ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಈ ಬ್ಲಾಗ್ ಬರೆಯೋಕೆ ಮೂಲ ಪ್ರೇರಣೆ S.L.Bairappa ನವರ "ಧರ್ಮ ಶ್ರೀ" ಕಾದಂಬರಿ.ಈ ಕಾದಂಬರಿಯಲ್ಲಿ ಹಿಂದು ಧರ್ಮ ಎಂದರೇನು ಎಂಬುದರ ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ.ಪ್ರತಿಯೋಬ್ಬ ಹಿಂದುವು ಹಿಂದು ಧರ್ಮದ ಬಗ್ಗೆ ತಿಳಿದುಕೊಳ್ಳುವುದು ಅತೀಮುಖ್ಯ.ಹಿಂದು ಧರ್ಮ ಕೇವಲ ಧರ್ಮವಲ್ಲ "Thats the way of life".ಒಬ್ಬ ಮನುಷ್ಯ ಹೇಗೆ ಬದುಕಬೇಕು ಹಾಗೆ ಬದುಕಿದರೆ ಪ್ರಯೋಜನವೇನು ಎಂಬುದನ್ನ ಈ ಕಾದಂಬರಿ ವಿವರಿಸುತ್ತದೆ.ನಾಯಕ ಮತಾಂತರವಾದ ನಂತರ ಆತನ ಮನಸ್ದಿತಿ,ಆತ ಇನ್ನೂಂದು ಧರ್ಮದ ರೀತಿ ರಿವಾಜುಗಳ್ಳಿಗೆ ಹೂಂದಿಕೊಳ್ಳಲಾಗದೆ ಪಡುವ ಕಷ್ಟ ಎಲ್ಲವೂ ಚಂದವಾಗಿ ಚಿತ್ರಿಸಲಾಗಿದೆ.
ಇಂದು ದುಡ್ಡು,ಸುಖ,ಕೀರ್ತೀಗಳ ಆಮಿಶವನ್ನು ಒಡ್ಡಿ ಜನರನ್ನು ಮತಾಂತರಿಸಲಾಗುತ್ತಿದೆ.ಇದಕ್ಕೆ ನಾವುಗಳು ಮೂಲ ಕಾರಣವನ್ನು ಹುಡುಕಿ ಹೊರಟರೆ ಜನರಲ್ಲಿ ಹಿಂದೂ ಧರ್ಮದ ಬಗ್ಗೆ ಇರುವ ಅಂಧಕಾರ,ಮತ್ತು ಧರ್ಮವೆಂದರೆ ಭಯ ಹುಟ್ಟಿಸುವ tv ಚಾನೆಲ್ ಗಳ bb ಗುರೂಜಿ ಅಂತವರು ಎಂಬುದನ್ನು ನಾವುಗಳು ತೀರ್ಮಾನಿಸಬಹುದು.ಅಂದು ಎಷ್ಟೂ ಹಿಂದುಗಳು ಮೂಲ ಮತವನ್ನು ಬಿಟ್ಟು ಬೌದ್ದ,ಜಿನ ಧರ್ಮಗಳಿಗೆ ಮತಾಂತರ ಹೊಂದಿದರು ಇದಕ್ಕೆ ಕಾರಣ ಕೆಳವರ್ಗದವರ ಶೋಷಣೆ.ಇಂದು ಧರ್ಮ ಎಂಬುದನ್ನು ನಾವುಗಳು ತಿಳಿಯಲೇ ಬೆಕೆಂತಾದರೆ ಒಮ್ಮೆ ರಾಮಾಯಣವನ್ನು ಓದಿದರೆ ಸಾಕು. ಅಲ್ಲಿ ಬಾಲಕಾಂಡದಲ್ಲಿ ಪ್ರತಿಯೊಂದು ವರ್ಗದ ಜನರಿಗೂ ಸಮನಾಗಿ ಗೌರವವನ್ನು ಕೊಡುತ್ತಿರುವುದನ್ನು ನಾವುಗಳು ಗಮನಿಸಬಹುದು.ಆದರೆ ಕಾಲಕ್ರಮೇಣ ಅಲ್ಪಬುದ್ದಿಯವರು ಜಾಸ್ತಿಯಾಗಿ ಧರ್ಮದಲ್ಲಿ ಮೂಢನಂಬಿಕೆಯನ್ನು ಬೆಳಸಿಕೊಂಡು ಆ ನಂಬಿಕೆಯೇ ಸರಿಯೆಂದು ರೂಢಿ ಮಾಡಿದರು ಅದರ ಪ್ರತಿಫಲವೇ ಶೋಷಣೆ.
ನಾವುಗಳು ಗಮನಿಸಿದಂತೆ ಈ ಅಲ್ಪಜ್ಙಾನಿಗಳು ಮಾತ್ರ ಮೇಲುಕೀಳು ಎಂಬ ಭೇಧ ಮಾಡುವುದು ಆ ಅಲ್ಪ ಜ್ಙಾನಿಗಳಿಂದ ಈ ಧರ್ಮವೇ ಸರಿಯಿಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪು.ಧರ್ಮದ ಬಗ್ಗೆ ತಳಿಯಲು ಪ್ರತಿಯೋಬ್ಬರೂ ಸಮಾನ ಅರ್ಹರು. ಮತ್ತು ಪ್ರತಿಯೋಬ್ಬರೂ ತಿಳಿಯಲೇಬೆಕು.
 ಹಿಂದು ಧರ್ಮದಲ್ಲಿ ಇವರು ಹಿಂದು ಧರ್ಮದವರು ಎಂಬುದಕ್ಕೆ ledgerನಲ್ಲಿ ಹೆಸರು ದಾಖಲಿಸಬೇಕಾಗಿಲ್ಲ, ಈ ದೇವರನ್ನು ನಂಬಿದರೇ ಮಾತ್ರ ಮುಕ್ತಿ ನಂಬದವರು ಪಾಪಿಗಳು ಎಂಬುದಿಲ್ಲ,ವೇದ ಉಪನಿಷತ್ ಸಾರುವ ತತ್ವವೇ "ಅಹಂ ಭ್ರಮಾಸ್ಮಿ".
ಗೀತೆಯಲ್ಲಿ ಭಗವಂತ ಹೇಳಿದಂತೆ ನೀನು ಯಾವುದೇ ಧರ್ಮದಲ್ಲಿರು,ಯಾವುದೇ ದೇವರನ್ನು ಪೂಜಿಸು ನಾನು ಆ ದೇವರ ರೂಪದಲ್ಲಿಯೇ ನಿನಗೆ ಮುಕ್ತಿ ಕೊಡುವೆ ಎಂದು ಹೇಳುವ ವಿಶ್ವದ ಒಂದೇ ಒಂದು ಧರ್ಮ ನಮ್ಮ ಹಿಂದು ಧರ್ಮ. ಬೇರೆ ಎಲ್ಲೂ ಸಹ ಇದನ್ನು ಕಾಣಲಾಗುವುದಿಲ್ಲ.
ವಿಶ್ವದಲ್ಲಿ ಎಷ್ಠೇ ಧರ್ಮಗಳು ಹುಟ್ಟಬಹುದು,ಅವು ತುಂಬಾ ಆಕರ್ಷಣೀಯವಾಗಿರಬಹುದು,ಎನೇ ಆದರು ವಿಶ್ವ ಶಾಂತಿ ವಿಶ್ವ ಪ್ರೇಮ ಸಾರುವ ಧರ್ಮ ನಮ್ಮ ಹಿಂದೂ ಧರ್ಮ ಕೊನೆಯಲ್ಲಿ ಒಂದು ಚಿಕ್ಕ ಮಹಾನ್ ಸಂದೇಶ ಕೊಡುವ ಕಥೆ
"ಒಮ್ಮೆ ಒಬ್ಬ ವಿದೇಶಿ ಜಗದ್ಗುರು ಶ್ರೀ ಶ್ರೀ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮೀಜಿ ಅವರ ಬಳಿ ಹೊಗಿ ನಿಮ್ಮ ಧರ್ಮ ತುಂಬಾ ಚೆನ್ನಾಗಿದೆ,ಸಂಸ್ಕ್ರೃತಿ ನನಗೆ ತುಂಬಾ ಇಷ್ಟವಾಗಿದೆ ನನ್ನನ್ನು ನಿಮ್ಮ ಧರ್ಮಕ್ಕೆ ಸೇರಿಸಿಕೊಳ್ಳಿ ಎಂದರಂತೆ ಸ್ವಾಮೀಜಿಗಳು ಮೊದಲು ಒಳ್ಲೆಯ ಕ್ರಿಶ್ಚಿಯನ್ ಆಗು ಒಳ್ಳೆ ಹಿಂದುವಾಗುವೆ ಎಂದರಂತೆ" ಇದು ನಮ್ಮ ಧರ್ಮದ ಸಹಿಷ್ಣುತೆ,ಗೀತೆಯ ಸಾರವನ್ನು ಪ್ರತಿಬಿಂಬಿಸುತ್ತದೆ

Comments

  1. ಮುಂದುವರೆಸಿ ಸಾರ್,ಚೆನಾಗಿದೆ....

    ReplyDelete

Post a Comment

Popular posts from this blog

ಇದು ನನ್ನ ಜೀವನ

ಕನ್ನಡ ಮೀಡಿಯಮ್