ಚಂದಿರನ ಅನ್ವೇಷಣೆ


ನಿಲ್ಲು ನೀರೆ ಆಡದೆ
ಕಾಣಲಿ ಚಂದದ ಚಂದಿರ,
ಬೀಸುವ ತಂಗಾಳಿಯ ಸ್ಪರ್ಶಕೆ
ಕಲಕದಿರು ಬಿಂಬವ.

ಮೂಡಿದ ಭಾವನೆಯೊಂದು ಮನದಿ,
ಕೆದಕ ಹೊರಟಿದೆ ಮನಸ ಮಗನ ನಿನ್ನ ಮೊಗದಲಿ,
ಬೇಡುವೆನು ನಿನ್ನ, ನಿಂತು ಸಹಕರಿಸು
ಮತ್ತೆ ಆಡದೆ ಆ ತಂಗಾಳಿಯ ಸುಖಸ್ಪರ್ಶಕೆ

ನೋಡುವ ಹಂಬಲ ಚೆಂದಿರನ ಚೆಲುವ
ಕಣ್ತುಂಬಿಕೊಳ್ಳುವ ಹಂಬಲ ಆ ಕಾಂತಿಯ,
ಅನುಭವಿಸುವ ಹಂಬಲ ಆ ಹಾಲ ಬೆಳಕ
ಸ್ಪರ್ಶಿಸುವ ಹಂಬಲ ಆ ತಿಳಿಗಾಳಿಯ.

ನಿನ್ನ ಮೊಗವದೋ ನನಗೆ ದರ್ಪಣದಂತಿರಲಿ
ನಿನ್ನ ಆವರಿಸಿದೆ ಬೆಳದಿಂಗಳ ಬೆಳಕು,
ಕಂಡ ಚೆಂದಿರನ ಬಿಂಬಿಸೆನ್ನನು ನನಗೆ,
ತಂಗಾಳಿಗು ಓಲದೆ,ಬಿರುಗಾಳಿಗು ಜಗ್ಗದೆ.

ಸುತ್ತ ಕವಿದಿದೆ ಕಡುಗತ್ತಲು
ಜೊತೆಗೆ ಬೆರೆತಿದೆ ಆ ತಿಳಿಬೆಳಕು,
ಸಹಕರಿಸು ನಿನ್ನ ಚಂಚಲತೆಯ ಬಿಟ್ಟು
ದಾರಿ ದೀಪವು ನಿನ್ನ ಮೊಗವದೋ ನನಗೆ.


ನಿಲ್ಲು ನೀರೆ ಆಡದೆ
ಕಾಣಲಿ ಚಂದದ ಚೆಂದಿರ,
ಬೀಸುವ ತಂಗಾಳಿಯ ಸ್ಪರ್ಶಕೆ
ಕಲಕದಿರು ಬಿಂಬವ.


(ಮನಸ ಮಗ:- ನಮ್ಮ ಪುರಾಣಗಳ ಪ್ರಕಾರ ಚಂದಿರನನ್ನು ಶ್ರೀ ಮಹಾವಿಷ್ಣುವಿನ ಮುಖದಿಂದ ಹುಟ್ಟಿದವನೆಂದು ಹೇಳುತ್ತವೆ
ಅದನ್ನು ಇಲ್ಲಿ ಉತ್ಪ್ರೇಕ್ಷೆಯಾಗಿ ಬಳಸಿದ್ದೇನೆ)

Comments

 1. ಕವನ ಚೆನ್ನಾಗಿದೆ...
  ಭಾವದ ಓಘ ಇಷ್ಟವಾಯ್ತು...
  ಹಮ್..ಇದರಲ್ಲಿ ನನಗಿಷ್ಟವಾಗಿದ್ದು ಎರಡೇ ವಸ್ತುಗಳನ್ನುಟ್ಟುಂಡು ಸಾಗುವಂಥಹ ನಿರೂಪಣಾ ಶೈಲಿ..
  "ಸುತ್ತ ಕವಿದಿದೆ ಕಡುಗತ್ತಲು
  ಜೊತೆಗೆ ಬೆರೆತಿದೆ ಆ ತಿಳಿಬೆಳಕು,
  ಸಹಕರಿಸು ನಿನ್ನ ಚಂಚಲತೆಯ ಬಿಟ್ಟು
  ದಾರಿ ದೀಪವು ನಿನ್ನ ಮೊಗವದೋ ನನಗೆ"
  ಈ ಸಾಲು ಬಹಳ ಇಷ್ಟವಾಯ್ತು...
  ಬರೆಯುತ್ತಿರಿ...
  ನಮಸ್ತೆ :)

  ReplyDelete
 2. Vaibhav and chinmay bhat thank you,
  Heege baruthhiri

  ReplyDelete

Post a Comment

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ