ತೇರಿನಾ ಜಾತ್ರೆ

ಕನಸುಗಳ ಸಂತೆಯಲಿ
ಕಳೆದುಹೋಗುವ ಕನಸಾಗದಿರು ನೀನು
ನನ್ನ ಒಲವಿನೂರಿನ   ಜಾತ್ರೆಯಲಿ
ಪ್ರೀತಿ ಹೊತ್ತು ಸಾಗುವ ತೇರಾಗು

ಪಯಣದ ಹಾದಿಗೆ ಕೊನೆಯೊಂದೇ ಮರಣವು
ಎಳೆದು ಸಾಗುವವು ಕಾಲದ ಸೆಳೆತವು
ಹೊತ್ತು ಸಾಗುವೆ ನಿನ್ನ ರಾಜವೀದಿಯಲಿ ನಾನು
ಧಿಕ್ಸೂಚಿಯಾಗಿಹುದು ಕಲ್ಲು ಮುಳ್ಳಿನ ಪಾಠವು

ಗುಡಿಯೊಳಗೆ ಬೆಳಗಿಹುದು ಪ್ರೇಮದ ಬೆರಗು
ಉತ್ಸವವ ಹೊರಟಿಹುದು ಪ್ರೀತಿಯ ಬೆಳಗು
ಬೆಳಗಿನ ಬೆಳಕಿನೊಳು ಜಗವೆಲ್ಲ ಹೊಳಪು
ಓಡಿಹುದು ಕಪ್ಪು, ಊರಿನಾ ಹೊರಗೂ

ನೀಗೂಡಿದರೆ ಸಂಭ್ರಮದ  ಜಾತ್ರೆಯೋ
ಇಲ್ಲವದುವೆ ಮಸಣದ ಮೆರವಣಿಗೆಯೊ
ನಿನ್ನ ಪ್ರೀತಿಯ ಸುಧೆಗೆ ಕಾದಿರುವ ಹಂಸಪಕ್ಷಿಯೋ ನಾನು
ತುಂಬು ಪ್ರೀತಿಯ  ಕೊಡುವ ತಾಯಾಗು ನೀನು
ಸಂಜೀವಿನಿಯ ಈಯುವ ತಾಯಾಗು ನೀನು

Comments

 1. vah vah...
  chenagide kano :)...
  ಪ್ರೀತಿಯ ಸುಧೆಗೆ ಕಾದಿರುವ ಹಂಸಪಕ್ಷಿಯೋ
  ಪ್ರೇಮದ ಬೆರಗು
  ಕನಸುಗಳ ಸಂತೆಯಲಿ
  ಕಳೆದುಹೋಗುವ ಕನಸಾಗದಿರು

  istavada salugalu :)...olleya bhava lahari....munduvareyali kavya jatre :) :)..khhushi aytu...

  ReplyDelete
 2. Abba bhatre nimma maathugalanna keli thumba kushi aithu.
  Idakkella moola karana,karthru neeve. Nimma marga darshana innu hecchagi sigalendu nimmalli kelikollutheve dhanyavaadagalu

  ReplyDelete

Post a Comment

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್