ಭಾರತೀಯರೇ ಸಾಕು ಎದ್ದೇಳಿ    ನಮಸ್ಕಾರ ಗೆಳೆಯರೆ," ದೇಶ ಉದ್ದಾರ ಆಗಲ್ಲಪ್ಪ
ಇವನೇನು ವಾಕ್ಯಾ ಹೆಳ್ತಿದಾನೆ ಅಂತ  ಆಶ್ಚರ್ಯ ಪಡುತ್ತಿದ್ದೀರ. ವಾಕ್ಯ ನಮ್ಮ ಭಾರತ ದೇಶದ ಎಷ್ಟೋ ಜನರ ಬಾಯಲ್ಲಿ ಬರೋ ಮಾತಲ್ವ. ಸ್ವಾಮಿ ವಿವೇಕಾನಂದರು ಒಂದು ಮಾತ್ ಹೇಳ್ತಾರೆ "ಮೊದಲು ನೀನು ಸರಿಯಾಗು ಜಗತ್ತು ಸರಿಯಾಗುತ್ತೆ" ಅಂತ.   ದೇಶ ನಮಗೆ ಎನ್ ಎನ್ ಕೊಟ್ಟಿಲ್ಲ  ಒಮ್ಮೆ ಯೋಚಿಸಿ ನೋಡಿ.ಒಮ್ಮೆ ಒಮ್ಮೆ ಸಿಯಾಚಿನ್,ಕಾರ್ಗಿಲ್,LOC ಅಲ್ಲಿ ನಮ್ಮ ದೇಶ, ನಾಡು, ನಮ್ಮ ಪ್ರಾಣಗಳನ್ನು ಕಾಯುತ್ತಿರುವ ನನ್ನ ಯೋಧರನ್ನೊಮ್ಮೆ ಯೋಚಿಸಿ. ಜಗತ್ತಿನಲ್ಲಿ ಎನೇ ಕೊಟ್ಟರು ನೆಮ್ಮದಿ ಇಲ್ಲದ ಜೀವನ ಜೀವನವೇ ಅಲ್ಲ ಅಂಥ ನೆಮ್ಮದಿ, ಸುರತ್ಷತೆ,ಸಂಸ್ಕ್ರತಿ,ಹಿರಿಯರ ಆದರ್ಶ,ಕೆಚ್ಚೆದೆಯ ದೇಶ ಭಕ್ತಿ, ವೀರ ಗುಂಡಿಗೆ ಹೇಳ ಹೊರಟರೆ ಮುಗಿಯದು ಗೆಳೆಯರೆ ಹೀಗೇ ಎಷ್ಟೊ ಕೊಡುಗೆಗಳನ್ನ ನನ್ನ ದೇಶ ನಮಗೆ ಕೊಟ್ಟಿದೆ. ಜಗತ್ತಿನ ಯಾವುದೇ ಭಾಗದಲ್ಲಾದರು ಭಾರತದಂತಹ ದೇಶ ಸಿಕ್ಕೋದಿಲ್ಲ ಗೆಳೆಯರೆ.
ಅಲೆಕ್ಸ್ಯಾಂಡರ್ ಎಲ್ಲರಿಗೂ ಗೊತ್ತಿರುವ ಮಹಾನ್ ಯೋಧ ಆತನಿಗೆ ಮಹಾನ್ ತತ್ವಜ್ನಾನಿ ಅರಿಸ್ಟಾಟೆಲ್ ಒಂದು ಮಾತು ಹೇಳತ್ತಾನೆ ನೀನು ಯಾವ ದೇಶಕ್ಕಾದರು ಹೋಗು ಭಾರತಕ್ಕೆ ಬೇಡ ,ಅಲ್ಲಿನ ಯೋಧರು ದೇಶದ ಮಣ್ಣಿಗಾಗಿ ಪ್ರಾಣವನ್ನೇ ಒತ್ತೇ ಇಡುತ್ತಾರೆ ಅಂತ ಅದೇ ರೀತಿ ಅಲೆಕ್ಸ್ಯಾಂಡರ್ ಗೆ ಸೊಲಿನ ರುಚಿ ತೋರಿಸಿದವರು ಭಾರತೀಯ ರಾಜಾ ಪೌರವ ಅಲ್ವೆ ಗೆಳೆಯರೆ. ಜಗತ್ತಿನಲ್ಲಿರುವ ಜನರಲ್ಲಿರುವುದೆಲ್ಲ ಪರಬ್ರಹ್ಮನೇ, ಎಲ್ಲರೂ ಒಂದೇ, ಅಂತ ಸಾರಿದವರು ಭಾರತೀಯರಾದ ಶ್ರೀ ಶ್ತೀ ಶ್ರೀ ಶಂಕರ ಭಗವತ್ಪಾದರು ಗೆಳೆಯರೆ. ಭಾರತವೆಂದರೇನು ಅಂತ ಜಗದ್ ದರ್ಶನ ಮಾಡಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಜಗತ್ತಿಗೇ ಜೀವನದ ದರ್ಶನ ಮಾಡಿಸಿದವರು. ಇಂತಹ ಅದೇಷ್ಟೊ ರತ್ನಗಳನ್ನು ತಾಯಿ ಭಾರತಿ ದೇಶಕ್ಕೆ ಹೆತ್ತು ಕೊಟ್ಟಿದು ಮರೆಯಬೇಡಿ ಗೆಳೆಯರೆ.
           "
ಇನ್ಕಿಲಾಬ್ ಜಿಂದಾಬಾದ್" ಅಂತ ಹೇಳಿದ ದೇಶಯೊಧ ವೀರ ಭಗತ್ ಸಿಂಗ್ ಅದೆಂತಹ ದೇಶಭಕ್ತಿ, ಮನುಷ್ಯನ ಕಣ್ಣುಗಳಲ್ಲಿ ಅದೆಂತಹ ಉಜ್ವಲತೆ, ನಮ್ಮ ದೇಶ ಕಾಯಲಿರುವುದು, ವೈರಿಯನ್ನೂ ಕೂಡ ಸಾಯಿಸಲಲ್ಲ ಅನ್ನೋದನ್ನ ಜಗತ್ತಿಗೇ ಬ್ರಿಟೀಶ್ ಪಾರ್ಲಿಮೆಂಟಿಂನ ಮೇಲೇ ಬಾಂಬ್ ಎಸೆದು ತಮ್ಮ ದಿಕ್ಕಾರವನ್ನು ಸಾರಿದಂತಹ  ವ್ಯಕ್ತಿ ನಮ್ಮ ಭಗತ್ ಸಿಂಗ್ ಅಲ್ವೆ ಗೆಳೆಯರೆ. ಆಂಗ್ಲರ ವಿರುದ್ದ  ಸೈನ್ಯವನ್ನೇ ಕಟ್ಟಿದ ವ್ಯಕ್ತಿ ಸುಭಾಶ್ ಚಂದ್ರ ಭೋಸರಲ್ಲವೇ. ಪ್ರಾಣ,ಅನ್ನ,ನಿದ್ರೆಗಳ ಹಂಗ ತೊರೆದು ಸ್ವಾತಂತ್ರ್ಯ ಹೋರಾಟ ನೆಡಿಸಿದ ಜೀವಗಳೆಷ್ಟೋ ಗೆಳೆಯರೆ. ಇಂತಹ ಸ್ವಾತಂತ್ರ್ಯವನ್ನು ನಾವು ನಿಬಾಯಿಸುವಲ್ಲಿ ಅದೆಷ್ಟು ಸಾಕಾರ ಗೊಂಡಿದ್ದೇವೆ ಎಂಬುದನ್ನೂಮ್ಮೆ ಯೊಚಿಸಿ ಗೆಳೆಯೆರೆ.
           "
ದಿಲ್ ಮಾಂಗೆ ಮೋರ್" ಹೇಳಿದವ ವೀರ ಯೋಧ ವಿಕ್ರಮ್ ಭಾತ್ರ ಅದೆಂತಹ ಚಲ ಯೋಧನಲ್ಲಿ. ದೇಶದ ಮೇಲಿರುವ ಆಸೆ,ಕಾಮನೆಗಳು ಆತನಿಗೆ ಆತನ ಜೀವನದ ಮೇಲೆ ಇಲ್ಲದಿರುವುದು ಆಶ್ಚರ್ಯ!! ಒಂದು ವೇಳೆ ಇದ್ದರೆ ನಾವುಗಳು ಇಂದು ರ್ನಿಭಯರಾಗಿರುತ್ತಿರಲಿಲ್ಲ ಅಲ್ಲವೇ ಗೆಳೆಯರೆ. ಇಂದು ರ್ನಿಭಯರಾಗಿ ಜೀವಿಸುತಿದ್ದೇವೆ ನಾವುಗಳು ಎಂದರೆ ವಿಕ್ರಮ್ ಭಾತ್ರಾರಂತಹ ಅದೆಷ್ಟೋ ಯೊಧರು ಜಾತಿ,ಮತಗಳಿಲ್ಲದೇ, -40 ಡಿಗ್ರಿ ವಾತಾವರಣದಲ್ಲಿ ಕಡು, ಬೆಟ್ಟ,ಗುಡ್ಡಗಳನ್ನು, ಅವರುಗಳ ಜೀವನದ ಹಂಗ ತೋರೆದು ಕಾಯುತ್ತಿರುವುದಲ್ಲವೇ ಗೆಳೆಯರೆ. ದೇಶದಲ್ಲಿರಲು ನಾವೆಷ್ಟು ಪುಣ್ಯವಂತರು ಎಂದೆನಿಸುವುದಿಲ್ಲವೇ. ದೇಶದ ಪ್ರತಿಯೊಂದು ಮಣ್ಣಿನ ಕಣ ಕಣಗಳು ನಾವು,ನಮ್ಮ ಯೋಧರು ಹೋರಾಡಿ,ಜೀವತೆತ್ತು ಪಡೆದುಕೊಂಡಂತಹವುಗಳೇ ಹೊರತು ದಾಸ್ಯದಿಂದ ಬೇಡಿ ಪಡೆದಂತಹ ನೆಲವಲ್ಲ ಗೆಳೆಯರೆ ದೇಶ,ನೀರು ನಾಡು ಪ್ರತಿಯೊಂದು ನಮ್ಮದೇ ಗೆಳೆಯರೇ ನಮ್ಮದೇ.
           
ಗೆಳೆಯರೆ ನಾನು ಮೇಲೆ ಹೆಳಿರುವುದರಲ್ಲಿ ಎಷ್ಟೋ ನಿಮಗೂ ಗೋತ್ತಿರಬಹುದು ಆದರೆ ನಮ್ಮ ದೇಶದ ಜನ ಹೇಗೆ ಅಂದರೆ ಅವರಿಗೆ ಅವರ ಶಕ್ತಿ ಬೇರೊಬ್ಬರು ತಿಳಿಸದಿದ್ದರೆ ಅದು ಅವರಿಗೆ ತಿಳಿಯುವುದಿಲ್ಲ. ಗೆಳೆಯರೆ ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಧನೇ, ಪ್ರತಿಯೊಬ್ಬನೂ ಆತನ ಶಕ್ತಿಯನ್ನು ಬಳಸಿಕೊಂಡರೆ ಜಗತ್ತೇ ಅವನನ್ನ ಹಿಂಬಾಲಿಸುತ್ತದೇ ಉತ್ತಮ ಉದಾಹರಣೇ ಸ್ವಾಮಿ ವಿವೇಕಾನಂದರು. ಗೆಳೆಯರೆ ದೇಶಹಬ್ಬಗಳನ್ನು ಆಚರಿಸುವ ಹಿನ್ನಲೆ ನಾವುಗಳು ನೆಡೆದುಬಂದಂತಹ ದಾರಿಯನ್ನು ಪುನಾವಲೋಕನ ಮಾಡಿಕೊಳ್ಳುವುದು.ಇದರಿಂದಾಗಿ ನಾವುಗಳು ವಯಕ್ತಿಕವಾಗಿ ಏಳ್ಗೆ ಹೊಂದಬಹುದು,ಇದು ಒಂದು ಸಮಾಜದ ಸರ್ವತೋಮುಖ ಅಭವೃದ್ದಿಗೆ ಅಡಿಗಲ್ಲಾಗುತ್ತದೆ,ಇದರಿಂದ ದೇಶ ಸುಭಿಕ್ಷವಾಗುತ್ತದೆ. ಜಗದ್ಗುರು ಆಗಬಹುದಾದಂತಹ ರಾಷ್ಟ್ರವೇನಾದರಿದ್ದರೆ ಅದು ನನ್ನ ದೇಶ ಗೆಳೆಯರೆ ನನ್ನ ದೇಶ.
         
ಅದೆಷ್ಟೋ ಯುವಜನರ ಶಕ್ತಿ ಇಂದು ಪರದೇಶಿಗಳ ಬೂಟು ಒರೆಸಲು ವ್ಯರ್ತವಾಗುತ್ತಿದೆ,ನಮ್ಮ ದೇಶಕ್ಕೆ ಅಡಿಗಲ್ಲಾಗಬೇಕಾದ ಯುವಜನರು ತಾಯಿನಾಡನ್ನು ಬೆಳೆಸುವ ಬದಲು ಪರದೇಶಿಗಳ ಪಾಲಾಗುತ್ತಿದ್ದಾರೆ.ಗೆಳೆಯರೆ ಕೆಸರನ್ನು ಸ್ವಚ್ಚಮಾಡಬೇಕಾದರೆ ಕೆಸರಿನೊಳಕೆ ಇಳಿಯ ಬೇಕು.ಆದ್ದರಿಂದ ದೇಶ ಸರಿಇಲ್ಲ ಅನ್ನುವ ಬದಲು ಸರಿ ಮಾಡುವ ಕೆಲಸಕ್ಕೆ ನಾವುಗಳು ಆಣಿಯಾಗಬೇಕಾಗಿದೆ. new year,valentinceday ಹೀಗೇ ಎಷ್ಟೊ ದಿನಗಳ್ನಾಚರಿಸುವ ನಾವುಗಳು ಅಂದೆಲ್ಲ ನಮ್ಮ ಜೀವನದ ಹೋಸ ನಿರ್ದಾರಗಳನ್ನು ತೆಗೆದು ಕೊಳ್ಳುತ್ತೀವಿ ಆದರೆ just for a change ಗೆಳೆಯರೆ ಸಾರಿಯ ಸ್ವಾತಂತ್ರ್ಯ ದಿನದಂದು ನಾವುಗಳು ದೇಶಕ್ಕೋಸ್ಕರ ಮಾಡಬಹುದಾದಂತಹ ಸೇವೆಯ ಬಗ್ಗೆ ಕಾರ್ಯೋನ್ಮುಖರಾಗುವ ನಿರ್ದಾರ ತೆಗೆದುಕೊಳ್ಳಬಹುದಲ್ಲವೇ ಗೆಳೆಯರೆದೇಶ ಸೇವೆಯ ಒಂದು  ಚಿಕ್ಕ ಅವಕಾಶ ಸಿಕ್ಕಿದರೂ ಅದನ್ನು ಶ್ರದ್ದೆಯಿಂದ ಮಾಡುವ. ನಮ್ಮಲ್ಲಿ ಪರಿವರ್ತನೆ ಒಳಗಿನಿಂದಲೇ ಆಗಬೇಕೇಹೊರತು ಯಾರೂ ನಮ್ಮನ್ನು ಪರಿರ್ವತಿಸಲಾರರು ಗೆಳೆಯರೆ.
  "
ಕೊಲ್ಲುವವನಿಗಿಂತ ಕಾಯುವವ ದೊಡ್ಡವ" ಅಂತಹ ಕಾಯುವವ ಯೋಧ ಆತನಿಗೆ ನನ್ನ ಲೇಕನ ಅರ್ಪಣೇ...  
                ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶಭಾಶಯಗಳು
                                             
ಜೈ ಹಿಂದ್ ವಂದೇ ಮಾತರಂ

Comments

Popular posts from this blog

ಕನ್ನಡ ಮೀಡಿಯಮ್

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ