ಚೇತನಕ್ಕೊಂದು ನಮಸ್ಕಾರ


 ಫೆಬ್ರವರಿ 2 2013 ಒಂದು ಮಹಾನ್ ಚೇತನ ಈ ಭೂಮಿಗಿಳಿದು 150 ವರ್ಷಗಳು ಕಳೆಯುತ್ತವೆ.ಭೋಗ ಸಿದ್ದಾಂತವನ್ನೇ ಜೀವನದಲ್ಲಿ ಅಳವಡಿಸಿಕೊಂಡು ಅದರಲ್ಲೇ ಮುಳುಗಿ ಹೋಗಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳ ಜನರ ಬಾಳಲ್ಲಿ ಹೊಸ ಚಿಂತನೆಯ,ಸತ್ಯದ ಅರಿವ ಮೂಡಿಸಿ,ಭಾರತವೆಂದರೇನು ಎಂಬುದ ಇಡೀ ಜಗತ್ತಿಗೇ ಸಾರಿದ ಆ ಭಾರತ ಮಾತೆಯ ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಭಾರತದಲ್ಲಿ ವಿಜೃಂಬಣೆಯಿಂದ ನೆಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ಈ ದೇಶದವನು ನಾನು ಎಂಬುದನ್ನು ಹೇಳುವಾಗ ನನ್ನ ಎದೆ ಪ್ರೀತಿಯಿಂದ ತುಂಬಿಬರುತ್ತದೆ,ಸ್ವರ ಗದ್ಗದಿತವಾಗುತ್ತದೆ,ರಾಷ್ಟ್ರ ಪ್ರೇಮದ ಚಿಲುಮೆ ನನ್ನೆದೆಯಲ್ಲಿ ಉಕ್ಕುತ್ತದೆ.
            ಗೆಳೆಯರೆ ಅಂದು ಚಿಕಾಗೋದಲ್ಲಿ ಕೇವಲ 3 ನಿಮಿಷದ ಭಾಷಣದಲ್ಲಿ ಇಡೀ ವಿಶ್ವವನ್ನೇ ಭಾರತದೆಡೆಗೆ ನೋಡುವಂತೆಮಾಡಿದ ಆ ಮಹಾನ್ ವ್ಯಕ್ತಿಯ ಛಲವೆಂತಹುದು?ದಾಸ್ಯದಲ್ಲಿದ್ದ ಭಾರತದ ಜನಕ್ಕೆ ಅವರುಗಳ ಶಕ್ತಿಯನ್ನು ಅವರಿಗೇ ದರ್ಶನ ಮಾಡಿಕೊಟ್ಟ ಆ ಚೇತನದ ಬಲವೆಂತಹುದು?ಹಿಂದೂ ಧರ್ಮದ ಸತ್ಯ ದರ್ಶನ ಮಾಡಿಕೊಟ್ಟ ಆ ಚೇತನದ ಜ್ಞಾನವೆಂತಹುದು?ವಿಶ್ವ ಮಾನವನಾಗಿ ಕಂಡ ಆ ಮಹಾತ್ಮನ ಮಾನವೀಯತೆ ಎಂತಹುದು?ಅಬ್ಬಾ!! ಬದುಕಿದ್ದು ಕೇವಲ 30 ವರ್ಷಗಳಾದರೂ ಸಾಧನೆಯ ಶಿಖರವನ್ನೇರಿದ ಸ್ವಾಮಿ ವಿವೇಕಾನಂದರಿಗೆ ನೂರೊಂದು ನಮಸ್ಕಾರಗಳು.
           ಸ್ವಾಮಿ ವಿವೇಕಾನಂದರು ರೋಮ್ ನಗರದಿಂದ ಭಾರತಕ್ಕೆ ವಾಪಾಸಾಗಿ ಮತ್ತೆ ದೇಶವನ್ನು ಕಟ್ಟುವ ಕೆಲಸ ಶುರುಮಾಡಿದರು. ನಿರಂತರ ಪಯಣ,ಧೀರ್ಘ ಭಾಷಣ,ಹವಾಮಾನ ಬದಲಾವಣೆ,ವರ್ಷದಲ್ಲಿ ಅಷ್ಟೂ ದಿನ ಸಭೆ ಸಮಾರಂಭಗಳು,ಮಿತ್ರ ಸಂನ್ಯಾಸಿಗಳೊಂದಿಗೆ ಸಂವಾದ,ಪಂಡಿತರೋಡನೆ ವಾದ,ನೆರೆದ ಜನಸ್ತೊಮದ ಮುಂದೆ ಸಿಂಹದಹಾಗೆ ನೆಡೆಯುತ್ತ ಪ್ರತಿಯೊಬ್ಬರ ಎದೆಯೊಳಗೆ ಹೊಕ್ಕಿ,ಮಲಗಿದ್ದ ಮನವ ಬಡಿದ್ದೆಬ್ಬಿಸುವ ಮಾತುಗಳು.ಹೀಗೇ ಆಯಾಸವನ್ನೇ ಲೆಕ್ಕಿಸದೆ ನಿರಂತರ ಭಾರತಾಂಬೆಯ ಪೂಜೆಯನ್ನ ಮಾಡಿದ ಪುಣ್ಯಾತ್ಮ ಸ್ವಾಮಿ ವಿವೇಕಾನಂದರು.ಒಂದಷ್ಟು ದಿವಸ ಅವರ ಆರೋಗ್ಯ ಸ್ಧಿತಿ ತೀರ ಹದಗೆಟ್ಟು ಡಾರ್ಜಲಿಂಗ್ ಅಲ್ಲಿ ವಿರ್ಶಮಿಸಲು ಹೋದ ವಿವೇಕಾನಂದರು ಪೂರ್ತಿ ಗುಣವಾಗದಿದ್ದರೂ ಮತ್ತೆ ದೇಶ ಕಟ್ಟಲು ಹೊರಟ ಆ ಚೇತನದ ಅಂಕಿತಕ್ಕೆ ಸರಿಸಾಟಿಯಿಲ್ಲ.ಪರಿವ್ರಾಜಕರಾಗಿ ಇಡೀ ದೇಶವನ್ನೇ ಸುತ್ತಿ ಭಾರತದ ನರನಾಡಿಗಳಲ್ಲೂ ಬೆರೆತು ಭಾರತವನ್ನೇ ಪ್ರತಿಬಿಂಬಿಸಿದ ಚೇತನ ಸ್ವಾಮಿ ವಿವೇಕಾನಂದರು.ಒಮ್ಮೆ ವಿವೇಕಾನಂದರು ಚಿಕ್ಕವರಾಗಿದ್ದಾಗ ಅವರ ತಂದೆಯ ಸಾರೋಟಿನ ಮೇಲೆ ಅದರ ಸಾರಧಿಯಂತೆ ಕುಳಿತಾಗ ಅವರ ತಂದೆ ಸುಮ್ಮನೆ ತಮಾಷೆಗೆ “ದೊಡ್ಡವನಾದ ಮೇಲೆ ಏನ್ ಆಗ್ತಿಯೋ” ಎಂದು ಕೇಳಿದಾಗ “ನಾನು ಸಾರೋಟು ನೆಡೆಸುವವನಾಗುತ್ತೀನಿ” ಎಂದಿದಕ್ಕೆ ಅವರ ತಂದೆ ಕೋಪದಿಂದ ಹೊಡೆಯಲು ಹೊರಟರಂತೆ ತಕ್ಷಣ ಅವರ ತಾಯಿ “ಏಕೆ ಹೊಡೆಯುತ್ತೀರಿ ಆತ ಭಾರತವನ್ನೇ ನೆಡೆಸೋ ಸಾರಧಿಯಾಗಬಹುದು” ಎಂದರಂತೆ.
ಆ ಮಾತನ್ನು ಅಕ್ಷರ ಸಹ ಸತ್ಯಮಾಡಿ ಭಾತವನ್ನೇ ನೆಡೆಸೊ ಸಾರಧಿಯಾದವರು ಸ್ವಾಮಿ ವಿವೇಕಾನಂದರು.
           ಸ್ವಾಮಿ ವಿವೇಕಾನಂದರು ಜಗತ್ತಿನ ಪ್ರತಿಯೊಬ್ಬರಲ್ಲಿಯೂ ಇದ್ದಾರೆ ಜಾಗೃತಗೊಳಿಸಬೇಕಷ್ಟೆ.ಅವರ ಕನಸುಗಳು ನಮ್ಮ ಗುರಿಗಳಾಗಬೇಕು,ಅವರ ಆದರ್ಶ ನಮ್ಮ ಜೀವನದ ಮಾರ್ಗದರ್ಶನವಾಗಬೇಕು,ಅವರ ಚಿಂತನೆಗಳ ಸಾಕಾರ ನಮ್ಮ ಪೂಜೆಯಾಗಬೇಕು ಈ ನಿಟ್ಟಿನಲ್ಲಿ ಆ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬ ಸಾಕಾರಗೊಳ್ಳಬೇಕು. ಭಾರತದ 60% ಯುವಕರಲ್ಲಿ ಸ್ವಾಮಿ ವಿವೇಕಾನಂದರ ಹೆಸರೇ ಅವರಲ್ಲಿ ಒಂದು ಸಂಚಲನ ಮೂಡಿಸುತ್ತದೆ.ಮಲಗಿದ್ದ ನಾವೆಲ್ಲ ಎದ್ದು ದೇಶದ ಕೆಲಸದಲ್ಲಿ ಕಾರ್ಯೋನ್ಮುಖರಾಗುವ ಅಗತ್ಯವುಂಟು ಗೆಳೆಯರೆ.ಈ ದೇಶಕ್ಕೆ ನಮ್ಮ ಹಿಂದಿನವರು ಮಾಡಿದ ಸೇವೆ,ಪಟ್ಟ ಪರಿಶ್ರಮ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಈಗಿನ ಯುವಜನಾಂಗದ ಮೇಲಿದೆ.ಅದಕ್ಕೆ ಸ್ವಾಮಿ ವಿವೇಕಾನಂದರೆನ್ನುವ ಚೇತನ ನಮಗೆ ಶಕ್ತಿ ನೀಡಬಲ್ಲದು.ಇಷ್ಟು ದಿನ ಕಳೆದದ್ದು ಕಳೆದು ಹೊಯಿತು ಭವಿಷ್ಯ ನಮ್ಮ ಕೈಲಿದೆ.ಭವ್ಯ ಭಾರತದ ಸಂಸ್ಕೃತಿಯ ಉಳಿವು,ಹಿಂದುತ್ವದ ಉಳಿವು ಇವೆಲ್ಲವೂ ನಮ್ಮ ಕೈಲಿದೆ ಗೆಳೆಯರೆ.ಸ್ವಾಮಿ ವಿವೇಕಾನಂದರೆನ್ನುವ ಅ ಚೇತನನ್ನು ತಿಳಿಯಿರಿ,ಆ ಚೇತನದ ಬಗ್ಗೆ ಅರಿವು ಮಾಡಿಕೊಳ್ಳಿ ಇದರಿಂದ ನಿಮ್ಮಲ್ಲಿರುವ ಆ ಸೂಪ್ತ ಚೇತನವ ಕಂಡುಕೊಳ್ಳಿ.
          ಕುವೆಂಪು,ಸುಭಾಷ್ ಚಂದ್ರ ಭೂಸ್,ರವೀಂದ್ರನಾಥ ಠಾಕೂರ್,ಸಾವಾರ್ಕರ್,ಗಾಂಧೀಜಿ ಇನ್ನೂ ಅದೆಷ್ಟೋ ಮಂದಿ ಆ ಚೇತನವನ್ನ ಅರಿತವರೇ ಅವರ ಕೈಯಲ್ಲಿ ಆದ ಪುಣ್ಯ ಕಾರ್ಯಗಳು,ಸಾಧನೆಗಳು,ದೇಶಕ್ಕೆ ಮಾಡಿದ ಸೇವೆಗಳು ನಿಮ್ಮಮುಂದಿದೆ.ಅರಿಯಿರಿ ಸತ್ಯವನ್ನ,ಅರಿಯಿರಿ ನಿಮ್ಮೊಳಗಿನ ಸ್ವಾಮಿ ವಿವೇಕಾನಂದರನ್ನ,ಅರಿಯಿರಿ ಭಾರತವನ್ನ,ಅರಿಯಿರಿ ನೀವೊಬ್ಬ ಹಿಂದುವೆನ್ನುವುದನ್ನ .”ಓ ನನ್ನ ಚೇತನ ಆಗು ನೀ ಅನಿಕೇತನ”(ಕುವೆಂಪು).
           

Comments

Popular posts from this blog

ಹಿಂದೂ ಧರ್ಮದ ದರ್ಶಿಕೆ "ಧರ್ಮ ಶ್ರೀ"

ಇದು ನನ್ನ ಜೀವನ

ಕನ್ನಡ ಮೀಡಿಯಮ್