ರಾಗಾನ್ವೇಷಣೆ

ಎಲ್ಲೋ ಗುನುಗಿದ ಹಾಡು ಕೂಗಿತು
ತನ್ನ ಬಳಿಗೆ ನನ್ನನು
ಎಂದೂ ಮರೆಯದ ರಾಗ ತಟ್ಟಿತು
ನನ್ನ ಮನಸಿನ ಕದವನು

ಕರೆದ ಹಾಡ ಹುಡುಕಿ ಹೊರಟೆನು
ಕಾಡು ಗುಡ್ಡದ ಪಥದಲಿ
ಮರೆತೇ ಹೋಯಿತು ರಾತ್ರಿ ಹಗಲು
ಅನ್ವೇಷಣೆಯ ಭರದಲಿ

ಕುಸುಮ ಗಂಧವು,ಎಲೆ ಎಸರು
ತಂಪ ನೀಡಿತು ಪಯಣದಿ
ಕಲ್ಲು ಮುಳ್ಳು,ಮೃಗಜಂತು
ಬಂದು ಹೋದವು ಸಂಗದಿ

ದಾಟಿದ ನದಿಗಳೆಷ್ಟೋ
ನೆಡೆದ ಮೈಲುಗಳೆಷ್ಟೋ
ಕರ್ಮ ಸವೆಯಿತು ದೇಹ ದಣಿಯಿತು
ಕಳೆದ ದಿನದ ಜೊತೆಯಲಿ

ಕಾಲ ಬಂದಿತು ಜೀವಹೊರಟಿತು
ಮಗದೊಂದು ಪಯಣದ ಪಥದಲಿ
ಕರೆದ ರಾಗದ ರಾಗವಾಗುವೆ
ಎಂಬ ನಂಬುಗೆಯ ಜೊತೆಯಲಿ

ಎಲ್ಲೋ ಗುನುಗಿದ ಹಾಡು ಕೂಗಿತು
ತನ್ನ ಬಳಿಗೆ ನನ್ನನು
ಎಂದೂ ಮರೆಯದ ರಾಗ ತಟ್ಟಿತು
ನನ್ನ ಮನಸಿನ ಕದವನುComments

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್