ಜೀವನ ಜಾತ್ರೆ


ನೆಡೆಯುವಾಸೆಕಣೆ ಹುಡುಗಿ
ನಿನ್ನ ಕಿರುಬೆರಳ ಕೊಂಡಿಯನೊಡಗೂಡಿ
ಈ ಜಂಗುಳಿಯ ನಡುವೆ
ಅಪರಿಚಿತರು ಇವರೆಲ್ಲ
ಚಿರಪರಿಚಿತಳು ನೀನು
ಕುರುಡು ಕಾಂಚಣದ ವ್ಯಾಪಾರಿಗಳ ನಡುವೆ
ಕುರುಡು ಪ್ರೀತಿಯ ವ್ಯಾಪಾರಿ ನೀನು
ಇಬ್ಬರೊಡಗೂಡಿ ಕಳೆದು ಹೋಗುವ
ಈ ಜಾತ್ರೆಯೊಳು
ಬೆರೆತು ಕರಗುವ ಈ ಸಂತೆಯೊಳು.
ರಾಜವೀದಿಯೊಳು ಪ್ರೀತಿಯಾತೇರು 
ಎಳೆದುಸಾಗುವ ನಾವು ಹಗ್ಗ ಒಂದನು ಹಿಡಿದು
ಪ್ರೀತಿ ಮರಳಿ ಗರ್ಭಗುಡಿ ಸೇರಲು
ಮುಂದೆ ಸಾಗುವ ನಾವು ಕರ್ಮ ಬುತ್ತಿಯಹೊತ್ತು
ನಿನ್ನ ದಾರಿಗೆ ನೀನು ನನ್ನ ದಾರಿಗೆ ನಾನು Comments

 1. ಮಾರ್ಮಿಕ ಭಾವ ಸಂಗಮ ಕೆಲವೇ ಸಾಲುಗಳಲ್ಲಿ...ಪೃಥ್ವಿ...ಕಡೆಯ ಸಾಲುಗಳು...ಮೊಳೆಹೊಡೆದಂತೆ ಕವನಕ್ಕೆ ಒಂದು ನೆಲೆಗಟ್ಟು ಒದಗಿಸಿವೆ.....ಮುಂದೆ ಸಾಗುವ ನಾವು ಕರ್ಮ ಬುತ್ತಿಯಹೊತ್ತು
  ನಿನ್ನ ದಾರಿಗೆ ನೀನು ನನ್ನ ದಾರಿಗೆ ನಾನು

  ReplyDelete
  Replies
  1. Azad sir nimma maathugalu mathastu hummassanna manage tandide namma blogige bandidakke dhanyavadagalu

   Delete

Post a Comment

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ