ಮುರಿದ ಮನೆ

ಕಟ್ಟ ಕಡೆಯ ಊರಿನಲ್ಲಿ
ಮುರಿದುಬಿದ್ದ ಮನೆಯೊ
ಮೂಡುತಿರುವ ಆಸೆಗೊಂದು
ಹಾವು ಚೇಳು ತಡೆಯೊ

ಬೋರ್ಗರೆಯಿತು ಮಳೆಯು ಮಿಂಚಿ
ಮಾಡ ಜಂತಿ ಭಾರ ತುಂಬಿ
ಕಂಬವೊಂದು ಬಲವು ಕುಂದಿ
ಇದ್ದ ಮಾಡು ಬಿತ್ತು ಕಳಚಿ

ಪಾಯ ಅದುವೆ ಗಟ್ಟಿ ಗಟ್ಟಿ
ಗೋಡೆಯದುವೆ ಇನ್ನು ಜಟ್ಟಿ
ಬಿದ್ದ ಮಾಡ ಮತ್ತೆ ಕಟ್ಟಿ
ತೋರು ನಿನ್ನ ಬಲದ ಶಕ್ತಿ

ಗೃಹದ ಕಪ್ಪು ಕಳಚಲಿಂದು
ಆಸರೆಯ ಆಲಾಪನೆ ಮೊಳಗಲಿಂದು
ಕೂಗ ಕೇಳಿ ಓಡಿ ಬರಲಿ ಇಂದು
ನೂರು ಪ್ರಾಣಿ ಪಕ್ಷಿ ದಂಡು

ಮನೆಯ ಗುಡಿಯ ಬಲವು ಒಂದೆ
ಉರಿಯುತಿರುವ ದೀಪ ಬೆಳಕೆ
ಕರಿಯು ಕಳೆದು ಬೆಳಗು ಬೆಳಗಿ
ಉದ್ಬವಿಸುವ ಚೇತನವೆ
ಸಲಹು ಎನ್ನನು ಎನ್ನ ಮನವನು
ಎನ್ನ ಮನವನು


Comments

Popular posts from this blog

ನನ್ನ ಕಲ್ಪನೆ

ಜೀವನ ಜಾತ್ರೆ