ಮಾಯಾ ಲೀಲೆ

ಬೆಳದಿಂಗಳ ಮಾದಕತೆಯ ಸ್ಖಲನಕೆ
ಸೊಕ್ಕುತಿಹುದು ಮನದ ಕುದುರೆಯು
ಚಂದಿರನ ಬೆಳಗಿನ ಹಾಲಿನೌತಣಕೆ
ಉಕ್ಕುತಿಹುದು ಭಾವನೆಗಳ ಸಾಗರವು
ತಮವು ಮೀರಿ ಅಪ್ಪಿಹುದು ಕತ್ತಲು ಜಗವ
ನಿರ್ಭಯದಿ ಕಾಯುತಿಹನು ಶಶಿಯು ಆಗಸವ
ಕಪ್ಪು ಜಡಗಟ್ಟಿ ತುಂಬಿಹುದು ಚಿತ್ತವ
ಚಿದ್ರೂಪವು ಬೆಳಗುತಿಹುದು ಆದಿಅಂತ್ಯವ
ಸುತ್ತಣ ತನಿನೀಲಿಯ ಬೆಳಗಲಿ ಅಸ್ಪಷ್ಟ ಆಕಾರ
ಸನಾತನದ ಧರ್ಮದ ಬೆಳಕಲಿ ಸತ್ಯದ ಓಂಕಾರ
ಮೋಡಗಳ ಮುಸುಕಿನ ಲೀಲೆಗೆ ಚಂದಿರನು ಅವಿತಿಹನು
ಭವತಾರಿಣಿಯ ಮಾಯೆಯ ಮುಸುಕಿಗೆ ಹುಸಿಯಾಗಿಹುದು ಸತ್ಯವು
ಕಾರ್ಗತ್ತಲ ಗರ್ಭವ ಬಗೆದು ಅವತರಿಸುವುದೊಂದೇ ಕಾಂತಿಯು
ಅದೇ ಇಂದಿನ ಸೂರ್ಯನು ಹಿಂದಿನ ಚಂದ್ರನು ಮುಕ್ತಿಯ ಶಾಂತಿಯು ಮುಕ್ತಿಯ ಶಾಂತಿಯು

Comments

Post a Comment

Popular posts from this blog

ಜೀವನ ಜಾತ್ರೆ

ನನ್ನ ಕಲ್ಪನೆ