ಜೀವನದ ಸಿಂಹಾವಲೋಕನ



ಅಹಾ! ಅದೆಂತಹ ಬೆಚ್ಚಗಿನ ಆ ಆಸರೆ. ಮತ್ತೆ ಮತ್ತೆ ಮುದುರಿ ಮಲಗುವ ಆ ಸುಖ ನಿದ್ರೆ. ಆಗಾಗ ಸಿಗುವ ಆ ತಾಯಿಯ ಮುತ್ತುಗಳು. ಆಹಾ ಆ ಬೆಚ್ಚಗಿನ ಆಸರೆಯ ಸುಖದ ನೆನಪು ಮಾತ್ರ ಮೆಲುಕು ಹಾಕಲು ಉಳಿದಿದೆ. ನಾವುಗಳು ಆಡುತ್ತಿದ್ದ ಭಯಾನಕ ಆಟಗಳ ನೆನಪುಗಳೆಷ್ಟೋ. ಆಡುವಾಗು ಬಿದ್ದಾಗ ಒಳಗಿನ ಬಿಳಿ ಕಾಣುವಂತೆ ಆಗುತ್ತಿದ್ದ ಅ ಗಾಯದ ಸವಿ ನೋವಿನ ನೆನಪುಗಳು. ಗೆಳಯರೊಂದಿಗೆ ಕಿತ್ತಾಡಿ “ನೀನು ನಮ್ಮನೆಗೆ ಬರಬೇಡ ನನ್ನ ಜೊತೆ ಜಗಳ ಆಡಿದ್ಯ” ಅಂತ ಜಗಳವಾಡಿದ ಆ ನೆನಪುಗಳೆಷ್ಡೋ. ರಬ್ಬರು, ಎರೆಡು ಕಡೆಯು ಬರೆಯುವ ಪೆನ್ಸಿಲ್, ಮೆಂಡರ್ರು, ಅರ್ದ ಮುರಿದ ಸ್ಕೇಲು, ಕಾಗೆ ಕಾಲು ಗುಬ್ಬಿ ಕಾಲಿನಂತಹ ಅಕ್ಷರಗಳು ಅಬ್ಬಾ ನೆನಪಿಸಿಕೊಳ್ಳುತ್ತಾ ಹೊದಂತೆ ಕಣ್ಣು ಒದ್ದೆಯಾಗುತ್ತಾ ಹೋಗುತ್ತದಲ್ವ ಗೆಳೆಯರೆ.
ನಮ್ಮ ಮೊದಲನೇ ಮೂರು ಚಕ್ರದ ಸೈಕಲ್ ಅದೆಷ್ಟು ಖುಷಿ ಆ ಒಂದು ರೈಡಿನಲ್ಲಿ. ರಾಜ ರಾಣಿ ಕಳ್ಳ ಪೋಲೀಸ್ ನೆನಪಿರಬೇಕಲ್ವ ಆ ರಾಜ ಬಂದಾಗ ಅರಳಿಕೊಳ್ಳುತ್ತಿದ್ದ ಆ ನಮ್ಮ ಮುಖಗಳು. ಅಪ್ಪ ಬರುವುದನ್ನೇ ಕಾದು ಕಾದು ಅವರು ಬಂದಾಗ ಸಿಕ್ಕುವ ಆ ಚಾಕೋಲೇಟ್, ಕಾದು ಕಾದು ಸಿಗುವ ಈ ಡಿಗ್ರಿಗಿಂತ ಹೆಚ್ಚು ಸಂತೋಷಕೊಡುತ್ತಿತ್ತೇನೋ ಅಲ್ವ ಗೆಳೆಯರೆ. ಸ್ಕೂಲಿನಲ್ಲಿ ಗೆಳೆಯನಿಗೆ ಹೊಡೆದಾಗ ಟೀಚರ್ ಕೊಟ್ಟ ಅ ಏಟು ಅದೆಷ್ಟು ನೋಯುತ್ತಿತ್ತೋ ಅಲ್ವ ಗೆಳೆಯರೆ. ಮಳೆಗಾಲದಲ್ಲಿ ಮಾವಿನಕಾಯಿಗೆ ಖರಾ ಪುಡಿ ಹಾಕಿತಿನ್ನುತ್ತಿದ್ದ ಆ ಸಂತೋಷ ಖಂಡಿತವಾಗಿಯು ಕೆ ಎಫ್ ಸಿ ಕ್ರಷರ್ ಕೊಡೋದು ಸಾಧ್ಯವೇ ಇಲ್ಲ ಅಲ್ವ ಗೆಳೆಯರೆ.

ತಂದೆಯವಮುಂದೆ ಮಾರ್ಕ್ಸಕಾರ್ಡ ಹಿಡಿದು ನೆಲ ನೋಡುತ್ತಾ ನಿಂತ ಆ ಗಳಿಗೆ ನೆನಸಿಕೊಳ್ಳಲು ಅದೆಷ್ಟು ಚೆಂದ. ಮೊದಲನೇ ಬಾರಿ ಬಹುಮಾನ ತಂದು ಅಕ್ಕ ಪಕ್ಕದವರಿಗೆ ತೋರಿಸಿ ಬಂದು ಬಳಗದವರಿಗೆ ಪ್ರದರ್ಶಿಸಿ ಪಟ್ಟ ಖುಷಿಗೆ ಸಾಠಿಯುಂಟೆ ಗೆಳೆಯರೆ? ಶಾಲಾ ವಾರ್ಷಿಕೋತ್ಸವದಂದು ನಾವುಗಳು ಮಾಡಿದ ದ್ಯಾನ್ಸುಗಳು “ಹೇ ನಿಂದೇ ಕಣೋ ಡೈಲಾಗ್” ಅಂತ ಮರೆತವನಿಗೆ ನೆನಪಿಸುತ್ತಾ ಮಾಡಿದ ನಾಟಕಗಳು, ಚೈನ್ ಕಟ್ ಆಟಗಳು, ಮಾಡದ ತಪ್ಪಿಗೆ ಟೀಚರ್ ಬೈದಾಗ ಬಂದ ಕಣ್ಣೀರುಗಳು, ತಿಂದು ಗುಳ್ಳೆ ಮಾಡುತ್ತಿದ್ದಾ ಚುಯಿಂಗ್ ಗಮ್ಗಳು, ಎರೆಡು ಚಕ್ರದ ಸೈಕಲ್ ಕಲಿತ ಆ ಶುಭ ಗಳಿಗೆಗಳು, ಪಾಲ್ಗೋಳ್ಳುತ್ತಿದ್ದ ರಾಷ್ಟ್ರೀಯ ಹಬ್ಬಗಳು ಅಲ್ಲಿ ಕೊಡುತ್ತಿದ್ದ ಬೂಂದಿ ಲಾಡು ಚಾಕೋಲೆಟ್ಗಳು ಅಬ್ಬ ಅಬ್ಬ ಅದೆಷ್ಟು ರಂಗಿತ್ತು ನಮ್ಮ ಆ ಚಿಕ್ಕ ವಯಸ್ಸಿನಲ್ಲಿ ಅದೆಂತಹ ಉತ್ಸಾಹವಿತ್ತು ಆದಿನಗಳಲ್ಲಿ.

ಯಾರಾದರು ದೊಡ್ಡಹುಡುಗರು ಹೊಡೆದರೆ “ಇರಲಿ ಬಿಡೋ ನಾನು ದೊಡ್ಡೋನಾಗಲಿ ಅವಾಗ ಅವ್ನ ನೋಡ್ಕೋಳ್ತಿನಿ” ಎನ್ನುತ್ತಿದ್ದ ಆ ಮಾತುಗಳು, ಬಸ್ ಡ್ರೈವರನ್ನ ನೋಡಿ, ಪೋಲೀಸರನ್ನ ನೋಡಿ, ನಮ್ಮ ಶಿಕ್ಷಕಿಯರನ್ನ ನೋಡಿ ನಾವೂ ಅವರಂತೇ ಆಗಬೇಕು ಎಂದು ಕಟ್ಟಿಕೊಳ್ಳುತ್ತಿದ್ದ ಆ ಕನಸಿನ ಸವಿ ನೆನಪುಗಳು. ಚಲನಚಿತ್ರ ನಟ ನಟಿಯರಂತೆ ಮಾಡುತ್ತಿದ್ದ ಸ್ಟೈಲ್ಗಳು, ಹೀಗೇ ಯೋಚಿಸುತ್ತಾ ಹೋದಂತೆ ಬರುವ ನಾ ಸವಿ ನೆನಪುಗಳು ನಮಗೆ ನಮ್ಮ ಇಂದಿನವರೆಗಿನ ಜೀವನವನ್ನ ಪೂರ್ತಿಯಾಗಿ ಬದುಕಿದ ಸಮಾಧಾನವನ್ನ ಕೊಡುತ್ತದೆ ಅಲ್ವ ಗೆಳೆಯರೆ.

ಇನ್ನು ನಮಗೆ ತುಂಬಾ ಇಷ್ಟವಾದ ಟೀಚರ್ ಅನ್ನು ಅಷ್ಟೇ ಪ್ರೀತಿಸುತ್ತೇವೆ ಅಷ್ಟೇ ಗೌರವಿಸುತ್ತೇವೆ ಅಲ್ವ ಗೆಳೆಯರೆ. ನಿಜವಾಗಲು ನಮ್ಮ  ವ್ಯಕ್ತಿತ್ವ, ನಮ್ಮ ಬೆಳೆದ ವಾತಾವರಣ, ವಿದ್ಯೆ ಕಲಿಸಿದ ಶಾಲೆ ಹಾಗು ಆ ನಮ್ಮ ಅಚ್ಚುಮೆಚ್ಚಿನ ಶಿಕ್ಷಕರ ಪ್ರತೀಕವಲ್ಲವೇ ಗೆಳೆಯರೆ? ಆವರೆಲ್ಲರಿಗೂ ಒಂದು ಸಲಾಮ್.

ನಿಜವಾಗಲು ನಾವು ಇವನ್ನೆಲ್ಲಾ ಕಳೆದುಕೊಂಡೆವಾ? ಅಥವಾ ಇವೆಲ್ಲದರ ನೆನಪುಗಳನ್ನ ಮೆಲುಕು ಹಾಕಲು ಶೇಕರಿಸುತ್ತಾ ಹೋದೆವಾ. ದೊಡ್ಡವರಾದೆವೆಂಬ ಒಂದು ಅಹಂಭಾವವಷ್ಟೇ ಚಿಕ್ಕವರಾಗಬೇಕೆಂಬ ಭಯಕೆ ನಮ್ಮಲ್ಲಿ ಪ್ರತಿಕ್ಷಣವೂ ಹುಟ್ಟಿ ಪ್ರತಿ ಕ್ಷಣವೂ ಸಾಯುತ್ತಿದೆ ಅಲ್ವ. “ಕಾಲಾಯ ತಸ್ಮೈ ನಮಃ” ಎಂಬಂತೆ ನಮ್ಮ ಜೀವನವು ಸಾಗುತ್ತಿದೆ ಗೆಳಯರೆ ಆ ಕಾಲವನ್ನ ನಾವುಗಳು ನೋಡುತ್ತಾ ಕುಳಿತಿರದೆ ಅದನ್ನು ಬಳಸಿಕೊಳ್ಳುವಲ್ಲಿ ಸಫಲರಾಗಬೇಕಲ್ವ. ನಮ್ಮ ಜೀವನದ ಹಿನ್ನೋಟ ನಮ್ಮ ಇಂದಿನವರೆಗಿನ ಜೀವನವನ್ನ ಪೋರ್ತಿಯಾಗಿ ಬದುಕಿದ ಆನಂದವನ್ನ ಕೊಡುತ್ತಿದೆ. ಮುಂದಿನ ನಮ್ಮ ಆ ಸುಂದರ ಬದುಕನ್ನ ಸುಂದರವಾಗಿ ಬದುಕೋಣ. ಅಂದು ನಾವು ಜೀವಶ್ಚವವಾಗಿದ್ದೇವೆಂದು ಮುಂದೊಂದು ದಿನ ಕೊರಗದೆ ನಮ್ಮ ಜೀವನವನ್ನ ಮಾದರಿಯಾಗಿಸಿ ಬದುಕೋಣ ಅಲ್ವ ಗೆಳೆಯರೆ.

 ಹೀಗೆ ಎಂಜಿನಿಯರಿಂಗ್ ಮುಗಿಯುವ ಈ ಕಾಲದಲ್ಲಿ ನಮ್ಮ ಜೀವನದ ಬಗ್ಗೆ ಸಿಂಹಾವಲೋಕನ ಮಾಡೋಣವೆನಿಸಿತು ಹಾಗಾಗಿ ಈ ಲೇಖನವ ಬರೆದೆ. ಇಲ್ಲಿ ನಿಮ್ಮೆಲ್ಲರ ಜೀವನಕ್ಕೆ ಹತ್ತಿರವಾಗದ ವಿಷಯಗಳೂ ಇರಬಹುದು ಆದರೆ ಏನಿಲ್ಲ ಅನ್ನೋದಕ್ಕಿಂತ ಹತ್ತಿರವಿದಿದ್ದನ್ನ ಒಮ್ಮೆ ಮೆಲುಕು ಹಾಕಿ ನಿಮ್ಮ ಜೀವನದ ಹಿನ್ನೋಟವನ್ನು ಒಮ್ಮೆ ಆಸ್ವಾದಿಸಲು ಇದು ಸೂಕ್ತ ಸಮಯವೆನಿಸುತ್ತದೆ.
ಧನ್ಯವಾದಗಳು.

“ಸಂಜೆಯ ಕಾಲದಿ ನಿಂತಿಹೆವು
ಬೆಳಗಿನ ಬೆಳಕಾ ನೋಡಲೆಂದು
ಮುಗಿವುದಲ್ಲಾ ಇದು ಬರಿ ಶುರುವೋ
ಕಲಿವುದೆಲ್ಲಾ ಇಹುದು ಮುದಿನಾ ಬದುಕೋ
ಕೊಂಚ ವಿಶ್ರಮಿಸು ಪಥದ ಮದ್ಯ ಇಂದು
ಕೊಂಚ ವಿಶ್ರಮಿಸು ಪಥದ ಮದ್ಯ ಇಂದು”.

Comments

Popular posts from this blog

ನನ್ನ ಕಲ್ಪನೆ

ಜೀವನ ಜಾತ್ರೆ