ಜೀವನವ ಜೀವಿಸಿ ನೋಡಿ


              ಜೀವನ ಈ ಪದದ ಅರ್ಥವನ್ನ ಹುಡುಕುತ್ತಲೇ ಪ್ರತಿಯೊಬ್ಬರೂ ಜೀವಿಸುತ್ತಾರೆ.ಹಾಗಾದರೆ ಜೀವನದ ಅರ್ಥವನ್ನ ಕಂಡುಕೊಂಡವರೆಷ್ಟು ಮಂದಿ? ಜೀವನದ ಪ್ರತಿ ಹೆಜ್ಜೆಯಲೂ ಹೋರಾಟ. ಅಜ್ಞಾನವೆಂಬ ಕತ್ತಲೊಂದಿಗೆ ಹೋರಾಟ.
ಬೆಳಕಿನೆಡೆಗೆ ಹೋಗುವ ಧಾವಂತ.ಬೆಳಕ ಕಂಡವರ ಜೀವನದಿಂದ ನಾವು ಕಲಿಯಬೇಕಾದ ಪಾಠವೆಂದರೆ “ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗುವ ಪಯಣವೇ ಜೀವನ”.
              ಪ್ರತಿಯೊಬ್ಬ ಮನುಷ್ಯನ ಜೀವನವು ಒಂದು ಹೋರಾಟ.ಪ್ರತಿಯೊಬ್ಬನೂ ಸೈನಿಕನೇ. ಪ್ರತಿಯೊಬ್ಬರೂ ತನ್ನೊಳಗಿರುವ ರಾಗದ್ವೇಷಗಳೊಂದಿಗೆ ಹೋರಾಟವನ್ನ ಪ್ರತಿದಿನ ಪ್ರತಿಕ್ಷಣವೂ ನೆಡೆಸುತ್ತಿರುತ್ತಾನೆ. ಒಮ್ಮೆ ಯೋಚಿಸಿ ಗೆಳೆಯರೆ ನಿಮ್ಮ ಜೀವನದಲ್ಲಿ ನೀವು ನೆಡೆಸಿರುವ ಹೋರಾಟವನ್ನ.ಚಿಕ್ಕ ಮಗುವಾಗಿದ್ದಾಗ ಚಿಕ್ಕದೊಂದು ಚಾಕೊಲೇಟ್ ಗಾಗಿ ನೀವು ನೆಡೆಸಿದ ಹೋರಾಟ,ಅದನ್ನ ಪಡೆದಾಗ ಆದ ಸಂತೋಷ. ಬೆಳೆಯುತ್ತಾಬಂದ ಹಾಗೆ ನಿಮ್ಮ ವಾತವರಣದೊಂದಿಗೆ ನೆಡೆಸಿದ ಹೋರಾಟ,ನಂತರ ನಿಮ್ಮೊಳಗೇ ಏಳುವ ಭಾವನೆಗಳ ಏರಿಳಿತದೊಂದಿಗೆ ನೆಡೆಸಿದ ಹೋರಾಟ,ವೃತ್ತಿ ಬದುಕಿನಲ್ಲಿ ಏಳ್ಗೆಗಾಗಿ ನೆದೆಸುವ ಹೋರಾಟ,ಕೀರ್ತಿ,ಯಶಸ್ಸು,ಹಣ,ಶಾಂತಿಗಾಗಿ ನೆಡೆಸುವ ಹೋರಾಟ,ಕೊನೆಗೆ ಕೆಲವರು ಸಾವಿಗಾಗಿ ನೆಡೆಸುವ ಹೋರಾಟ ಅಬ್ಬಾ!! ಅದೆಷ್ಟು ಹೋರಾಟ ಗೆಳೆಯರೆ. ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಿದ್ದೀರಿ ಹಾಗೆ ಮುಂದೆಯೂ ಎದುರಿಸುತ್ತೀರಿ ಅದೆಂತಹ ಶಕ್ತಿ ನಿಮ್ಮಲ್ಲಿ.ಪ್ರತಿಯೊಂದು ಹೋರಾಟದಲ್ಲಿಯೂ ಗೆಲ್ಲುವ ಹುಮ್ಮಸ್ಸಲ್ಲೇ ಹೋರಾಡಿದ್ದೀರಿ ಸೋತಾಗ ಪಾಠ ಕಲಿತಿದ್ದೇವೆ ಅಲ್ಲವೆ?
              ಜಗತ್ತಿನ ಪ್ರಸಿದ್ದ ವ್ಯಕ್ತಿ “Nick Vujicic” ಈತನಿಗೆ ಕೈಯಿಲ್ಲ ಕಾಲೂ ಸಹ ಇಲ್ಲ ಆದರೆ ಆತ ಜಗತ್ತಿನ ಪ್ರಸಿದ್ದ “personality development trainer”. ಆತನ ಈ ಸಾಧನೆಗೆ,ಆತ ತನ್ನ ಜೀವನದೊಂದಿಗೆ ಹೋರಾಡಲು ಆತನಿಗಿದ್ದ ಶಕ್ತಿಯಾದರೂ ಯಾವುದ? ಈತನೊಬ್ಬನೇ ಅಲ್ಲ ಜಗತ್ತಿನಲ್ಲಿ ಅದೆಷ್ಟೋ ಕುರುಡರು ಜಗತ್ತಿಗೇ ಕಣ್ಣಾದ ಹತ್ತು ಹಲವು ಜ್ವಲಂತ ಉದಾಹರಣೆಗಳು  ನಮ್ಮ ಮುಂದಿದೆ. ಹಾಗಾದರೆ ಆವರೆಲ್ಲರಿಗೂ ಶಕ್ತಿ ನೀಡಿದ್ದು ಯಾವುದು? ಈ ಪ್ರಶ್ನೆ ನಮ್ಮೆಲ್ಲರಲ್ಲೂ ಏಳುವುದು ಸಹಜವಲ್ಲವೇ. ಆತ್ಮವಿಶ್ವಾಸ ಮತ್ತು ಪ್ರತಿಯೊಂದು ಜೀವಿಯಲ್ಲೂ ಇರುವ ಆ ಶುದ್ದ ಚೈತನ್ಯ ಗೆಳೆಯರೆ.ಈ ಅಸ್ತ್ರಗಳನ್ನ ತಿಳಿದುಕೊಳ್ಳಿ ನಿಮ್ಮನ್ನ ನೀವು ಅರಿಯಿರಿ. ಜಗತ್ತಿನ ಯಾವುದೇ ವಸ್ತುವನ್ನ ಕ್ಷಣಮಾತ್ರದಲ್ಲಿ ನಿರ್ನಾಮ ಮಾಡುವ ಅಥವಾ ಯಾವುದನ್ನ ಬೇಕಾದರೂ ಸೃಷ್ಠಿಮಾಡುವ ಶಕ್ತಿ ಆ ಅಸ್ತ್ರಗಳಲ್ಲಿದೆ.ನಿಮಗೆ ಬೇಕಾಗಿರುವುದು ಹೋರಾಡುವ ಛಲವೊಂದೇ.ಹೋರಾಟವೇ ಜೀವನ ಸುಖವೇ ಮರಣ.ಹೋರಾಟದಲ್ಲಿ ಸೋತರೆ ಸತ್ತಂತೆ ಅಲ್ಲ ಬದಲಾಗಿ ನಿಮ್ಮ ಜೀವನದಲ್ಲಿ ಒಂದು ಪಾಠವನ್ನ ಕಲಿತಂತೆ ಗೆಳೆಯರೆ.
            ನಮ್ಮೆಲ್ಲರ ಜೀವನದ 15 ರಿಂದ 20 ವರ್ಷಗಳ ವಿದ್ಯಾರ್ಥಿ ಜೀವನವ ಮುಗಿಸುತ್ತಿದ್ದೇವೆ.ಗೋಲ್ಡನ್ ಲೈಫ್ ಅನ್ನೋದರ ಕೊನೆಯ ಘಟ್ಟಕ್ಕೆ ಬಂದಿದ್ದೇವೆ.ನಾವುಗಳು ಪಟ್ಟ ಖುಷಿ,ದುಃಖ,ಗೆಳೆತನ ಪ್ರೀತಿಯ ಸವಿ ಭಾವನೆಗಳು,ಆಡಿದ ಆಟಗಳು,ಎಲ್ಲರೂ ಒಟ್ಟಾಗಿ ಬೆರೆತಾಗ ಪಟ್ಟ ಸಂತೋಷ ಇವೆಲ್ಲವೂ ನಮ್ಮ ಕೋನೇ ಕ್ಷಣಗಳಲ್ಲಿ ಆಸ್ಪತ್ರೆಯ ಹಾಸಿಗೆಯ ಮೇಲೆ ನರಳುತ್ತಾ ಮಲಗಿದ್ದಾಗ ನಮ್ಮ ಜೀವಕ್ಕೆ ಪುನಶ್ಚೇತನ ಕೊಡಬಹುದಾದಂತಹ ಆಮ್ಲಜನಕಗಳು.ಒಮ್ಮೆ ತಿರುಗಿ ನೋಡಿ ಅದೆಷ್ಟು ಮಂದಿ ನಿಮ್ಮ ಜೀವನದ ಪಥದಲ್ಲಿ ಬಂದು ಹೋಗಿದ್ದಾರೆ,ಅದೆಷ್ಟು ಜನರನ್ನು ನೀವು ಮರೆತ್ತಿದ್ದೀರಿ,ಆ ಸಮಯದಲ್ಲಿ ನಿಮ್ಮವರು ಅಂತ ಅಂದುಕೊಂಡ ಅದೆಷ್ಟು ಮಂದಿ ದೂರಸಿದಿದ್ದಾರೆ,ನಿಮ್ಮ ಬಾಲ್ಯದ ಸ್ನೇಹಿತರನ್ನ ಒಮ್ಮೆ ಯೋಚಿಸಿ,ಒಮ್ಮೆ ನಿಮ್ಮ ಮೊದಲನೆಯ ಪ್ರೀತಿಯನ್ನು ಮೆಲುಕುಹಾಕಿ.ಅದೆಷ್ಟು ಚೆಂದ ಅಲ್ಲವೆ.ಮತ್ತೋಮ್ಮೆ ಆ ಜೀವನವ ಜೀವಿಸುವಾಸೆ ಆಗುತ್ತೆ ಅಲ್ಲವೇ.
 
  ಹೌದು ಗೆಳೆಯರೆ ಜೀವನ ಒಂಥರಾ ನದಿ ಇದ್ದ ಹಾಗೆ ಹೊಸ ನೀರು ಬರುತ್ತಿರುತ್ತದೆ,ಹಳೇ ನೀರು ಸಮುದ್ರ ಸೇರುತ್ತಿರುತ್ತದೆ,ಬೇಡವೆಂದರೆ ಆಗದು ಅದು ಪ್ರಕೃತಿಯ ನಿಯಮ. ಆದರೆ ಇದರಲ್ಲೂ ದೇವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆಯೆಂದರೆ ನೆನಪುಗಳು,ನಮ್ಮನ್ನು ಮತ್ತೆ ಮತ್ತೆ ಜೀವಂತವಾಗಿರಿಸೋ ಆ ನೆನಪುಗಳು .ಕಹಿ ನೆನಪುಗಳು ನಾವು ಕಲಿತ ಪಾಠವನ್ನು ನೆನಪಿಸುತ್ತದೆ ನಮ್ಮ ಮುಂದಿನ ಜೀವನದ ದಾರಿದೀಪವಾಗುತ್ತದೆ.ಸವಿ ನೆನಪುಗಳು ನಮ್ಮನ್ನು ಮತ್ತೆ ಜೀವಿಸುವಂತೆ ಮಾಡುವವು.ನಿಮ್ಮ ಪ್ರತಿದಿನದ ಒಂದು ಸ್ವಲ್ಪ ಸಮಯ ನೆನಪುಗಳೊಂದಿ ಕಳೆಯಿರಿ ಆ ನಷೆಯಲ್ಲಿ ಒಂದಷ್ಟು ಸಮಯ ಇಹ ಪರ ಎರಡನ್ನೂ ಮರೆಯಿರಿ.
                 ಜೀವನದ ಈ ಪಯಣದಲಿ ಈಗಾಗಲೇ ಒಂದಷ್ಟು ಮಂದಿ ಕೆಲಸ ಅನ್ನೋದನ್ನ ಪಡೆದು ಸದ್ಯಕ್ಕೆ ಒಂದು ದಡವನ್ನು ಮುಟ್ಟಿದ್ದೀರಿ. ಹಾಗೆಂದು ಅದೇ ದಡದಲ್ಲಿ ತೃಪ್ತರಾದರೆ ಸಾಯುವುದು ಖಂಡಿತ.ಇದಕ್ಕಿಂತ ಒಳ್ಳೆಯ ದಡವನ್ನು ಮುಟ್ಟಲು ನೀವು ಮತ್ತೆ ಅದೇ ಶಕ್ತಿಯೊಂದಿಗೆ ಪಯಣವನ್ನು ಶುರು ಮಾಡಬೇಕಾಗಿದೆ “ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎಂಬುದ ಮರೆಯದಿರಿ ನಿಮ್ಮ ಬಾಳ ಪಯಣದಿ . ಇನ್ನು ಕೆಲವು ಮಂದಿ ಸಂಸಾರವೆಂಬ ದೊಡ್ಡ ಸಾಗರದಲ್ಲಿ ನಮ್ಮ ಜೀವನವೆಂಬ ಪುಟ್ಟ ದೋಣಿಯಲ್ಲಿ ಅಲೆದಾಡುತ್ತಲೇ ಇದ್ದೀವಿ,ಆದರೆ ನಮಗೂ ಒಂದು ದಡವಿರುವುದು ಎಂಬುದನ್ನು ಮರೆಯಬೇಡಿ.”if you are not deserved here then you must be somewhere” ಎಂಬುದನ್ನ ಮರೆಯಬೇಡಿ. ಜೀವನದ ಬ್ಲ್ಯೂಪ್ರಿಂಟ್ ಹಿಡಿದು ಜೀವನವ ನೆಡೆಸುವುದಾದರೆ ನೀವು ಜೀವನದ ಅದೆಷ್ಟೋ ಸಂತೋಷಗಳಿಂದ ವಂಚಿತರಾಗುತ್ತೀರಿ.ಆದರೆ ತಿಳಿಯದೇಬರದ ಜೀವನವನ್ನ ಎದುರಿಸಿದರೆ ನಿಮ್ಮ ಶಕ್ತಿಯೇನೆಂಬುದು ನಿಮಗರಿವಾಗುಬಹುದು. ಆದರೂ ಸಹ ಮುಂದಾಲೋಚನೆ ಇಲ್ಲದೆ ಜೀವನದ ಪ್ರತಿಯೊಂದು ಹಂತವನ್ನೂ ನಾವು ಗೆಲ್ಲಲ್ಲಾಗದು ಹಾಗೆ ಜೀವನದ ಪ್ರತಿ ಕ್ಷಣಗಳಲ್ಲೂ ಮುಂದಾಲೋಚನೆ ನಮ್ಮ ನೆರವಿಗೆ ಬಾರದು ಅಲ್ಲವೆ ಗೆಳೆಯರೆ?
               ದಿ  ಆರ್ಟ್ ಆಫ್ ಲೀವಿಂಗ್ ಪ್ರತಿಯೊಬ್ಬನಲ್ಲೂ ಇದೆ. ಪ್ರತೀಯೊಬ್ಬನೂ ಆ ಆರ್ಟ್ ಅನ್ನು ಹುಟ್ಟಿನಿಂದಲೇ ಕಲಿತು ಬಂದಿದ್ದಾನೆ ಇದನ್ನು 1 ತಿಂಗಳು 1 ವರ್ಷಗಳಲ್ಲಿ ಕಲಿಯುವುದಲ್ಲ ಬದಗಾಲಿ ಹುಟ್ಟಿದ ಕ್ಷಣದಿಂದ ಸಾಯುವ  ಕ್ಷಣದವರೆಗೂ ಕಲಿಯುವ ಫುಲ್ ಟೈಮ್ ಕೋರ್ಸ ಇದು ಎಂಬುದ ಮರೆಯದಿರಿ.ಜೀವನವ ಜೀವಿಸಲು ಬೇಕಾದ ಅನ್ನ ಸಂಪಾದನೆಗೆ  ಒಂದು ಕೆಲಸ ಆದರೆ ಅದೇ ಜೀವನವಲ್ಲ. ಧಾವಂತ,ಗಡಿಬಿಡಿಗಳಲ್ಲಿ ನಿಮ್ಮ ಜೀವನವ ಮುಗಿಸದಿರಿ ತಾಳ್ಮೆ,ಸಂತೋಷಗಳಿಂದ ಜೀವಿಸಿ ನಿಮ್ಮ ಜೀವನವ ಜೀವಿಸಿ ಮಾದರಿಯಾಗಿ,ಸತ್ತ ಮೇಲೂ ಜೀವಿಸಿ.


Comments

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ