ಎಂದು ಬರುವನೋ ರಾಮಎಂದು ಬರುವನೋ ರಾಮ
ಮಾಯೆಯಾ ಮನೆ ಕಡೆಗೆ
ನನ್ನ ಮನವನು ತಣಿಸಲು
ನನ್ನ ಜನರ ಸಲಹಲು

ಜಗವೆಲ್ಲ ಬೆಂದಿಹುದು
ರಾವಣನ ಧಗೆಗೆ
ಜನರೆಲ್ಲ ಸೋತಿಹರು
ದುಷ್ಟನ ಭಯಕೆ

ತಮದೊಳು ಬೆಳದಿಹನು ಆ ರಕ್ಕಸ
ತಮವು ಆವರಿಸಿಹುದು ಈ ಮನಸ
ವಿಕೃತಿಯು ಕುಣಿದಿಹುದು ಈ ಪ್ರಕೃತಿಯೊಳಗೆ
ಪ್ರಕೃತಿಯು ನೊಂದಿಹುದು ಈ ಮಾಯೆಯೊಳಗೆ

ಆರ್ಭಟಿಸುತಿಹುದು ನನ್ನೊಳಗೆ ಆ ಧೈತ್ಯನಾ ಕೂಗು
ನಡುಗುತಿಹುದು ನನ್ನೆದೆ ಆ ಘೋರ ಘರ್ಜನೆಗೆ
ಅಡಗಿ ಹೋಗಿದೆ ಸಾತ್ವಿಕತೆಯ ಕೂಗು
ವಿಜೃಂಬಿಸಿದೆ ಅವಸಾನದ ಹಾಡು

ಎಂದು ಬರುವನೋ ರಾಮ
ಈ ದುಷ್ಟನಾ ಅಳಿವಿಗೆ ನಾಂದಿಯನು ಹಾಡಲು
ಎಂದು ಕರುಣಿಸುವನೋ ರಾಮ
ನನ್ನ ನಾ ಕಾಣಲು

ಬೇಡುವೆನು ರಾಮನ ರಾವಣನ ಅಂತ್ಯಕೆ
ಮಾಯೆಯ ಈ ಜಗದ ಉಳಿವಿಗೆ
ದಯತೋರು ರಘುರಾಮ ಯೋಗಿಯ ಪಥದೆಡೆಗೆ
ದಯತೋರು ರಘುರಾಮ ಮುಕ್ತಿಯಾ ಬ್ರಹ್ಮನೆಡೆಗೆ

Comments

 1. Thumba chennagide, Eegina Ravana namma prasktha Rajakarinigalu, Barabahudu Sri Ramanu avarannu sadebadeyalu. Yada yadahi Dharmasya.....

  ReplyDelete
  Replies
  1. dhanyavadagalu sir odidakke.
   naanu ade abhilaasheyalliruve :)

   Delete

Post a Comment

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ