ಚಂದಿರನ ಚೆಲುವನ್ನು
ದರ್ಪಣದಿ ಹಿಡಿದಿಟ್ಟು
ನಿನ್ನ ಮೊಗ ನೋಡುವೆನು
ಸುಕುಮಾರಿ,

ಸ್ಪರ್ಶದಲೆ ತಂಪಿರಿಸಿ
ನೋಟದಲೆ ಮನಕುಣಿಸಿ
ಕಾಡುತಿಹೆ ನೀ ಎನ್ನ
ರಾಜ್ ಕುಮಾರಿ,

ಮುದ್ದಿಸೆನ್ನನು ಮನಬಂದಂತೆ,
ನಿಂದಿಸೆನ್ನನು ಮಗುವಿನಂತೆ,
ಕಡು ಪೋಲಿ ಹುಡುಗನ
ಪೋರಿಯಾಗಿಹೆ ನೀನು
ಬಂದಿಸೆನ್ನನು ನಿನ್ನ ಮೋಹ
ಪಾಶದೊಳು,

ನೀನೊಂದೆ ಜಗವೆನಗೆ
ಅರಿಯೆನು ಬೇರೆ,
ಬೆಳಕಾಗು ಎನ್ನ ಗುರಿಪಥದ ಮೇಲೆ,

ಕಾಮಿನಿಯು ನೀ ಎನ್ನ
ಜೀವನದಿ ಸುಳಿದೆ,
ಮಾಯೆ ನೀ ಎನ್ನಯ
ಮನವನು ಕಸಿದೆ,

ನಿನ್ನ  ಈ ಬಂದನವೇ
ಜೇವನವು ಎನಗೆ,
ನನ್ನ ನೀ ಬಿಟ್ಟ ಮರುಕ್ಷಣವೇ
ಮರಣವು ಎನಗೆ ಗೆಳತಿ
ಮರಣವು ಎನಗೆ

Comments

 1. ವಾವ್,.....ಸುಂದರ ಸಾಲುಗಳು ಕಣೋ ಪ್ರಥ್ವಿ....
  ಒಳ್ಳೊಳ್ಳೆಯ ಉಪಮೆಗಳು...
  ಬರುತ್ತಿರಲಿ ಕವನಗಳು...
  ಹಾಂ ಸುಮಾರು ಬೆರಳಚ್ಚು ದೋಷಗಳಿವೆ...ಅವುಗಳ ಬಗ್ಗೆ ತುಸು ಗಮನವಿರಲಿ..
  ಬರಿತಾ ಇರು..
  ಚೆನಾಗಿದೆ... :)

  ReplyDelete
 2. ಧನ್ಯವಾದಗಳು ಭಟ್ರೆ

  ReplyDelete
 3. ಪ್ರೇಯಸಿಯ ಬಗ್ಗೆ ಅಭಿವೆಕ್ತಪಡಿಸಿರುವ ಭಾವನೆ ಮನದ ಎಲ್ಲೋ ಮೂಲೆಯಲ್ಲಿ ಕುಳಿತಿರುವ ಪ್ರೀತಿಯ ನೆನಪುಗಳನ್ನು ನೆನಪು ಹಾಕುವಂತೆ ಮಾಡಿದೆ....

  ReplyDelete
 4. Mahesh sir blog odidakkagi dhanyavadagalu.
  Howdu illi illi aa nenapugala hokki tegeyuva kelsa maadiddene jothe jotheyalli vedanthada onderadu thathvagalannu alavadisiddene

  ReplyDelete

Post a Comment

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ