ಇದು ನನ್ನ ಜೀವನ

ಇದು ನನ್ನ ಜೀವನ. ದುಡಿಯುವೆ  ನನಗೆ ಬೇಕಾದಂತೆ ಖರ್ಚು ಮಾಡುವೆ ಇದು ನನ್ನ ಜೀವನ. ವೀಕೆಂಡ್ ಪಾರ್ಟಿ, ಗೆಳಯ ಗೆಳತಿಯರೊಂದಿಗೆ ಪ್ರವಾಸ, ಹೋಮ್ಸ್ಟೇ, ರೆಸಾರ್ಟ್ ಅಲ್ಲಿ ಮೋಜು ಮಸ್ತಿ ಮಾಡುವೆ ಇದು ನನ್ನ ಜೀವನ. ಪೂರ್ತಿ ಎಣ್ಣೆ ಹೊಡೆದು ನಶೆಯ ಅಮಲಿನಲ್ಲಿ ತೇಲುವೆ ಇದು ನನ್ನ ಜೀವನ. ಈ ಜಗತ್ತಿನ ಜೀವನದಲ್ಲೇನಿದೆ ಬರೀ ನಿಸ್ಸಾರ. ಆ ನಿಸ್ಸಾರವನ್ನ ಸಾರವನ್ನಾಗಿಸುವುದೇ ಈ ಮೋಜು ಮಸ್ತಿ ಹಾಗಾಗಿದ್ದರಿಂದ ಇದು ನನ್ನ ಜೀವನ ನಾನು ಏನು ಬೇಕಾದರೂ ಮಾಡುವೆ.

            ಇದು ನನ್ನ ಜೀವನ ಇದನ್ನ ನಯಂತ್ರಿಸುವುದು ಯಾತಕ್ಕೆ? ಇದು ನನ್ನ ಜೀವನ ನಿಯಂತ್ರಿಸುವ ಹಕ್ಕು ಯಾರೀಗೂ ಇಲ್ಲ. ಇದು ನನ್ನ ಜೀವನ ನಿಯಂತ್ರಣದ ಗಾಳಕ್ಕೆ ಸಿಕ್ಕುವ ಮೀನು ನಾನಲ್ಲ, ಆಗಸದಲ್ಲಿರುವ ಮೋಡಕ್ಕಿಂತ ಮೇಲೆ ಹಾರುವ ಹದ್ದಿನ ಸ್ವಾತಂತ್ರ್ಯ ನಾ ಇಚ್ಚಿಸುವೆ ಅದನ್ನ ಪಡೆದೇ ತೀರುವೆ. ಹೆಂಡತಿ, ಮಕ್ಕಳು, ಸಂಭಂಧಗಳು, ಶಿಷ್ಟಾಚಾರಗಳು,ಸಂಸ್ಕೃತಿಗಳು, ಧರ್ಮಗಳು, ಆಚಾರಗಳು ಇವೆಲ್ಲ ನಾ ಬಯಸುವ ಖುಷಿಯನ್ನ ನನಗೆ ಎಂದಿಗೂ ಕೊಡಲಿಲ್ಲ ಕೊಡುವುದೂ ಇಲ್ಲ. ಇದು ನನ್ನ ಜೀವನ ಅದನ್ನ ನಿಯಂತ್ರಿಸುವ  ಅಧಿಕಾರ ಇವುಗಳಿಗೆ ಕೊಟ್ಟವರಾರು? ಮೊದಲೇ ಹೇಳಿದಂತೆ ಇವೆಲ್ಲಾ ಆಗಸದಲ್ಲಿ ಹರಡಿರುವ ಮೋಡದಂತೆ ನಮಗೆ ಸ್ವಚ್ಚಂದವಾಗಿ ಹಾರಾಡಲೂ ಬಿಡದೆ ನಮ್ಮನ್ನ ಬಂಧಿಸಿಡುವ ಎಲ್ಲೆಗಳು, ನಾನು ಇವೆಲ್ಲವನ್ನ ದಾಟಿ ಹಾರುವೆ ಇದೇ ನನ್ನ ಗುರಿ.

            ಮನುಷ್ಯನಾಗಿ ಹುಟ್ಟಿಯಾಗಿದೆ ಇರುವುದೊಂದೇ ಜೀವನ ಸುಮ್ಮನೇ ಕಾಣದಿರುವ ಕೇಳದಿರುವ ಕಲ್ಪನೆಗಳಿಗೆ,ನಂಬಿಕೆಗಳ ಶೂಲಕ್ಕೆ ತಲೆಕೊಡುವ ಬದಲು ಇದು ನನ್ನ ಜೀವನ ಇಲ್ಲಿ ನನ್ನದೇ ರೂಲ್ಸು, ನನ್ನದೇ ಲೋಕ ಏನು ಬೇಕಾದರೂ ಮಾಡುವೆ ಒಟ್ಟಿನಲ್ಲಿ ನನಗೆ ಮೋಜು ಮಸ್ತಿಯಿಂದ ಸಿಗುವ ಆ ಖುಷಿಬೇಕು. ಇಂದು ಹುಟ್ಟಿರುವೆ ನಾಳೆ ಸತ್ತರೂ ಸಾಯಬಹುದು ಸಾವಿನ ಬರುವಿಕೆಗೆ ಕಾಯುತ್ತಾ ಅದಕ್ಕೆ ತಯಾರಿ ಮಾಡಿಕೊಳ್ಳುವ ಜಾಯಮಾನವೇ ನನ್ನದಲ್ಲ. ಧೈರ್ಯದ ಜೀವನ ನನ್ನದು. ಇದು ನನ್ನ ಜೀವನ ನಾನು ಬದುಕುತ್ತಿರುವೆ ಇದರ ಸರ್ವಾಧಿಕಾರಿ ನಾನು ನಾ ಹೇಳಿದಂತೆ ಅಂದುಕೊಂಡಂತೇ ನೆಡೆಯಬೇಕು ನೆಡೆಯುತ್ತದೆ ಕೂಡ.

ಇದು ನನ್ನ ಜೀವನ ನಾನೇ ಕಟ್ಟಿಕೊಂಡಿದ್ದು ಯಾರ ಸಹಾಯವೂ ಇಲ್ಲದೇ ನನ್ನೊಬನ ಶಕ್ತಿಯಲ್ಲಿಯೇ  ನಾನು ಕಟ್ಟಿಕೊಂಡ ಜೀವನ. ಈ ಜೀವನದಲ್ಲಿ ಬೇರೆಯವರ ಉಪದೇಶ ಕೇಳುವಷ್ಟು ಬುದ್ದಿಗೇಡಿ ನಾನಲ್ಲ. ನಾ ಹೇಗಾದರೂ ಇರುವೆ, ಏನಾದರೂ ಮಾಡುವೆ, ಏನನ್ನಾದರೂ ತಿನ್ನುವೆ, ಹೇಗಾದರೂ ಬದುಕುವೆ ಅದನ್ನ ಕೇಳಲು ಈ ಸಮಾಜ ಯಾರು? ನನಗೆಲ್ಲಾ ತಿಳಿದಿದೆ ಈ ಸಮಾಜಕ್ಕೆ ಬೇಕಾಗಿರೋದು ನನ್ನ ಬಳಿ ದುಡ್ಡು ಇದೆಯೋ ಇಲ್ಲವೋ ಎನ್ನುವುದು ಮಾತ್ರ. ಆ ದುಡ್ಡೊಂದಿದ್ದರೆ ನಾನು ಈ ಸಮಾಜವನ್ನೂ ನನ್ನ ಕಾಲಕೆಳಗೆ ಹಾಕಿಕೊಂಡು ಬಿಡುವೆ. ದುಡ್ಡು ಸಂಪಾದನೆಗೆ ದಾರಿ ಯಾವುದಾದರೇನು ದುಡ್ಡು ಬೇಕು ಅಷ್ಟೇ. ಈ ಸಮಾಜ ದುಡ್ಡನ್ನ ಬಿಟ್ಟು ಮನುಷ್ಯನನ್ನ ಬೇರೆಯಾವುದರಿಂದನೂ ಅಳೆಯುವುದಿಲ್ಲ. ಇಂಥ ದಡ್ಡ ಸಮಾಜಕ್ಕೆ ನಾನೇಕೆ ಹೆದರಬೇಕು. ಇಂಥ ತಿಳಿಗೇಡಿ ಸಮಾಜ ನನ್ನ ಜೀವನದ ಬಗ್ಗೆ ಮಾತೂ ಕೂಡ ಆಡುವ ಯೋಗ್ಯತೆಯಿಲ್ಲ.


ನಾನು ಏನು ಅಂದು ನನಗೆ ಗೊತ್ತು, ನನಗೆ ಏನು ಬೇಕು ಎಂದು ನನಗೆ ಗೊತ್ತು ಯಾಕೆಂದರೆ ಇದು ನನ್ನ ಜೀವನ. ಮೋಜು, ಮಸ್ತಿ,ಖುಷಿ,ಸಂತೋಷ ನಶೆ ಸ್ವಾತಂತ್ರ್ಯಗಳಿಲ್ಲದ ಜೀವನವೂ ಒಂದು ಜೀವನವೇ? ಥೂ ಅಂಥ ಜೀವನವನ್ನ ಬಾಳುವುದಕ್ಕಿಂತ ಶವವಾಗೋದೇ ಒಳ್ಳೇದು. ಸಾಯುವ ಮೋದಲು ಅಬ್ಬಾ ನಾನು ಎಲ್ಲರ ರೀತಿ ಇರಲಿಲ್ಲ, ರಾಯಲ್ಲಾಗಿ  ಮನಸೋಯಿಚ್ಚೆ ಈ ಜೀವನದ ಸಾರವನ್ನ ಹೀರಿರುವೆ ಎಂದೆನಿಸಿದರೆ ಸಾಕು ಆ ಜೀವನವೇ ಸಾರ್ಥಕ. ಇದು ನನ್ನ ಜೀವನ ನಾನೇ ಇದಕ್ಕೆ ಸರ್ವಾಧಿಕಾರಿ. ಇದೇ ನನ್ನ ಜೀವನ

Comments

Popular posts from this blog

ನನ್ನ ಕಲ್ಪನೆ

ಜೀವನ ಜಾತ್ರೆ