ಇಂದೇ ಹೋಗುವ ಮಾತೂ ಆಡದಿರು ಮಾತೂ ಆಡದಿರು.....Comments

  1. ಹೋಗುವ ಕ್ರಿಯೆ ಮನೋ ವೇದಕವೇ ಸರಿ. ಅದರ ಸೂಚನೆ ಅಥವ ನುಡಿಯೂ ಸಹಿಸಲು ಅಸಾಧ್ಯವೇ ಸರಿ. ವೈರಿಯಾದರೂ ಸರಿ, ನಿರ್ಗಮಿಸಬಾರದು ಕಣ್ ನೊಟದಿಂದ!

    ಅಂದಹಾಗೆ, ಬ್ಲಾಗ್ ಕೃಷಿ ಸಮೃದ್ಧವಾಗಿರಲಿ. ಬರೆಯುತ್ತಲೇ ಇರಿ...

    ReplyDelete

Post a Comment

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್